fbpx
ಸಮಾಚಾರ

ನೀವು ಮಧ್ಯಪ್ರಿಯರಾಗಿದ್ದರೆ ನಿಮಗೆ ಈ ಸುದ್ದಿ ಖಂಡಿತ ಖುಷಿ ಕೊಡುತ್ತದೆ.

ನಿಮಗೆ ಇನ್ಮುಂದೆ ಬಿಯರ್ ಕುಡಿಯಬೇಕು ಎಂದಾಗಲೆಲ್ಲ ಬಾರ್ ಗಳಿಗೆ ಹೋಗಿ ರಶ್ ನಲ್ಲಿ ನಿಂತು ಪರದಾಡಿ ಕೇಸ್ ಗಟ್ಟಲೇ ಬಿಯರ್ ಬಾಟಲ್ ಗಳನ್ನು ಹೊತ್ತು ಮನೆಗೆ ತರುವ ಪ್ರಯಾಸವೇ ಇಲ್ಲ.

ನಿಮ್ಮ ಪ್ರಯಾಸಕ್ಕೆ ಬ್ರೇಕ್ ಹಾಕಲು ‘ಕಿಂಗ್ ಫಿಶರ್’ ಬಿಯರ್ ಉತ್ಪಾದಕ ಸಂಸ್ಥೆ ಮುಂದಾಗಿದೆ.ವಿಡಿಯೋ ನೋಡಿ

ಇನ್ಸ್ಟಂಟ್ ಕಾಫಿ ಪೌಡರ್, ಮಿಲ್ಕ್ ಪೌಡರ್ ನಮ್ಮ ದೇಸಿ ಮಾರುಕಟ್ಟೆಗೆ ಲಗ್ಗೆ ಇಟ್ಟು ಬಹುದಿನಗಳಾಗಿವೆ.ಇದೀಗ ಈ ಸಾಲಿಗೆ ಬಿಯರ್ ಕೂಡ ಸೇರುತ್ತಿದೆ. ಹೌದು ಇನ್ಸ್ಟಂಟ್ ಬಿಯರ್ ಮಿಕ್ಸ್ ಸದ್ಯದಲ್ಲೇ ನಮ್ಮ ಮಧ್ಯ ಪ್ರಿಯರ ಕೈಸೇರಲಿದೆ. ಈ ಬಿಯರ್ ಮಿಕ್ಸ್ ಪೌಡರ್ ಚಿಕ್ಕ ಸ್ಯಾಶೆ ಪ್ಯಾಕ್ನಲ್ಲಿ ಲಭ್ಯವಾಗಲಿದ್ದು, ಈ ಪೌಡರ್ ಅನ್ನು ಚಿಲ್ಡ್ ನೀರಿನಲ್ಲಿ ನಿಯಮಿತವಾಗಿ ಬೇರಸುವುದರೊಂದಿಗೆ ನಿಮ್ಮ ಇನ್ಸ್ಟಂಟ್ ಬಿಯರ್ ಯಾವುದೇ ತಾಪತ್ರಯವಿಲ್ಲದೆ ಚುಟುಕೆಯಲ್ಲಿ ತಯಾರಾಗುತ್ತದೆ. ನೀವು ಬಯಸಿದಾಗಲೆಲ್ಲ ನಿಮಿಷಗಳಲ್ಲಿ ನಿಮಗೆ ಪ್ರಿಯವಾದ ಬಿಯರ್ ಸಿದ್ಧವಾಗುತ್ತದೆ.

ಈಗಾಗಲೇ ಬಿಯರ್ ಪೌಡರ್ ಪಾಶ್ಚಾತ್ಯ ರಾಷ್ಟ್ರಗಳ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಕಿಂಗ್ ಫಿಶರ್ ಭಾರತದಲ್ಲೂ ಈ ಸಾಹಸಕ್ಕೆ ಮುಂದಾಗಿದ್ದು. ಇನ್ಸ್ಟಂಟ್ ಬಿಯರ್ ಮಿಕ್ಸ್ ಯಾವಾಗ ನಮ್ಮ ದೇಸಿ ಮಧ್ಯಪ್ರಿಯರ ಕೈ ಸೇರುತ್ತದೆ ಎಂಬುದು ಸದ್ಯದ ಕುತೂಹಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top