fbpx
ಸಮಾಚಾರ

ಡಯಾಬಿಟಿಸ್ ನಿಯಂತ್ರಣಕ್ಕೆ ಪರಿಣಾಮಕಾರಿ ಮನೆ ಮದ್ದು ಈರುಳ್ಳಿ.

ಅಡುಗೆ ಮನೆಯ ವಿಷಯಕ್ಕೆ ಬಂದರೆ ನಾವು ತಯಾರಿಸುವ ಬಹುತೇಕ ತಿನಿಸುಗಳು ಹಾಗೂ ಆಹಾರ ಪದಾರ್ಥಗಳಲ್ಲಿ ಈರುಳ್ಳಿಯದ್ದೇ ಮೇಲು ಗೈ. ಸಲ್ಫರ್, ಫೈಬರ್, ಪೋಟ್ಯಾಶಿಯಂ, ಅಂಶಗಳನ್ನು ಒಳಗೊಂಡಿರುವ ಹೆಚ್ಚಾಗಿರುವ ಈರುಳ್ಳಿ ಅಲರ್ಜಿ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.ಸಹಜವಾಗಿ ಡಯಾಬಿಟಿಸ್ ಅಥವಾ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣಕ್ಕೆ ತರಲು ನಾವುಗಳು ಹಲವಾರು ತರಕಾರಿ ಮತ್ತು ಹಣ್ಣುಗಳನ್ನು ಸೇವಿಸುತ್ತೇವೆ, ಆದರೆ ಈರುಳ್ಳಿ ಮಾತ್ರ ಹಣ್ಣು ಮತ್ತು ತರಾಕಾರಿಗಿಂತಲೂ ಪರಿಣಾಮಕಾರಿಯಾಗಿ ಡಯಾಬಿಟಿಸ್ ಖಾಯಿಲೆಯನ್ನು ನಿಯಂತ್ರಣದಲ್ಲಿಡುತ್ತದೆ ಎಂದರೆ ನಂಬಲೆಬೇಕು.

ಅಡುಗೆಯಲ್ಲಿ ಈರುಳ್ಳಿಯ ಬಳಕೆಯಿಂದಾಗಿ ಮಧುಮೇಹದಂಥ ರೋಗಗಳನ್ನು ನಿಯಂತ್ರಣದಲ್ಲಿಡಬಹುದು ಎಂದು ಇತ್ತೀಚಿನ ವರದಿಯೊಂದು ಸಾಬೀತು ಪಡಿಸಿದೆ. ಈರುಳ್ಳಿ ಸೇವನೆಯಿಂದ ಮಧುಮೇಹದಿಂದ ಬಳಲುವವರಿಗೆ ಸಾಕಷ್ಟು ಪ್ರಯೋಜನಗಳಿದ್ದು. ನಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ಇದು ತಡೆಗಟ್ಟುತ್ತದೆ. ಬೇಸಿಗೆಯಲ್ಲಿ ಈರುಳ್ಳಿ ತಿನ್ನುವುದರಿಂದ ಅಥವಾ ಈರುಳ್ಳಿಯ ರಸವನ್ನು ಸೇವಿಸುವುದರಿಂದ ದೇಹ ತಂಪಾಗಿ ಇರುತ್ತದೆ.

ಜರ್ನಲ್ ಫೈಟೋಫೋರ್ ಥೆರಪಿಯಲ್ಲಿ ಈ ಕುರಿತು ಲೇಖನವೊಂದು ಪ್ರಕಟವಾಗಿದ್ದು, ಇದರ ಪ್ರಕಾರ ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಅಂಶ ಹೆಚ್ಚಾಗಿರುತ್ತದೆ, ಆದ್ದರಿಂದ ಎಂಟು ವಾರಕ್ಕಿಂತ ಅಧಿಕ ಕ್ವೆರ್ಸೆಟಿನ್ ಡೋಸ್, ಟೈಪ್ 2 ಮಧುಮೇಹಿಗಳಿಗೆ ಉಪಯುಕ್ತ ಎನ್ನಲಾಗಿದ್ದು, ಎಂಟು ವಾರಗಳಲ್ಲಿ 500 ಮಿ.ಗ್ರಾಂ ನಷ್ಟು ಕ್ವೆರ್ಸೆಟಿನ್ ಡೋಸ್ ತೆಗೆದುಕೊಳ್ಳುವುದರಿಂದ ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆಯಾಗುತ್ತದೆ. ಈರುಳ್ಳಿಯನ್ನು ಸರಿಯಾದ ಪ್ರಮಾಣದಲ್ಲಿ 28 ದಿನಗಳ ಕಾಲ ಸೇವಿಸಿದ್ರೆ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈರುಳ್ಳಿ, ಅಲರ್ಜಿ ಹಾಗೂ ಇತರ ಕಾಯಿಲೆಗಳು ಸುಳಿಯದಂತೆ ರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ ಎಂಬ ಕಾರಣಕ್ಕೆ

ಹೆಣ್ಣು ಮಕ್ಕಳು ಗರ್ಭಾವಸ್ಥೆಯಲ್ಲಿದ್ದಾಗ ಅಧಿಕವಾಗಿ ಈರುಳ್ಳಿಯನ್ನು ಸೇವಿಸಲು ಉತ್ತೇಜಿಸುತ್ತಾರೆ. ಈರುಳ್ಳಿಯಲ್ಲಿ ಅತ್ಯಧಿಕ ಪೋಷಕಾಂಶಗಳಿರುವುದರಿಂದ ನಿಮ್ಮ ಪ್ರತಿನಿತ್ಯದ ಆಹಾರದಲ್ಲಿ ಈರುಳ್ಳಿ ಬಳಕೆಯನ್ನು ರೂಢಿಸಿಕೊಳ್ಳಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top