fbpx
ಸಮಾಚಾರ

ಬಾಲ್ ವಿಕೆಟ್‌ಗೆ ಬಡಿಯದಿದ್ದರೂ ಔಟ್- IPL ಇತಿಹಾಸದಲ್ಲೇ ವಿಚಿತ್ರ ರನೌಟ್, ವಿಡಿಯೋ ವೈರಲ್!

IPL ನಲ್ಲಿ ವಿಚಿತ್ರ ರನೌಟ್ ಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ. ವಿಕೆಟ್ ಗೆ ಚೆಂಡು ಬಡಿಯದಿದ್ದರೂ ಬ್ಯಾಟ್ಸ್ ಮನ್ ರನೌಟ್ ಆಗಿರುವ ವಿಚಿತ್ರ ಘಟನೆ ನಡೆದಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಅಮಿತ್ ಮಿಶ್ರಾ ವಿಚಿತ್ರವಾಗಿ ರನೌಟ್ ಆಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

ಹೈದರಾಬಾದ್ ವಿರುದ್ಧ ಗೆಲ್ಲಲು ಡೆಲ್ಲಿ ತಂಡಕ್ಕೆ ಕೊನೆಯ ಓವರ್ ನಲ್ಲಿ 5 ರನ್ ಬೇಕಿತ್ತು. ಈ ವೇಳೆ 20ನೇ ಓವರ್ ಅನ್ನು ಖಲೀಲ್ ಅಹಮದ್ ಬೋಲಿಂಗ್ ಮಾಡಿದರು. ಓವರ್ ನ 4ನೇ ಎಸೆತದಲ್ಲಿ ಅಮಿತ್ ಮಿಶ್ರಾ ಸಂಪೂರ್ಣ ಬೀಟ್ ಆದರು ಬಳಿಕ ಚೆಂಡು ಕೀಪರ್ ಕೈಸೇರಿತು. ಹಾಗಿದ್ದರೂ ಒಂದು ರನ್ ಕದಿಯಲು ಮಿಶ್ರಾ ಮುಂದಾದರು..

 

 

ಈ ವೇಳೆ ಕೀಪರ್ ವೃದ್ಧಿಮಾನ್ ಸಹ ರನೌಟ್ ಮಾಡಲು ಯತ್ನಿಸಿದ್ರು. ಆದ್ರೆ ಅವರು ಎಸೆದ ಬಾಲ್ ವಿಕೆಟ್ ಗೆ ತಾಗದೇ ಖಲೀಲ್ ಕೈಸೇರಿತ್ತು. ಈ ವೇಳೆ ಖಲೀಲ್ ಹಿಂದೆ ತಿರುಗಿ ಮಿಶ್ರಾ ರನೌಟ್ ಮಾಡಲು ಯತ್ನಿಸಿದ್ರು. ಆದ್ರೆ ಆ ಬಾಲ್ ವಿಕೆಟ್ ಗೆ ಬೀಳದೇ ಮಿಶ್ರಾ ಕಾಲಿಗೆ ತಾಗಿತ್ತು. ಚೆಂಡು ಅಮಿತ್ ಮಿಶ್ರಾಗೆ ತಗುಲಿದ ಕೂಡಲೇ SRH ತಂಡದ ಆಟಗಾರರು ರನೌಟ್ ಗೆ ಅಪೀಲ್ ಮಾಡಿದರು. ಅಂಪೈರ್ ಸತ್ಯಾಂಶ ತಿಳಿದುಕೊಳ್ಳಲು ಮೂರನೇ ಅಂಪೈರ್ ಮೊರೆ ಹೋದರು. ಅಲ್ಲಿ ನಿಜಾಂಶ ಹೊರಬಂದಿದ್ದು ಅಮಿತ್ ಮಿಶ್ರಾ ಔಟ್ ಎಂದು ನಿರ್ಧಾರಕ್ಕೆ ಬರಲಾಗಿತ್ತು.

ಬ್ಯಾಟ್ಸ್ ಮನ್ ಗಳು ಪಿಚ್ ನ ಮಧ್ಯದಲ್ಲಿ ಓಡಬಾರದು ಎಂದು ನಿಯಮವಿದೆ, ಅಲ್ಲದೆ ಕ್ಷೇತ್ರ ರಕ್ಷಣೆಗೆ ಅಡ್ಡಿ ಪಡಿಸಬಾರದು ಎಂಬ ನಿಯಮ ಕೂಡ ಇದೆ. ಹಾಗಾಗಿ ಉದ್ದೇಶಪೂರ್ವಕವಾಗಿ ಔಟ್ ಆಗುವುದನ್ನು ತಪ್ಪಿಸಿಕೊಳ್ಳಲು ಪಿಚ್ ನ ಮಧ್ಯದಲ್ಲಿ ಓಡಿದರು ಎಂದು ತೀರ್ಮಾನಿಸಿ ಮಿಶ್ರಾ ಅವರನ್ನು ಔಟ್ ಎಂದು ಘೋಷಿಸಲಾಯಿತು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top