fbpx
ಸಮಾಚಾರ

೪೬ ದಿನಗಳ ಕಾಲ ಬಿಯರ್ ಮಾತ್ರ ಕುಡಿದು ಬರೋಬ್ಬರಿ ೨೦ ಕೆಜಿ ತೂಕ ಇಳಿಸಿಕೊಂಡ ಮಹಾನುಭಾವ.

ದೇಹದ ಬೊಜ್ಜು ಕರಗಿಸಲು ಜನಗಳು ಹರಸಾಹಸ ಪಡುತ್ತಾರೆ. ತೂಕ ಕಡಿಮೆಮಾಡಿಕೊಳ್ಳಲು ನಿಯಮಿತವಾದ ಆಹಾರ ಸೇವನೆ ಮಾಡಬೇಕು ಜೊತೆಗೆ ವ್ಯಾಯಾಮ ಮಾಡಬೇಕು. ನೀವು ತುಂಬಾ ಹೆಲ್ತ್ ಕಾನ್ಶಿಯಸ್ ಆಗಿದ್ದು ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಕೊಂಡಿದ್ದರೆ ಬಿಯರ್ ಮುಟ್ಟಲೇಬೇಡಿ ಎಂದು ಹಲವು ವೈದ್ಯರು ಸಲಹೆಯನ್ನು ನೀಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಈ ಎಲ್ಲ ವೈದ್ಯಕೀಯ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ ತಮ್ಮ ದೇಹದ ತೂಕವನ್ನು ಇಳಿಸಿಕೊಂಡಿದ್ದು, ಎಲ್ಲರ ಹುಬ್ಬೆರುವಂತೆ ಮಾಡಿದ್ದಾರೆ.

ಅಮೇರಿಕದ ವ್ಯಕ್ತಿಯೊಬ್ಬರು ಸತತವಾಗಿ 46 ದಿನಗಳ ಕಾಲ ಬಿಯರ್‌ ಮಾತ್ರ‌ವೇ ಕುಡಿದು ತಮ್ಮ ದೇಹದ 20 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಕ್ರೈಸ್ಟ್ ಲಿಟರ್ಜಿಕಲ್ ಕ್ಯಾಲೆಂಡರ್ ನ ಅನುಸಾರ ಧಾರ್ಮಿಕ ಆಚರಣೆಯಾದ ಲೆಂಟ್‌ ಅವಧಿಯಲ್ಲಿ 46 ದಿನಗಳ ಕಾಲ ಉಪವಾಸವಿದ್ದ ಡೆಲ್‌ ಹಾಲ್‌ ಎಂಬ ಅಮೆರಿಕದ ಈ ವ್ಯಕ್ತಿ ಆಹಾರವನ್ನು ಸೇವಿಸದೆ ಕೇವಲ ಬಿಯರ್ ಮಾತ್ರ ಕುಡಿದು ದೇಹದ ತೂಕ ಇಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 16 ನೇ ಶತಮಾನದಿಂದ ಪುರಾತನ ಕ್ಯಾಥೋಲಿಕ್‌ ಸಂಪ್ರದಾಯದಂತೆ ಡೆಲ್ ಹಾಲ್ ಸಹಿತ ಹಲವು ಸನ್ಯಾಸಿಗಳು ಬಿಯರ್ ಡಯಟ್‌ ಅನ್ನು ಆರಂಭಿಸಿದ್ದರು ಎನ್ನಲಾಗಿದೆ.

ಅಂದಿನ ಸನ್ಯಾಸಿಗಳು ಲೆಂಟ್ ಅವಧಿಯಲ್ಲಿ ನೀರಿನ ಬದಲು ಕಾರ್ಬೊಹೈಡ್ರೇಟ್‌ ಹಾಗೂ ಪೌಷ್ಠಿಕಾಂಶಗಳುಳ್ಳ ಬಿಯರ್ ಅನ್ನು ಸನ್ಯಾಸಿಗಳು ಸೇವಿಸುತ್ತಿದ್ದರು. ಇದರಿಂದ ಅವರ ಉಪವಾಸ ಮುಂದುವರಿಯುತ್ತಿತ್ತು ಎಂದು ಹಾಲ್ ಹಾಗೂ ಮಾರ್ಟಿನ್‌ ಝುಬರ್ ಎಂಬುವರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top