fbpx
ಸಮಾಚಾರ

ಕರ್ನಾಟಕದ ಆಟಗಾರರು ಗುಂಪಲ್ಲಿ ನಿಂತು ಕನ್ನಡ ಮಾತನಾಡಿದಾಗ.

ಐಪಿಎಲ್ ಹನ್ನೆರಡನೇ ಆವೃತ್ತಿಯಲ್ಲಿ ವಿವಿಧ ತಂಡಗಳ ಪರವಾಗಿ ಭಾಗವಹಿಸುತ್ತಿರುವ ಕನ್ನಡಿಗರು ಭರ್ಜರಿಯಾಗಿ ಪ್ರದರ್ಶನ ನೀಡುತ್ತಿದ್ದಾರೆ. ತಂಡಗಳ ವಿಚಾರವಾಗಿ ಬೇರೆ ಬೇರೆಯಾಗಿದ್ದರೂ ನಾಡಿನ ವಿಚಾರಕ್ಕೆ ಬಂದರೆ ಅವರೆಲ್ಲಾ ಕನ್ನಡಿಗರು.

ಕಳೆದ ವಾರ ನಡೆದ ಕೋಲ್ಕತ್ತಾ ಮತ್ತು ಪಂಜಾಬ್ ನಡುವಿನ ಪಂಡ್ಯಾದಲ್ಲಿ ಕನ್ನಡಿಗರ ಸಮಾಗಮವಾಗಿದೆ . ಕೊಲ್ಕತ್ತಾ ಆಟಗಾರರಾದ ರಾಬಿನ್ ಉತ್ತಪ್ಪ, ಪ್ರಸಿದ್ಧ ಕೃಷ್ಣ, ಕರಿಯಪ್ಪ ಮತ್ತು ಪಂಜಾಬ್ ತಂಡದ ಆಟಗಾರರಾದ ಕೆಎಲ್ ರಾಹುಲ್, ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್ ಒಟ್ಟಿಗೆ ಕಾಲಕಳೆದಿದ್ದಾರೆ.

 


 

ಕನ್ನಡಿಗ ಸಹೋದ್ಯೋಗಿಗಳೊಡನೆ ಕಳೆದ ಸಮಯದ ಬಗ್ಗೆ ರಾಬಿನ್ ಉತ್ತಪ್ಪ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದು, “ಗುಂಪಲ್ಲಿ ನಿಂತು ಕನ್ನಡ ಮಾತನಾಡುವ ಮಜವೇ ಬೇರೆ ” ಎಂದು ಬರೆದು ತಾವು ಆರು ಜನ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕನ್ನಡಿಗರ ಕನ್ನಡಾಭಿಮಾನಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top