fbpx
ಸಮಾಚಾರ

ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿ- ಆತ “ಉಗ್ರ’ನಲ್ಲ, ವಾಚ್‌ ವ್ಯಾಪಾರಿ.

ರಿಯಾಜ್​ ಅಹಮದ್​​ ನಾಯಂಡಳ್ಳಿ ನಿವಾಸಿಯಾಗಿದ್ದು, ಮೆಜೆಸ್ಟಿಕ್​​ನಲ್ಲಿ ವಾಚ್​ ರಿಪೇರಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆತನ ಬಳಿ ಬಿಬಿಎಂಪಿ ಪರವಾನಗಿ(ಲೈಸನ್ಸ್​​) ಕೂಡ ಇದೆ. ಹಲವು ವರ್ಷಗಳಿಂದ ಹೊಟ್ಟೆಪಾಡಿಗಾಗಿ ಮೆಜೆಸ್ಟಿಕ್​ನಲ್ಲಿ ವಾಚ್​​ ರಿಪೇರಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಕಳೆದ 30 ವರ್ಷಗಳಿಂದ ಮೆಜೆಸ್ಟಿಕ್​​ನಲ್ಲಿ ವಾಚ್​​​ ರೀಪೆರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸಾಮಾನ್ಯ ವ್ಯಕ್ತಿ ಎಂದು ವಿಚಾರಣೆಯ ಮೂಲಕ ತಿಳಿದು ಬಂದಿದೆ. ಮಾಧ್ಯಮಗಳಲ್ಲಿ ಆತನ ಪೋಟೊ ಪ್ರಸಾರವಾಗುತ್ತಿದ್ದ ಹಿನ್ನೆಲೆ ರಿಯಾಜ್​​​ ಬೆಂಗಳೂರಿನ ಪೊಲೀಸ್​​ ಆಯುಕ್ತರಾದ ರವಿ ಡಿ. ಚೆನ್ನಣ್ಣನವರ್​​​​​​​​​ ಅವರನ್ನು ಭೇಟಿ ಮಾಡಿ ನಿಲ್ದಾಣದಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ.

 

 

“ಮೆಟ್ರೋ ನಿಲ್ದಾಣದ ಸಿಬ್ಬಂದಿ ನನ್ನನ್ನು ಪರಿಶೀಲನೆ ನಡೆಸುವಾಗ ಟೋಫಿ ತೆಗಿಸಿದರು. ಆದ್ದರಿಂದ ನನಗೆ ಕೊಂಚ ಇರಿಸುಮುರಿಸು ಆಯಿತು. ಅದಕ್ಕಾಗಿಯೇ ಒಳಗೆ ಹೋಗುವಾಗ ಎರಡು ಬಾರಿ ಹಿಂದೆ ತಿರುಗಿ ನೋಡಿದೆ. ಅದನ್ನು ನೋಡಿ ನನ್ನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿರುವವರ ವಾಹಿನಿಗಳ ವಿರುದ್ಧ ಕ್ರಮ ಜರಿಗಿಸಬೇಕು” ಎಂದು ರಿಯಾಜ್ ಡಿಸಿಪಿ ಎದುರು ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚೆನ್ನಣ್ಣನವರ್‌, ಮೇ 6ರಂದು ಸಂಜೆ 7.14ರ ಸುಮಾರಿಗೆ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದ ತಪಾಸಣಾ ಸ್ಥಳದಲ್ಲಿ ಅನುಮಾನಾಸ್ಪದವಾಗಿ ವರ್ತನೆ ತೋರಿದ ವ್ಯಕ್ತಿಯ ಫೋಟೋ ಹಾಗೂ ವಿಡಿಯೋಗಳನ್ನು ಪ್ರಸಾರ ಮಾಡಿದ ದೃಶ್ಯ ಮಾಧ್ಯಮ, ಆತನನ್ನು ಶಂಕಿತ ಉಗ್ರ ಎಂದು ಬಿಂಬಿಸಿತ್ತು. ಅದನ್ನು ಗಮನಿಸಿದ ರಿಯಾಜ್‌ ಅಹಮದ್‌, ಖುದ್ದು ಉಪ್ಪಾರಪೇಟೆ ಠಾಣೆಗೆ ಹಾಜರಾಗಿ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ವದಂತಿಗಳಿಗೆ ಕಿವಿಗೊಡಬೇಡಿ, ಅದೆಲ್ಲಾ ಸುಳ್ಳು. ಜನರು ಭಯಪಡುವ ಅಗತ್ಯವಿಲ್ಲ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top