fbpx
ಸಮಾಚಾರ

“ನನ್ನ ಎರಡನೇ ಶತಕ ಕೈತಪ್ಪಲು ಸೆಹ್ವಾಗ್ ಕಾರಣ” ಅನಿಲ್ ಕುಂಬ್ಳೆ ಹೀಗೆ ಹೇಳಿದ್ದು ಯಾಕೆ?

ವೀರೇಂದ್ರ ಸೆಹ್ವಾಗ್ ಎಂದರೆ ಸ್ಪೋಟಕ ಬ್ಯಾಟಿಂಗ್ ಗೆ ಉದಾಹರಣೆ. ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದರೆ ಎದುರಾಳಿಯ ಬೌಲರ್ ಗಳನ್ನೂ ಧೂಳಿಪಟ ಮಾಡುವುದನ್ನೇ ಕೆಲಸ ಮಾಡಿಕೊಂಡಿದ್ದ ಸೆಹ್ವಾಗ್ ಮೇಲೆ ಆರೋಪವೊಂದು ಕೇಳಿಬಂದಿದೆ.. ಹಾಗಂತ ಇದೇನೋ ಸೀರಿಯಸ್ ಆರೋಪ ಎಂದು ಭಾವಿಸಬೇಡಿ, ಬದಲಾಗಿ ಇದೊಂದು ತಮಾಷೆಯ ಆರೋಪ.

“ಸೆಹ್ವಾಗ್ ಮಾತು ಕೇಳಿದ್ದಕ್ಕೇ ಟೆಸ್ಟ್ ಕ್ರಿಕೆಟ್ ನಲ್ಲಿ ನನಗೆ ಎರಡನೇ ಶತಕ ಗಳಿಸುವ ಅವಕಾಶ ಕೈತಪ್ಪಿತು” ಎಂದು ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಸಂದರ್ಶನವೊಂದರಲ್ಲಿ ತಮಾಷೆಯಾಗಿ ಹೇಳಿಕೊಂಡಿದ್ದಾರೆ. ವಾಟ್ ದ ಡಕ್ ಶೋನಲ್ಲಿ ಸೆಹ್ವಾಗ್ ಮತ್ತು ಕುಂಬ್ಳೆ ಜೊತೆಯಾಗಿ ಪಾಲ್ಗೊಂಡಿದ್ದರು, ಈ ವೇಳೆ ತಮಾಷೆಯಾಗಿ ಪರಸ್ಪರ ಕಾಳೆದುಕೊಳ್ಳುತ್ತಿರುವಾಗ ಕುಂಬ್ಳೆ ಈ ರೀತಿ ಹೇಳಿದರು.

“ಸೆಹ್ವಾಗ್ ನನಗೆ ತಮ್ಮಂತೆ ಸ್ಪೋಟಕ ಹೊಡೆತಕ್ಕೆ ಕೈ ಹಾಕಲು ಹೇಳಿದರು. ಹಾಗಾಗಿ ಟೆಸ್ಟ್ ನಲ್ಲಿ ಮತ್ತೊಂದು ಶತಕ ಮಾಡುವ ಅವಕಾಶ ಕಳೆದುಕೊಂಡೆ. ಸದ್ಯ,ಅವರು ನಾನು ಬೌಲಿಂಗ್ ಮಾಡುವಾಗ ಸಲಹೆ ಕೊಡುತ್ತಿರಲಿಲ್ಲ. ಕೊಡುತ್ತಿದ್ದರೆ ಅಷ್ಟೇ ನನ್ನ ಕತೆ” ಎಂದು ಕುಂಬ್ಳೆ ಸೆಹ್ವಾಗ್ ಕಾಲೆಳೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top