fbpx
ಸಮಾಚಾರ

“ಶಿವಣ್ಣ ನನ್ನ ತಂದೆ, ಅಪ್ಪು ನನಗೆ ಪಿಲ್ಲರ್” ರಾಘವೇಂದ್ರ ರಾಜಕುಮಾರ್ ಭಾವುಕ ನುಡಿ.

ಕಳೆದ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅತಿಥಿಯಾಗಿ ಬಂದಿದ್ದರು. ಸಂಚಿಕೆಯಲ್ಲಿ ಶಿವಣ್ಣ ಮತ್ತು ಪುನೀತ್ ರಾಜ್ ಕುಮಾರ್ ಆಡಿದ ಮಾತುಗಳನ್ನು ಕೇಳಿ ರಾಘಣ್ಣ ಒಂದು ಕ್ಷಣ ಭಾವುಕಾದರು. ಅವರಿಬ್ಬರ ತ್ಯಾಗಕ್ಕೆ ನಾನು ಚಿರಋಣಿ ಎಂದರು. ಅಷ್ಟಕ್ಕೂ, ಪುನೀತ್, ಶಿವಣ್ಣ ಹೇಳಿದ್ದೇನು? ರಾಘಣ್ಣನ ಭಾವುಕವಾಗು ಹೇಳಿದ್ದೇನು?ಅಂತೀರಾ ಮುಂದೆ ಓದಿ.

ಶಿವಣ್ಣ ಮಾತನಾಡುತ್ತಾ ಅವನು ತುಂಬಾ ಒಳ್ಳೆಯವನು, ಯಾವಾಗಲೂ ಚೆನ್ನಾಗಿರಬೇಕು. ಯಾವಾಗ, ಹೇಗೆ, ಏನೇ ಆದರೂ ಬೇಕು ಅಂದ್ರೆ ನನ್ನ ಪ್ರಾಣನೂ ಕೊಟ್ಟುಬಿಡುತ್ತೇನೆ. ಭರವಸೆ ಕಳೆದುಕೊಳ್ಳಬೇಡ. ಹೀಗೆ ಇರು, ಬೇಕು ಅಂದ್ರೆ ನನ್ನ ಆಯುಷ್ಯ ಕೂಡ ಅವನಿಗೆ ಕೊಟ್ಬಿಡು ಎಂದು ಕೇಳಿಕೊಳ್ಳುತ್ತೇನೆ. ” ಎಂದು ಹೇಳಿದರು

“ಇದನ್ನು ನೋಡು ನೋಡುತ್ತಿದ್ದಂತೆ ರಾಘಣ್ಣ ಮತ್ತು ಅವರ ಪತ್ನಿ ಕಣ್ಣೀರು ಹಾಕಿದರು.. ನನಗೆ ಹುಷಾರಿಲ್ಲದ ಸಮಯದಲ್ಲಿ ನನ್ನನ್ನು ನನ್ನ ಅಣ್ಣ ಒಂದು ಮಗುವಿನಂತೆ ನೋಡಿಕೊಂಡಿದ್ದಾನೆ ಅವನ ಋಣ ತೀರಿಸಲಾಗದು. ಶಿವಣ್ಣನೇ ಈಗ ನನಗೆ ತಂದೆಯಿದ್ದಂತೆ” ಎಂದು ಭಾವುಕರಾದರು.

ಇನ್ನು ಇದೆ ಸಂಚಿಕೆಯಲ್ಲಿ ಮತ್ತೊಬ್ಬ ಸಹೋದರ ಪುನೀತ್ ಬಗ್ಗೆ ಕೂಡ ರಾಘಣ್ಣ ಮಾತನಾಡಿದರು. ”ಅಪ್ಪು ನನ್ನನ್ನ ಪಿಲ್ಲರ್ ಅಂತಾನೆ. ಆದರೆ ನಿಜವಾಗಲೂ ಅವನೇ ನಮಗೆಲ್ಲಾ ಪಿಲ್ಲರ್. ನಾನು ವಾಸಿಸುತ್ತಿರುವ ಮನೆ ಕಟ್ಟಿಸಿರೋದು ಅವನೇ, ಸಂಸಾರ ನಿಭಾಯಿಸುತ್ತಿರುವುದು ಕೂಡ ಅವನೇ.. ಪುನೀತ್ ನನಗೆ ಮಗನೇ. ” ಎಂದು ಭಾವುಕವಾಗಿ ರಾಘಣ್ಣ ಹೇಳಿಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top