fbpx
ಸಮಾಚಾರ

ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ‘ಸರ್ವಮಂಗಳ ಮಾಂಗಲ್ಯೇ’ ನಟಿ ಐಶ್ವರ್ಯ.

‘ಸರ್ವಮಂಗಳ ಮಾಂಗಲ್ಯೇ’ ಧಾರಾವಾಹಿ ಖ್ಯಾತಿಯ ನಟಿ ಐಶ್ವರ್ಯಾ ಪಿಸ್ಸೆ ನಿಶ್ಚಿತಾರ್ಥ ಹರಿ ವಿನಯ್ ಜತೆ ನಡೆಯಿತು. ಖಾಸಗಿಯಾಗಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಐಶ್ವರ್ಯಾ ಮತ್ತು ಹರಿ ಉಂಗುರ ಬದಲಾಯಿಸಿಕೊಂಡಿದ್ದಾರೆ.

ನಟಿ ಐಶ್ವರ್ಯಾ ಅವರು ತಮ್ಮ ಬಹುಕಾಲದ ಗೆಳೆಯ ಹರಿ ವಿನಯ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರಿಬ್ಬರು ಕುಟುಂಬದವರ ಸಮ್ಮುಖದಲ್ಲಿ ರಿಂಗ್ ಬದಲಾಯಿಸುವ ಮೂಲಕ ಎಂಗೇಜ್ ಆಗಿದ್ದಾರೆ. ಈ ಕಾರ್ಯಕ್ರಮಕ್ಕೆ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಬಂದು ಜೋಡಿಗೆ ಶುಭಕೋರಿದ್ದಾರೆ.

ಅನುರೂಪ ಧಾರಾವಾಹಿ ಮೂಲಕ ಐಶ್ವರ್ಯಾ ಕಿರುತೆರೆಗೆ ಅಡಿಯಿಟ್ಟವರು. ಸರ್ವಮಂಗಳ ಮಾಂಗಲ್ಯೇ ಧಾರಾವಾಹಿ ತೆಲುಗಿನಲ್ಲಿ ‘ಅಗ್ನಿಸಾಕ್ಷಿ’ ಹೆಸರಿನಲ್ಲಿ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ಪಾರ್ವತಿ ಪಾತ್ರ ಪೋಷಿಸಿದ್ದಾರೆ ಐಶ್ವರ್ಯಾ. ಅಷ್ಟೇ ಅಲ್ಲದೇ ಐಶ್ವರ್ಯ ಯಶ್ ಅಭಿನಯದ ‘ಸಂತು ಸ್ಟ್ರೈಟ್ ಫಾರ್ವಡ್’ ಸಿನಿಮಾದಲ್ಲಿ ಯಶ್ ಅವರಿಗೆ ಸಹೋದರಿಯಾಗಿ ಕಾಣಿಸಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top