fbpx
ಸಮಾಚಾರ

ಜಗ್ಗೇಶ್ ಕನಸಿನ ಮನೆ ಕಟ್ಟಲು ಕಾರಣವಾಯ್ತು ಆ ಒಂದು ಸಿನೆಮಾ.

ನವರಸ ನಾಯಕ ಜಗ್ಗೇಶ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತರಲೆ ಮಾತನಾಡುತ್ತ ಪಂಚಿಂಗದ್ ಡೈಲಾಗ್ ಹೊಡೆಯುತ್ತ ಪ್ರೇಕ್ಷಕರನ್ನು ನಕ್ಕು ನಗಿಸುತ್ತಲೇ ೧೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಕೀರ್ತಿ ಜಗ್ಗೇಶ್ ಅವರಿಗಿದೆ.

ತಮ್ಮ ಹಾಸ್ಯಪ್ರಜ್ಞೆಯಿಂದ ಪ್ರೇಕ್ಷಕರನ್ನು ಮಾತ್ರವಲ್ಲದೆ ತಮ್ಮ ಸಹ ಕಲಾವಿದರನ್ನು ಬೆರಗುಗೊಳಿಸುವ ಜಗ್ಗೇಶ್ ಇವತ್ತಿಗೆ ಕನ್ನಡ ಚಿತ್ರರಂಗದ ದಿಗ್ಗಜ ನಟುರುಗಳಲ್ಲಿ ಒಬ್ಬರು. ಆದರೆ ಜಗ್ಗೇಶ್ ಸಿನಿ ಪಯಣದ ಮೊದಲ ದಿನಗಳು ನಾವು ನೀವು ಊಹಿಸುವಷ್ಟು ಸುಲಭವಾಗೇನೂ ಇರಲಿಲ್ಲ ೯೦ ರ ದಶಕದ ಚಿತ್ರಗಳಲ್ಲಿ ಪುಟ್ಟ ಪಾತ್ರವೊಂದನ್ನು ದಕ್ಕಿಸಿಕೊಳ್ಳಲು ನವರಸ ನಾಯಕ ಪಟ್ಟ ಪಾಡು ಅಷ್ಟಿಟ್ಟಲ್ಲ ಎಂಬುದು ಅವರ ಬಾಯಿಂದಲೇ ಹಲವು ಬಾರಿ ಕೇಳಿದ್ದೇವೆ.

ಇತ್ತೀಚೆಗೆ ತಮ್ಮ ಸಿನಿ ಪಯಣದ ಮೊದಲ ದಿನಗಳನ್ನು ಮೆಲುಕು ಹಾಕಿರುವ ಜಗ್ಗೇಶ್ ತಮ್ಮ ನಟನೆಯ ‘ಬೇವು ಬೆಲ್ಲ’ ಚಿತ್ರದ ನೆನಪುಗಳನ್ನು ಭಾವನಾತ್ಮಕವಾಗಿ ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

“ಅಂದು ಬೇವು ಬೆಲ್ಲ ಚಿತ್ರದಲ್ಲಿನ ನನ್ನ ನಟನೆಗೆ ಸಿಕ್ಕ ಪ್ರತಿಪಲ ನಾನು ಮಲ್ಲೇಶ್ವರದಲ್ಲಿ 32/58 ಜಾಗವನ್ನು ಕೊಂಡು ಮನೆ ಕಟ್ಟಲು ಸಾಧ್ಯವಾಯಿತು. ಇಂದು ಅದೇ ಜಾಗ ಸುಮಾರು 6 ಕೋಟಿಗೆ ಬೆಲೆ ಬಾಳುತ್ತದೆ. ಅಂದಿನ ಸಂಭಾವನೆ ಘನತೆ ನಡೆದುಬಂದ ದಾರಿ…ಕನ್ನಡಿಗರ ಚಪ್ಪಾಳೆ, ಬೆಂಬಲವನ್ನು ನೆನೆದಾಗ ಹೆಮ್ಮೆ ಅನ್ನಿಸುತ್ತದೆ. ಹಳ್ಳಿ ಹುಡುಗನ ಬದುಕಿನ ಸುವರ್ಣಕಾಲವನ್ನು ಶೃಷ್ಟಿಸಿದ ಚಿತ್ರಗಳು ಅಂದು ಇಂದು ಮುಂದು. ಎನ್ನುವ ಮೂಲಕ ಜಗ್ಗೇಶ್ ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top