fbpx
ಸಮಾಚಾರ

ಶಿವಮೊಗ್ಗ ರೆಸ್ಟೋರೆಂಟ್ ನಲ್ಲಿ ಗ್ರಾಹಕರ ಮನಗೆದ್ದ ರೋಬೋಟ್ ಸಪ್ಲೈಯರ್- ವಿಡಿಯೋ ನೋಡಿ

ಶಿವಮೊಗ್ಗದ ವಿನೋಬಾ ನಗರದಲ್ಲಿರುವ ರೆಸ್ಟೋರೆಂಟ್ ಗೆ ಬರುವ ಗ್ರಾಹಕರಿಗೆ ಅಚ್ಚರಿ ಕಾದಿದೆ, ಇಲ್ಲಿನ ಉಪಹಾರ ದರ್ಶಿನಿಗೆ ಬರುವ ಗ್ರಾಹಕರಿಗೆ ಹೊಸ ಅನುಭವವಾಗಲಿದೆ. ಏಕೆಂದರೆ ಈ ಹೋಟೆಲ್ ನಲ್ಲಿ ನಿಮ್ಮ ಆರ್ಡರ್ ತೆಗೆದುಕೊಳ್ಳುವುದು ವೈಟರ್ ಅಲ್ಲ, ವೈಟರ್ ರೂಪದಲ್ಲಿರುವ ರೋಬೋಟ್ ಬರುತ್ತದೆ.

 


 

ಕನ್ನಡದಲ್ಲೇ ಮಾತು:
ಸಾಮಾನ್ಯವಾಗಿ ವಿದೇಶಗಳಲ್ಲಿ ಮಾತ್ರ ಕಾಣುತ್ತಿದ್ದ ರೋಬೋ ಬಳಕೆ ಇದೀಗ ಶಿವಮೊಗ್ಗಕ್ಕೂ ಕಾಲಿಟ್ಟಿದೆ. ವಿಶೇಷವೆಂದರೆ ಅದು ಕನ್ನಡದಲ್ಲೇ ಮಾತು ಆರಂಭಿಸುತ್ತ ದರ್ಶಿನಿಗೆ ಬರುವ ಗ್ರಾಹಕರನ್ನು ಸ್ವಾಗತಿಸುತ್ತದೆ. ಆರ್ಡರ್ ಮಾಡುವ ಗ್ರಾಹಕರಿಗೆ ಕುಡಿಯಲು ನೀರು, ತಿನಿಸು, ಟೀ, ಕಾಫಿ ಸರಬರಾಜು ಮಾಡುತ್ತದೆ. ಗ್ರಾಹಕರು ಆರ್ಡರ್ ಸ್ವೀಕರಿಸಿದ ಬಳಿಕ ಧನ್ಯವಾದ ಹೇಳುವುದನ್ನೂ ಮರೆಯದು. ಕನ್ನಡ ಮತ್ತು ಇಂಗ್ಲಿಷ್​ನಲ್ಲೂ ಮಾತನಾಡಿ ಸೈ ಎನಿಸಿಕೊಂಡಿದೆ.

ಶಿವಮೊಗ್ಗದಲ್ಲೀಗ ಈ ರೋಬೋಟ್​ ವೈಟರ್ ಮನೆ ಮಾತಾಗಿದೆ. ಈ ರೋಬೋಟ್​ನ ಬ್ಯಾಟರಿಯನ್ನು 2 ಗಂಟೆಗಳ ಕಾಲ ಚಾರ್ಜ್ ಮಾಡಿದರೆ, ಸುಮಾರು 3 ದಿನಗಳ ಕಾಲ ಸೇವೆ ನೀಡಲಿದೆ. ಕುಡಿಯಲು ನೀರು ಸೇರಿದಂತೆ, ಯಾವುದೇ ತಿನಿಸುಗಳನ್ನು ಆರ್ಡರ್ ಮಾಡಿದಲ್ಲಿ, ಅದನ್ನು ಟೇಬಲ್ ಗೆ ತಂದು ನೀಡಲಿದೆ. ಶುಭ ಕೋರುತ್ತಲೇ, ಆಹಾರ ತೆಗೆದುಕೊಳ್ಳುವಂತೆ ವಿನಂತಿಸುತ್ತದೆ. ಇಷ್ಟೆಲ್ಲ ಕೆಲಸ ಮಾಡುವ ರೋಬೊದ ನಿಯಂತ್ರಣ ನಿಯಂತ್ರಕರ ಕೈಯಲ್ಲಿರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top