fbpx
ಸಮಾಚಾರ

ಪ್ಲಾಸ್ಟಿಕ್ ಆಟಿಕೆ ನುಂಗಿ ಖ್ಯಾತ ಕಿರುತೆರೆ ನಟನ ಮಗು ಸಾವು.

ಒಂದೇ ಒಂದು ಸಣ್ಣ ನಿರ್ಲಕ್ಷದಿಂದ ಕಿರುತೆರೆ ನಟನೊಬ್ಬನ ಇಡೀ ಕುಟುಂಬ ಇಂದು ದುಃಖದಲ್ಲಿ ಮುಳುಗಿದೆ. ಪ್ಲ್ಯಾಸ್ಟಿಕ್ ಆಟಿಕೆ ಜತೆ ಆಟವಾಡುತ್ತಿದ್ದ ಕಿರುತೆರೆ ನಟ ಪ್ರತಿಶ್ ವೊರಾ ಅವರ 2 ವರ್ಷದ ಮಗು ಆಕಸ್ಮಿಕವಾಗಿ ಆಟಿಕೆಯನ್ನು ನುಂಗಿ ಅದನ್ನು ಮತ್ತೆ ಹೊರತೆಗೆಯಲಾಗದೆ ಸಾವನ್ನಪ್ಪಿದೆ.

ಈ ಬಗ್ಗೆ ಮಾತನಾಡಿದ ನಟ ಪ್ರತಿಶ್ “ಕಳೆದ ರಾತ್ರಿ ನನ್ನ ಮಗಳು ಪ್ಲಾಸ್ಟಿಕ್ ಗೊಂಬೆಯೊಂದಿಗೆ ಆಟವಾಡುತ್ತಿದ್ದಳು. ಆಗ ಗೊಂಬೆಯ ಚೂರನ್ನು ನುಂಗಿದ್ದಾಳೆ. ಬಾಯಿಯಿಂದ ಗೊಂಬೆಯ ಚೂರನ್ನು ತೆಗೆಯಲಾರದೇ ಮೃತಪಟ್ಟಿದ್ದಾಳೆ. ದಯವಿಟ್ಟು ನನ್ನ ಮಗಳಿಗಾಗಿ ದೇವರನ್ನು ಪ್ರಾರ್ಥಿಸಿ” ಎಂದು ದುಃಖದಲ್ಲಿ ಹೇಳಿದ್ದಾರೆ.

 

 

ಪ್ರತೀಷ್ ವೋತಾರ ಸದ್ಯಕ್ಕೆ ‘ಪ್ಯಾರ್ ಕೆ ಪಾಪಡ್’ ಧಾರಾವಾಹಿಯಲ್ಲಿ ನಾಧು ಗುಪ್ತ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇಂತಹ ದುಃಖದ ಪರಿಸ್ಥಿತಿಯಲ್ಲೂ ತನ್ನ ಮಗಳು ಮೃತಪಟ್ಟಿದ್ದು ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ ಎಂದು ಭಾರವಾದ ಹೃದಯದೊಂದಿಗೆ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. ಇನ್ನಾದರೂ ಮಕ್ಕಳ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ಪ್ಲಾಸ್ಟಿಕ್ ಆಟಿಕೆಗಳನ್ನು ಕೊಡಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸಿ. ಪ್ರತೀಷ್ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪಾರ್ಥಿಸೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top