fbpx
ಸಮಾಚಾರ

ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕವೇ ಇಲ್ಲವಂತೆ. ಈ ಕಾಲದಲ್ಲೂ ಇಂಥದ್ದೊಂದು ಮಾದರಿ ಶಾಲೆ ಇರಲು ಸಾಧ್ಯವೇ?

ಲಕ್ಷಗಟ್ಟಲೇ ಡೊನೆಶನ್, ತಂದೆ ತಾಯಿಗಳ ಕನಿಷ್ಠ ವಿದ್ಯಾರ್ಹತೆ ಹೀಗೆ ಹಲವು ದುಬಾರಿ ನಿಯಮಗಳನ್ನಿರಿಸಿಕೊಂಡು ಹಗಲು ದರೋಡೆ ಮಾಡುತ್ತಿರುವ ಖಾಸಗಿ ಶಾಲೆಗಳ ಅಬ್ಬರ ಒಂದು ಕಡೆಯಾದರೆ. ಜನ ಪ್ರತಿನಿಧಿಗಳು ಹಾಗೂ ಸರ್ಕಾರದ ನಿರ್ಲಕ್ಷ್ಯತನದಿಂದ ದಿನೇ ದಿನೇ ನೆಲಕಚ್ಚುತ್ತಿರುವ ಸರ್ಕಾರಿ ಶಾಲೆಗಳು ಮತ್ತೊಂದೆಡೆ. ಜನಸಾಮಾನ್ಯರ ಪಾಲಿಗೆ ಶಿಕ್ಷಣವೆಂಬುದು ಕೈಗೆಟುಕದ ಮರಿಚಿಕೆಯಂತಾಗಿರುವ ಈ ಕಾಲ ಘಟ್ಟದಲ್ಲಿ ಇಲ್ಲೊಂದು ಮಾದರಿ ಶಾಲೆ ಜನ್ಮ ತಾಳಿದ್ದು ಹಳ್ಳಿಗಾಡಿನ ಮಕ್ಕಳಿಗೆ ಪರಿಸಿರದ ಖಾಳಜಿಯ ಬಗೆಗೆ ಅರಿವು ಮೂಡಿಸುವುದರ ಜೊತೆಗೆ ಉತ್ತಮ ಶಿಕ್ಷಣವನ್ನು ದಯಪಾಲಿಸುತ್ತಿದೆ ಎಂದರೆ ನಂಬಲು ಕಷ್ಟ ಸಾಧ್ಯ.

ಈ ಶಾಲೆಗೆ ದಾಖಲಾತಿ ಪಡೆಯಲು ಹಣದ ಅಗತ್ಯವಿಲ್ಲ. ಬದಲಿಗೆ ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಶುಲ್ಕ ರೂಪದಲ್ಲಿ ಪಡೆಯಲಾಗುತ್ತದೆ. ಇಂಥದ್ದೊಂದು ವಿಭಿನ್ನ ಮಾದರಿಯ ಶಾಲೆ ಇರುವುದು ಅಸ್ಸಾಂ ರಾಜ್ಯದ ಗುವಾಹಟಿಯ ಪಮೋಹಿ ಪ್ರದೇಶದಲ್ಲಿ. ಇಂತಹ ಶಾಲೆ ಪ್ರಾರಂಭಿಸಬೇಕೆಂದು ಕನಸು ಕಂಡು ನಿರಂತರ ಪ್ರಯತ್ನದಿಂದ ಯಶಸ್ಸು ಕಂಡವರು ಮಜಿನ್ ಮುಖ್ತಾರ್ ಹಾಗೂ ಪರ್ಮಿತಾ ಶರ್ಮಾ ಎಂಬುವವರು.

ಅಂದಹಾಗೆ ಶಾಲೆಯ ಹೆಸರು ಅಕ್ಷರ್. ಈ ಶಾಲೆಗೆ ದಾಖಲಾಗುವ ಮಕ್ಕಳು ಪ್ರತಿನಿತ್ಯ ಶಾಲೆಗೆ ಬರುವ ವೇಳೆಯಲ್ಲಿ ತಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಕಾಣ ಸಿಗುವ ಪ್ಲಾಸ್ಟೀಕ್ ವಸ್ತುಗಳನ್ನು ಆಯ್ದು ಅವನ್ನು ಶಾಲೆಯ ಸಿಬ್ಬಂಧಿಗೆ ನೀಡುತ್ತಾರೆ. ವಿದ್ಯಾರ್ಥಿಗಳು ಸಂಗ್ರಹಿಸಿ ತರುವ ಪ್ಲಾಸ್ಟೀಕ್ ತ್ಯಾಜ್ಯದ ಆಧಾರದ ಮೇಲೆ ಅವರವರ ಶುಲ್ಕವನ್ನು ಶಾಲೆಯ ಆಡಳಿತ ಮಂಡಳಿ ನಿರ್ಧರಿಸುತ್ತದೆ. ಅಕ್ಷರ್ ಸಂಸ್ಥೆಯ ವಿಭಿನ್ನ ನಡೆಯಿಂದಾಗಿ ಒಂದೆಡೆ ಪರಿಸರ ಶುಚಿಯಾಗುತ್ತಿದ್ದರೇ, ಮತ್ತೊಂದೆಡೆ ಹಳ್ಳಿಗಾಡಿನ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ದೊರೆಯುತ್ತಿದೆ. ಪ್ಲಾಸ್ಟೀಕ್ ಬಳಕೆ ಹಾಗೂ ಅದರ ಸುಡುವಿಕೆಯಿಂದ ಪರಿಸರದಲ್ಲಾಗುವ ಹಾನಿಯ ಬಗೆಗೆ ಮಕ್ಕಳಲ್ಲಿ ಅರಿವು ಮೂಡಿಸುವುದರಲ್ಲಿ ಅಕ್ಷರ್ ಸಂಸ್ಥೆ ಯಶಸ್ಸು ಸಾಧಿಸಿದೆ. ಶಾಲೆಯ ಸುತ್ತ ಮುತ್ತಲಿನ ಪರಿಸರದಲ್ಲಿ ಕೈಗೆಟುಕುವ ಪ್ಲಾಸ್ಟೀಕ್ ವಸ್ತುಗಳನ್ನು ಸಂಗ್ರಹಿಸುವ ಮಕ್ಕಳು ಅತೀ ಚಿಕ್ಕ ವಯಸ್ಸಿನಲ್ಲಿಯೇ ಸ್ವಾವಲಂಬತೆಯನ್ನು ರೂಢಿಸಿಕೊಳ್ಳುವುದಲ್ಲದೇ, ನೆರೆ ಹೊರೆಯಲ್ಲೂ ಪ್ಲಾಸ್ಟೀಕ್ ಬಳಕೆಯಿಂದ ಉಂಟಾಗುವ ಪರಿಣಾಮಗಳ ಬಗೆಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಇಂಥದ್ದೊಂದು ಮಾದರಿ ಶಾಲೆಯನ್ನು ಪ್ರಾರಂಭಿಸುವ ಯತ್ನ ಸುಲಭವಾಗಿತ್ತೇ ಎಂದರೆ ಖಂಡಿತವಾಗಿಯೂ ಇಲ್ಲ.
ಅಸ್ಸಾಂ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ (ಇದು ಇಡೀ ಭಾರತದಲ್ಲಿ ಇಂದಿಗೂ ರೂಢಿಯಲ್ಲಿರುವ ಅನಾಗರಿಕ ಪದ್ಧತಿ) ಚಳಿಗಾಲ ಬಂತೆಂದರೆ ಸಾಕು ಸ್ಥಳೀಯರು ಅಲ್ಲಲ್ಲಿ ಬಿದ್ದಿರುವ ಪ್ಲಾಸ್ಟೀಕ್ ವಸ್ತುಗಳಿಗೆ ಬೆಂಕಿ ಹಾಕಿ ಚಳಿ ಬಿಡಿಸಿಕೊಳ್ಳುತ್ತಾ ಕುಳಿತಿರುತ್ತಾರೆ. ಅವರಿಗೆ ತಮ್ಮ ಘನಕಾರ್ಯದಿಂದ ಉಂಟಾಗುವ ಅಡ್ಡಪರಿಣಾಮಗಳ ಬಗೆಗೆ ಯಾವ ಯೋಚನೆಗಳೂ ಇರುವುದಿಲ್ಲ. ಈ ವಿಚಾರಗಳನ್ನೇ ಗಮನದಲ್ಲಿರಿಸಿಕೊಂಡ ಮಜಿನ್. ಜನರಲ್ಲಿ ಪ್ಲಾಸ್ಟೀಕ್ ತ್ಯಾಜ್ಯದ ನಿರ್ವಹಣೆಯ ಬಗೆಗೆ ಅರಿವು ಮೂಡಿಸುವ ನಿರ್ಧಾರಕ್ಕೆ ಬರುತ್ತಾರಲ್ಲದೇ ಅದನ್ನು ತಮ್ಮ ಕನಸಿನ ಶಾಲೆಯಿಂದಲೇ ಪ್ರಾರಂಭಿಸಬೇಕೆಂದು ಯೋಜನೆ ಹಾಕಿ ಕೊಳ್ಳುತ್ತಾರೆ. ಮಕ್ಕಳಿಗೆ ಕನಿಷ್ಢ ಶಿಕ್ಷಣ ಒದಗಿಸಲು ಸರಿಯಾದ ಪಠ್ಯಕ್ರಮದ ಅಗತ್ಯತೆ ಹೀಗೆ ಮುಂತಾದ ಸಮಸ್ಯೆಗಳು ಎದುರಾದಾಗ ಮಜಿನ್ ಮತ್ತು ಪರ್ಮಿತಾ ಸಹಾಯಕ್ಕೆ ಬಂದದ್ದು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ಸಂಸ್ಥೆ. ಈ ಸಂಸ್ತೆಯ ಸಹಕಾರದೊಂದಿಗೆ ಆರಂಭಗೊಂಡ ಅಕ್ಷರ್ ಶಾಲೆಯಲ್ಲಿ ಮೊದಲ ವರ್ಷ ದಾಖಲಾಗಿದ್ದು ೨೦ ಮಕ್ಕಳು ಮಾತ್ರ. ಆದರೆ ಇಂದು ಅದೇ ಸಂಸ್ಥೆಯಲ್ಲಿ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಶಾಲೆಯಲ್ಲಿ ೭ ಜನ ಶಿಕ್ಷಕರಿದ್ದಾರೆ.

ಜನ ಸಾಮನ್ಯರಲ್ಲಿ ಪ್ಲಾಸ್ಟೀಕ್ ತ್ಯಾಜ್ಯ ನಿರ್ವಹಣೆಯ ಬಗೆಗೆ ಜಾಗೃತಿ ಮೂಡಿಸುವ ಸಲುವಾಗಿ ಹುಟ್ಟಿಕೊಂಡ ಈ ಅಭಿಯಾನ ಇಂದು ನೂರಾರು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ ಎಂದರೆ ನಿಜಕ್ಕೂ ಹೆಮ್ಮೆಯ ಸಂಗತಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top