fbpx
ಸಮಾಚಾರ

ಕಷ್ಟದಲ್ಲಿದ್ದ ಈ ಹಿರಿಯ ನಟನಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ದರ್ಶನ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲದರಲ್ಲಿಯೂ ಭಿನ್ನ. ಹೊರ ಜಗತ್ತಿಗೆ ಕೊಂಚ ಒರಟಾಗಿ ಕಂಡರೂ ಎಲ್ಲರ ಬಗ್ಗೆಯೂ ಪ್ರೀತಿ ಮತ್ತು ಕಾಳಜಿ ಹೊಂದಿರೋದು ಅವರ ಅಸಲೀ ವ್ಯಕ್ತಿತ್ವ. ಬಹುಶಃ ಕರ್ನಾಟಕದಲ್ಲಿ ದರ್ಶನ್ ಅವರು ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವುದಕ್ಕೆ ಈ ವ್ಯಕ್ತಿತ್ವವೂ ಒಂದು ಕಾರಣವಾಗಿದ್ದಿರಬಹುದು..

ಈ ವಿಷ್ಯ ಈಗ ಏಕೆ ಹೇಳುತ್ತಿದ್ದೇವೆ ಅಂದರೆ, ದರ್ಶನ್ ಅವರು ಕನ್ನಡ ಚಿತ್ರರಂಗದ ಹಿರಿಯ ಕಲಾವಿದನ ಕಷ್ಟಕ್ಕೆ ತೆರೆ ಹಿಂದೆಯೇ ಸಹಾಯ ಮಾಡಿದ್ದು ಇದೀಗ ಬೆಳಕಿಗೆ ಬಂದಿದೆ. ಕನ್ನಡ ಚಿತ್ರರಂಗದಲ್ಲಿ ಸುಮಾರು ವರ್ಷಗಳ ಕಾಲ ಪೋಷಕ ನಟನಾಗಿ ಅಭಿನಯಿಸಿದ್ದ ಹಿರಿಯ ನಟ ಭರತ್ ಅವರು ಕಷ್ಟದಲ್ಲಿದ್ದಾಗ ದರ್ಶನ್ ಸಹಾಯ ಮಾಡಿದ್ರಂತೆ.. ಅದನ್ನು ಸ್ವತಃ ಭರತ್ ಅವರೇ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

 

 

“ಕಷ್ಟಕಾಲಕ್ಕೆ ಯಾರೊಬ್ಬರೂ ಬರಲಿಲ್ಲ. ದರ್ಶನ್​ ಮಾತ್ರ ನಂಗೆ ಸಹಾಯ ಮಾಡಿದರು. ಅವರನ್ನು ಭೇಟಿಯಾಗಿ ಥ್ಯಾಂಕ್ಸ್ ಹೇಳಬೇಕೆಂದಿದ್ದೇನೆ.” ಎಂದು ಭರತ್ ಹೇಳಿದ್ದಾರೆ.

300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಭರತ್ ಎಂಬ ಖಳನಾಯಕ ಸ್ಯಾಂಡಲ್​ವುಡ್​ನಿಂದ ಏಕಾಏಕಿ ಮರೆಯಾಗಿದ್ದರು. ತಲೆಗೆ ಸ್ಟ್ರೋಕ್​ ಆಗಿದ್ದರ ಪರಿಣಾಮ ಹಿರಿಯ ನಟ ಚಿತ್ರರಂಗದಿಂದ ದೂರ ಉಳಿದಿದ್ದರು. ಅಷ್ಟೇ ಅಲ್ಲದೆ ಕಳೆದ ಎಂಟು ವರ್ಷಗಳಿಂದ ಹಣವಿಲ್ಲದೆ ಚಿಕಿತ್ಸೆಗಾಗಿ ಪರದಾಡಿದ್ದರು. ಚಿತ್ರರಂಗದಲ್ಲಿ ಅನೇಕರ ಬಳಿ ಸಹಾಯ ಹಸ್ತಕ್ಕಾಗಿ ಕೈ ಚಾಚಿದರೂ ಭರವಸೆಗಳು ಸಿಕ್ಕಿತ್ತೇ ಹೊರತು ಯಾರೂ ಕೂಡ ಸಹಾಯ ಮಾಡಿರಲಿಲ್ಲ. ಆದರೆ ಭರತ್ ಅವರಿಗೆ ದರ್ಶನ್ ಸಹಾಯ ಮಾಡಿದ್ದರಂತೆ.

ಇದೀಗ ಗುಣಮುಖರಾಗಿ ಭರತ್ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ಜಲ್ಲಿಕಟ್ಟು’ ಎಂಬ ಚಿತ್ರದಲ್ಲಿ ಮತ್ತೆ ಖಳನಾಗಿ ಘರ್ಜಿಸಲು ತಯಾರಿ ನಡೆಸುತ್ತಿದ್ದಾರೆ. ಇದೇ ವೇಳೆ ತಮ್ಮ ಜೀವ ಉಳಿಸಿದ ದರ್ಶನ್​ರನ್ನು ನೆನೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top