fbpx
ಸಮಾಚಾರ

‘ಕಾಶಿ’ಯ ಕುಲುಮೆಯಲ್ಲಿ ರೂಪುಗೊಂಡ ಚಂದನವನದ ಅನರ್ಗ್ಯ ರತ್ನಗಳು.

ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ಕಲಾವಿದರಲ್ಲಿ ನಟ, ನಿರ್ದೇಶಕ ಕಾಶಿನಾಥ್ ಕೂಡ ಒಬ್ಬರು ಇಡೀ ಚಿತ್ರರಂಗವೇ ಮಡಿವಂತಿಕೆಯ ಸುತ್ತ ಗಿರಕಿ ಹೊಡೆಯುತ್ತಿದ್ದ ಸಂದರ್ಭವದು. ಹೊಸತನದ ಅಗತ್ಯತೆ ಬೇಕಿದ್ದರೂ ಮಡಿವಂತಿಕೆಯ ಪರಿಧೀಯಾಚೆಗೆ ನುಗ್ಗಿ ಹೊಸ ಬಗೆಯ ಕತೆ ಹೇಳುವ ಪ್ರಯತ್ನಕ್ಕೆ ೮೦ರ ದಶಕದ ಯಾವೊಬ್ಬ ನಿರ್ದೇಶಕರೂ ಮುಂದಡಿ ಇಟ್ಟಿರಲಿಲ್ಲ. ಏಕತಾನತೆಯಲ್ಲಿಯೇ ಮುಳುಗಿದ್ದ ಕನ್ನಡ ಚಿತ್ರರಂಗಕ್ಕೆ ಆಗ ಹೊಸ ಭರವಸೆಯ ಬೆಳಕು ಚಿಮ್ಮಿಸಿದವರು ನಟ, ನಿರ್ದೇಶಕ ಕಾಶಿನಾಥ್ ತಮ್ಮ ಚಿತ್ರಗಳ ಮೂಲಕ ಸಂಪ್ರದಾಯವಾದಿಗಳನ್ನು ಪ್ರಶ್ನಿಸುವ, ತರ್ಕಬದ್ಧವಾಗಿ ಆಲೋಚಿಸುವ, ಹೆಣ್ಣಿನ ಆಂತರ್ಯವನ್ನು ಒಳಹೊಕ್ಕು ಆಲಿಸುವ ಅಗತ್ಯವಿದೆ ಎಂಬ ಸಂದೇಶಗಳನ್ನು ಸಾರಿ ಹೇಳಿದರು. ತಾವು ನಟನೆಗೆ ಇಳಿಯುವ ಮೂಲಕ ಬೆಳ್ಳಿ ಪರದೆಯ ಮೇಲೆ ರಾರಾಜಿಸಲು ಅಂದ ಚೆಂದವೇ ಮುಖ್ಯವಲ್ಲ ಎಂಬ ಸೂಕ್ಷ್ಮತೆಯನ್ನು ತಿಳಿ ಹೇಳಿದರು. ತಾವು ಬೆಳೆಯುವುದರ ಜೊತೆಗೆ ತಮ್ಮಂತೆ ಕನಸು ಕಾಣುವ ಹಲವರ ಏಳ್ಗೆಗೂ ಕಾರಣರಾದವರು ಕಾಶಿನಾಥ್‌.

ಕಾಶಿನಾಥ್‌ ರ ಗರಡಿಯಲ್ಲಿಯೇ ಬೆಳೆದು ಇಂದು ಕನ್ನಡ ಚಿತ್ರರಂಗದಲ್ಲಿ ಉತ್ತುಂಗಕ್ಕೇರಿದ ನಟ ನಟಿಯರ ಕಿರು ಪರಿಚಯ ಇಲ್ಲಿದೆ ನೋಡಿ.

ಕಾ‍ಶಿನಾಥ್‌ ರ ಅಪ್ಪಟ ಶಿಶ್ಯ ಉಪೇಂದ್ರ.

ಕನ್ನಡ ಸೇರಿದಂತೆ ಪರಭಾಷಾ ಚಿತ್ರಗಳಲ್ಲೂ ನಟಿಸಿ ನಟನೆಗೂ ಸೈ ನಿರ್ದೇಶನಕ್ಕೂ ಜೈ ಎನ್ನುವ ರಿಯಲ್ ಸ್ಟಾರ್ ಉಪೇಂದ್ರ,

ಕಾಶಿನಾಥ್‌ ರ ಅಪ್ಪಟ ಶಿಶ್ಯರಾಗಿ ಗುರುತಿಸಿಕೊಂಡವರು. ಅವರ ಆಲೋಚನೆಗಳನ್ನೇ ಮೈಗೂಡಿಸಿಕೊಂಡಂತಿರುವ ಉಪೇಂದ್ರ ಇಂದಿಗೂ ತಮ್ಮ ನಿರ್ದೇಶನದಲ್ಲಿ ಮೂಡಿ ಬರುವ ಚಿತ್ರಗಳಲ್ಲಿ ಹೊಸತನದ ಹುಡುಕಾಟದಲ್ಲಿಯೇ ತೊಡಗಿರುತ್ತಾರೆ.

ವಿ. ಮನೋಹರ್ ಕಾಶಿನಾಥ್‌ ರ ಶಿಶ್ಯ

ಇಂದು ಸಂಗೀತ ನಿರ್ದೇಶಕರಾಗಿ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ವಿ. ಮನೋಹರ್ ಕೂಡ ತಮ್ಮ ವೃತ್ತಿ ಬದುಕಿನ ಮೊದಲ ದಿನಗಳಲ್ಲಿ ಕಾಶಿನಾಥ್ ರ ಆಶ್ರಯದಲ್ಲಿ ಬೆಳೆದವರು ಸುಮಾರು ಆರು ವರ್ಷಗಳ ಕಾಲ ಕಾಶಿನಾಥ್ ರ ಸಿನಿಮಾಗಳಲ್ಲಿ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಅವರ ಬದುಕನ್ನೇ ಬದಲಿಸಿತು ಎಂದರೆ ತಪ್ಪಾಗಲಾರದು.

‘ಅನುಭವ’ದ ಮೂಲಕ ನಾಯಕಿಯಾದ ಉಮಾಶ್ರೀ

ಅನುಭವ ಚಿತ್ರದಲ್ಲಿನ ನಾಯಕಿ ಪಾತ್ರಕ್ಕೂ ಮೊದಲು ರಂಗಭೂಮಿಯಲ್ಲಿನ ನಟನೆಯ ಮೂಲಕ ಜೀವನ ಕಳೆಯುತ್ತಿದ್ದ ನಟಿ ಉಮಾಶ್ರೀ, ಅನುಭವ ಚಿತ್ರ ತೆರೆಕಂಡ ನಂತರ ಹಿಂತಿರುಗಿ ನೋಡಲೇ ಇಲ್ಲ ಆನಂತರ ಅವರ ಪಾಲಿಗೆ ಬಂದದ್ದೆಲ್ಲವೂ ಖುಷಿಯ ದಿನಗಳೇ ಕಾಶಿನಾಥ್ ಗರಡಿಯಲ್ಲಿ ಅರಳಿದ ಮತ್ತೊಂದು ಪ್ರತಿಭೆ ಇವರು.

ಅನುಭವದಲ್ಲಿ ‘ಅಭಿನಯ’ಳಿಗೊಂದು ಪಾತ್ರ

ಒಂದು ಕಾಲದ ಸೂಪರ್ ಹಿಟ್ ಸಿನಿಮಾ ಎಂದು ಕರೆಯಲ್ಪಡುವ ಅನುಭವ ಚಿತ್ರದಲ್ಲಿ ನಿರ್ದೇಶಕ ಕಾಶಿನಾಥ್ ನಟಿ ಉಮಾಶ್ರೀಯವರನ್ನು ಪರಿಚಯಿಸಿದ್ದು ಮಾತ್ರವಲ್ಲದೆ, ನಟಿ ಅಭಿನಯ ಅವರ ಮನೆಗೆ ತೆರಳಿ ಅವರ ಪೋಷಕರನ್ನು ಒಪ್ಪಿಸುವ ಮೂಲಕ ಅನುಭವ ಚಿತ್ರಕ್ಕೆ ಅಭಿನಯ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿದ್ದರು.

ಕಾಶಿ ಜೊತೆಯಲ್ಲಿ ಸಹ ನಿರ್ದೇಶಕನಾಗಿ ಬೆಳೆದ ಸುನೀಲ್ ಕುಮಾರ್ ದೇಸಾಯಿ.

ಇಂದಿಗೆ ಸಸ್ಪೆನ್ಸ್,ಥ್ರಿಲ್ಲರ್ ಕತೆಗಳ ನಿರ್ದೇಶನಕ್ಕೆ ಹೆಸರುವಾಸಿಯಾಗಿರುವ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಕೂಡ ಒಂದು ಕಾಲಕ್ಕೆ ಕಾಶಿನಾಥ್‌ ರ ಜೊತೆಗೆ ಸಹ ನಿರ್ದೇಶಕಾರಗಿ ಕೆಲಸ ಮಾಡಿದ್ದರು ಎಂದರೆ ನಂಬಲೇಬೇಕು.

ಉಪೇಂದ್ರ, ವಿ. ಮನೋಹರ್, ನಿರ್ದೇಶಕ ಮುರುಳಿ ಕೃಷ್ಣ, ಹಾಸ್ಯ ನಟ ಟೆನ್ನಿಸ್ ಕೃಷ್ಣ, ಹಿರಿಯ ನಟಿ ಸತ್ಯಭಾಮ ಹೀಗೆ ಹಲವಾರು ಪ್ರತಿಭೆಗಳು ಕಾಶಿಯ ಕುಲುಮೆಯಲ್ಲಿ ಜನ್ಮ ತಾಳಿದವರು ಎಂದರೆ ಅತೀಷಯೋಕ್ತಿಯಾಗಲಾರದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top