fbpx
ಸಮಾಚಾರ

ಅಂದು ಬಡತನದ ಬೇಗೆಯಲ್ಲಿ ದನ ಕಾಯುತ್ತಿದ್ದ ಹುಡುಗಿ ಐಎಎಸ್ ಆಫೀಸರ್ ಆದ ಯಶೋಗಾಥೆ.

ಸಾಧನೆ ಎನ್ನುವುದು ಒಂದು ಅದ್ಭುತ ವಿಷಯ. ನಾವು ಅನೇಕ ಸಾಧಕರ ಸ್ಪೂರ್ತಿದಾಯಕ ಕತೆಗಳನ್ನು ಕೇಳೀರುತ್ತೇವೆ ಓದಿರುತ್ತೇವೆ. ವಿಶೇಷವಾಗಿ ವಿದ್ಯಾರ್ಥಿಗಳಾಗಿದ್ದಾಗ ತರಗತಿಗಳಲ್ಲಿ ಅವರ ಭವಿಷ್ಯಕ್ಕೆ ಸ್ಪೂರ್ತಿಯಾಗಲು ಅನೇಕ ಕತೆಗಳನ್ನು ಕೇಳಿರುತ್ತಾರೆ. ಇಂದಿನ ಕತೆಯೂ ಕೂಡ ಅಷ್ಟೇ ಆಸಕ್ತಿದಾಯಕ ಕತೆಯಾಗಿದೆ. ಸಿ.ವನಮತಿಯವರ ಜೀವನವು ಅಂತಹ ವಿಸ್ಮಯಕಾರಿ ಸ್ಪೂರ್ತಿದಾಯಕ ಉದಾಹರಣೆಯಾಗಿದ್ದು ಅದು ನಿಮ್ಮ ಭರವಸೆಯನ್ನು ಇಮ್ಮಡಿಗೊಳಿಸುತ್ತದೆ.

 

 

ಆರ್ಥಿಕವಾಗಿ ಅಷ್ಟೇನೂ ಶಕ್ತಿಯಾಗಿರದ ಕೇರಳದ ಒಂದು ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಸಿ. ವನಮತಿ ತನ್ನದೇ ಆದ ಅನೇಕ ತೊಂದರೆ ಮತ್ತು ಸಮಸ್ಯೆಗಳನ್ನೂ ಬಾಲ್ಯದಲ್ಲಿ ಎದುರಿಸುತ್ತಾರೆ. ಅವರ ತಂದೆ ತಾಯಿ ಅನಕ್ಷರಸ್ತರಾಗಿದ್ದರು ಮತ್ತು ಅವರ ಊರಿನಲ್ಲಿ ದನಕಾಯುವ ಕೆಲಸಮಾಡುತ್ತಿದ್ದರು. ವನಮತಿಯವರು ಸಹ ಬಾಲ್ಯದಲ್ಲಿ ಎಮ್ಮೆ ದಾನವನ್ನು ಕಾಯಲು ಹೋಗುತ್ತಿದ್ದರು.ತನ್ನ ಶಾಲೆಯಿಂದ ಮನೆಗೆ ಹಿಂದಿರುಗಿದ ನಂತರ ಅವರ ದನಕರುಗಳನ್ನು ಮೇಯಿಸಲು ಹೋಗುತ್ತಿದ್ದಳು. ಆದರೆ ಇವರು ತುಂಬಾ ಪ್ರತಿಭಾಂವಿತ ವಿದ್ಯಾರ್ಥಿಯಾಗಿದ್ದರು.”ಆಗ ಎಮ್ಮೆಯ ಮೇಲೆ ಕುಳಿತುಕೊಂಡೆ ಕಲೆಕ್ಟರ್ ಆಗಬೇಕು ಎಂದು ಕನಸುಕಾಣುತ್ತಿದ್ದೆ “ಎಂದು ವನಮತಿ ಹೇಳುತ್ತಾರೆ.

ಪ್ರೌಢ ಶಿಕ್ಷಣ ಮುಗಿದ ನಂತರ ಕೇರಳದ ಸತ್ಯಮಂಗಳಂ ಕಾಲೇಜಿಗೆ ಸೇರಿಕೊಂಡರು. ಪಿಯುಸಿ ಮುಗಿದ ತಕ್ಷಣ ಸಂಬಂಧಿಗಳು ಅವರಿಗೆ ಮಾಡುವೆ ಮಾಡುವಂತೆ ವನಮತಿಯ ಪೋಷಕರಿಗೆ ಹೇಳಿದ್ದರು.ಆದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಆಸೆಯನ್ನು ಹೊಂದಿದ್ದ ವನಮತಿಯವರು ಮದುವೆಗೆ ಒಪ್ಪದೇ ಉನ್ನತ ಶಿಕ್ಷಣವನ್ನು ಮಾಡಲು ಮುಂದಾದರು.

 

 

 

ಐಎಎಸ್ ತರಬೇತಿ ಪಡೆದು UPSC ಎಕ್ಷಮ ಅನ್ನು ಬರೆದರು. ಕಡೆಗೆ 2015ರಲ್ಲಿ ಬಿಡುಗಡೆಗೊಂಡ UPSC ಅಂತಿಮ ಪಟ್ಟಿಯಲ್ಲಿ ಆಯ್ಕೆಯಾದ 1236 ಅಭ್ಯರ್ಥಿಗಳಲ್ಲಿ ಇವರೂ ಕೂಡ ಒಬ್ಬರಾಗಿದ್ದರು. ಅವರು 152 ನೇ ರಾಂಕ್ ಪಡೆದು ಐಎಎಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದರು. ಐಎಎಸ್ ಆಗುವ ಮುಂಚೆ ಅವರು ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದು ಒಂದು ಖಾಸಗಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು.

ಒಂದು ಕಾಲದಲ್ಲಿ ದಾನ ಕಾಯುತ್ತಿದ್ದ ವನಮತಿ ಇಂದು ಆಕೆಯ ತಂದೆ ತಾಯಿ ಮಾತ್ರವಲ್ಲದೇ ಇಡೀ ದೇಶವನ್ನು ಕಾಯುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top