fbpx
ಸಮಾಚಾರ

ತಂದೆಯನ್ನು ನೆನೆದು ರಾತ್ರೋರಾತ್ರಿ ಆಟೋ ಓಡಿಸಿದ ನಟ ಜಗ್ಗೇಶ್.

ಸಿನಿಮಾ ಹೊರತಾಗಿಯೂ ಬೇರೆ ಬೇರೆ ವಿಚಾರಗಳಿಗೆ ಗಮನ ಸೆಳೆಯುವ ನವರಸನಾಯಕ ನಟ ಜಗ್ಗೇಶ್ ನಿನ್ನೆ ರಾತ್ರಿ ಆಟೋ ಡ್ರೈವ್ ಮಾಡಿ, ತಮ್ಮ ಹಳೆಯ ನೆನಪನ್ನ ಮೆಲುಕು ಹಾಕಿದ್ದಾರೆ. ಬೆಂಗಳೂರಿನ ರಸ್ತೆಯಲ್ಲಿ ಆಟೋ ಡ್ರೈವ್ ಮಾಡುತ್ತಾ ಅಪ್ಪನನ್ನು ನೆನೆಸಿಕೊಂಡಿದ್ದಾರೆ.

 

View this post on Instagram

ಇಂದು ರಾತ್ರಿ ನಾನು #ಆಟೋರಾಜ ಆದಾಗ.. 1979/80 ಅಪ್ಪ ನನಗೆ ನಿನ್ನ ಅನ್ನ ನೀನೆ ದುಡಿದು ತಿನ್ನು ಆಗ ಬದುಕಿನ ಅರ್ಥ ನಿನಗಾಗುವುದು ಎಂದಾಗ ಅಂದು ನನಗೆ #ಮೈಯೂರ ಚಿತ್ರದ #interval ದೃಶ್ಯದ ರಾಜಣ್ಣ ನಂತೆ ಶಪಥಮಾಡಿ ಮನೆಬಿಟ್ಟು ಹೋಗಿ ಮೈಸೂರಿನಲ್ಲಿ ಆಟೋ ಡ್ರೈವರ್ ಆಗಿದ್ದೆ.! ಆಗ ನನಗೆ ಇದ್ದ ಆಸೆ ಒಂದೆ ಜೀವನದಲ್ಲಿ ಒಂದು ಆಟೋ ಸ್ವಂತ ಪಡೆದು ದಿನ 100ರೂ ದುಡಿಯುವ ಮನುಷ್ಯನಾಗಿ ಅಪಮಾನಿಸಿದ ಅಪ್ಪನ ಮುಂದೆ ಮೀಸೆ ತಿರುವಿ ಬದುಕಬೇಕು ಎಂದು!ಬದುಕಿಗೆ ಬುದ್ಧಿ ಹೇಳುವ #ಅಪ್ಪ ಅಂದು ಶತೃವಂತೆ ಕಂಡ.! ಇಂದು ಆಕಸ್ಮಿಕ ಒಬ್ಬ ಆಟೋರಿಕ್ಷಾ ಸಹೋದರ ಸಿಕ್ಕಾಗ ಅವನ ಅನುಮತಿ ಪಡೆದು ಆಟೋ ಓಡಿಸಿದೆ!ಅಪ್ಪ ಹಾಗು ನನ್ನ ಮನಸ್ಥಾಪದ ದಿನಗಳು ನೆನಪಾಗಿ #ಅಪ್ಪ ಎಂಥ ಶ್ರೇಷ್ಟ.. ಮಗ ನಾನು ಎಂಥ ಅಧಮ.!ವ್ಯೆತ್ಯಾಸ ನನ್ನ ತಲೆತಗ್ಗಿಸುವಂತೆ ನಾಚಿಕೆಯಾಯಿತು..! ಮಗ ಬದುಕು ಕಲಿಯಲಿ ಎಂದು ಅಪ್ಪ ಆಡಿದ ಮಾತೆಲ್ಲಾ ಅಣಕ ಅಪಮಾನದಂತೆ ಕೇಳುತ್ತಿತ್ತು ರಕ್ತ ಬಿಸಿಯಿದ್ದಾಗ..! ಅದರೆ ಈಗ? ನೀವು ಬೈದು ಬುದ್ಧಿ ಹೇಳುತ್ತಿದ್ದ ಮಗ ಇಂದು ತಾತನಾಗಿ ಬದುಕಿನ ಪುಟಗಳ ಮೆಲುಕುಹಾಕಿದಾಗ ಅಪ್ಪ ಎಂಥ ಶ್ರೇಷ್ಟಮನುಜ ನೀನು ಅನ್ನಿಸಿತು..!ತಪ್ಪಾಯಿತು ಕ್ಷಮಿಸಿ ಅಂದರು ಕೇಳದಷ್ಟು ದೂರದ ಊರಿಗೆ ಹೋಗಿಬಿಟ್ಟೆ..! ಕ್ಷಮೆಕೇಳಲು ನಾನು ನೀನಿರುವ ಜಾಗಕ್ಕೆ ಬರಬೇಕು..!ಇನ್ನು ಅನೇಕ ಕಾರ್ಯವಿದೆ ಮುಗಿಸಿ ಮಾಗಿದಾಗ ದೇಹ ನಿನ್ನಲ್ಲಿಗೆ ಬರುವೆ!ಆಗಲಾದರು ಕ್ಷಮಿಸು.!ಎಷ್ಟೇ ಆದರು ನಾನು ನಿನ್ನ ಮಗನಲ್ಲವೆ..! ಒಂದಂತು ನಿನಗೆ ಸಮಾಧಾನ ಆಗುತ್ತದೆ!ಅಪ್ಪ ನಾನು ಶ್ರಮಿಸಿ ನಿನ್ನ ವಂಶದ ಹೆಸರು ಉಳಿಸಿರುವೆ! ನೀನು ಅಮ್ಮ ಗರ್ವಪಡುತ್ತೀರಿ ನನ್ನ ಸಾಧನೆಕಂಡು..!love you pa..ever loving son..ನಿಮ್ಮ ಈಶ..ಎನ್ನಬೇಕು ಅನ್ನಿಸಿತು ಜನ್ಮ.. ತಂದೆತಾಯಿ ನಡೆದಾಡುವ ದೇವರು ಬದುಕಿದ್ದಾಗಲೆ ಗೌರವಿಸಿ! ಕಳೆದುಕೊಂಡ ಮೇಲೆ ಪರಿತಪಿಸಿದರು ಮತ್ತೆ ಸಿಗರು… ಶುಭರಾತ್ರಿ ……….

A post shared by Jaggesh Shivalingappa (@actor_jaggesh) on

 

ನಟ ಜಗ್ಗೇಶ್ ಆಟೋ ಓಡಿಸಿರುವ ವಿಡಿಯೋ ಹಂಚಿಕೊಂಡಿದ್ದು, ತಮ್ಮ ಹಳೆಯ ನೆನಪುಗಳನ್ನು ನೆನಸಿಕೊಂಡಿದ್ದಾರೆ. ‘ಇಂದು ರಾತ್ರಿ ನಾನು ಆಟೋರಾಜ ಆದಾಗ’ ಎಂದು ಟೈಟಲ್ ಕೊಟ್ಟು, “1979-80ರಲ್ಲಿ ಅಪ್ಪ ನನಗೆ ನಿನ್ನ ಅನ್ನ ನೀನೆ ದುಡಿದು ತಿನ್ನು ಆಗ ಬದುಕಿನ ಅರ್ಥ ನಿನಗಾಗುವುದು ಎಂದಿದ್ದರು. ಅಂದು ನನಗೆ ಮೈಯೂರ ಚಿತ್ರದ #interval ದೃಶ್ಯದ ರಾಜಣ್ಣ ನಂತೆ ಶಪಥಮಾಡಿ ಮನೆಬಿಟ್ಟು ಹೋಗಿ ಮೈಸೂರಿನಲ್ಲಿ ಆಟೋ ಡ್ರೈವರ್ ಆಗಿದ್ದೆ. ಆಗ ನನಗೆ ಇದ್ದ ಆಸೆ ಒಂದೇ ಜೀವನದಲ್ಲಿ ಒಂದು ಆಟೋ ಸ್ವಂತ ಪಡೆದು, ದಿನ 100ರೂ ದುಡಿಯುವ ಮನುಷ್ಯನಾಗಿ ಅಪಮಾನಿಸಿದ ಅಪ್ಪನ ಮುಂದೆ ಮೀಸೆ ತಿರುವಿ ಬದುಕಬೇಕು” ಎಂದು ಬರೆದಿದ್ದಾರೆ.

ಇಂದು ಆಕಸ್ಮಿಕ ಒಬ್ಬ ಆಟೋರಿಕ್ಷಾ ಸಹೋದರ ಸಿಕ್ಕಾಗ ಅವನ ಅನುಮತಿ ಪಡೆದು ಆಟೋ ಓಡಿಸಿದೆ!ಅಪ್ಪ ಹಾಗು ನನ್ನ ಮನಸ್ಥಾಪದ ದಿನಗಳು ನೆನಪಾಗಿ #ಅಪ್ಪ ಎಂಥ ಶ್ರೇಷ್ಟ.. ಮಗ ನಾನು ಎಂಥ ಅಧಮ.!ವ್ಯೆತ್ಯಾಸ ನನ್ನ ತಲೆತಗ್ಗಿಸುವಂತೆ ನಾಚಿಕೆಯಾಯಿತು..! ಎಂದು ಪಶ್ಚಾತ್ತಾಪಪಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top