fbpx
ಸಮಾಚಾರ

ರಾಜೀವ್ ಗಾಂಧಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ರಾಜೀವ್ ಗಾಂಧಿ ಹಾಗೂ ಅವರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ರಾಜೀವ್​ ಗಾಂಧಿಯವರು ಪ್ರಧಾನಿಯಾಗಿದ್ದಾಗ ತಮ್ಮ ಕುಟುಂಬದೊಂದಿಗೆ ರಜಾದಿನ ಕಳೆಯಲು ಹೋಗುತ್ತಿದ್ದರು. ಹೀಗೆ ಹೋಗುವಾಗ ಭಾರತೀಯ ನೌಕಾಪಡೆಯ ಯುದ್ಧ ವಿಮಾನ ವಾಹಕವಾಗಿದ್ದ ಐಎನ್​ಎಸ್​ ವಿರಾಟ್​ ಅವರು ಬಳಸಿಕೊಂಡಿದ್ದರು ಎಂದು ಆರೋಪ ಮಾಡಿದ್ದಾರೆ.

“ಭಾರತೀಯ ಸೇನೆ ಯಾರ ವೈಯಕ್ತಿಕ ಆಸ್ತಿಯೂ ಅಲ್ಲ ಎಂದೆಲ್ಲಾ ಕೂಗಾಡುತ್ತಾರೆ. ಆದರೆ ಯಾರು ಹೀಗೆ ವರ್ತಿಸುತ್ತಾರೋ ಅವರ ತಂದೆ ಮತ್ತು ಅವರ ಕುಟುಂಬವೇ ಐಎನ್‌ಎಸ್‌ ವಿರಾಟ್‌ ನೌಕೆಯನ್ನು ಪರ್ಸನಲ್‌ ಟ್ಯಾಕ್ಸಿಯಾಗಿ ಬಳಸಿಕೊಂಡಿತ್ತು ಎಂಬುದನ್ನು ಈ ದೇಶ ಮರೆತಿಲ್ಲ. ದೇಶದ ಗಡಿಕಾಯಲು ಇರುವ ಯುದ್ಧ ನೌಕೆಯನ್ನು ವೈಯಕ್ತಿಕ ಟ್ಯಾಕ್ಸಿ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಅದಕ್ಕೆ ಅವಮಾನ ಮಾಡಲಾಗಿದೆ.”

“1988ರಲ್ಲಿ ಲಕ್ಷದ್ವೀಪದಲ್ಲಿ 10 ದಿನಗಳ ಖಾಸಗಿ ಪ್ರವಾಸ ಕೈಗೊಂಡಿದ್ದ ರಾಜೀವ್‌, ತಮ್ಮ ಪ್ರಯಾಣಕ್ಕೆ ಐಎನ್‌ಎಸ್‌ ವಿರಾಟ್ ಬಳಸಿದ್ದರು. ಇವರೊಂದಿಗೆ ಇಟಲಿಯ ಪ್ರಜೆಗಳೂ ಇದ್ದರು. ಯುದ್ಧ ಹಡಗಿನಲ್ಲಿ ವಿದೇಶಿ ಪ್ರಜೆಗಳನ್ನು ಕರೆದುಕೊಂಡು ಹೋಗುವ ಮೂಲಕ ದೇಶದ ಭದ್ರತೆಯನ್ನೇ ರಾಜೀವ್‌ ಹರಾಜಿಗಿಟ್ಟಿದ್ದರು” ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top