fbpx
ಸಮಾಚಾರ

ಕುಮಾರಸ್ವಾಮಿಗೆ ಸ್ವಾಗತ ಕೋರಿದ ಬಿಜೆಪಿಗೆ ತಿರುಗೇಟು ಕೊಟ್ಟ ಜೆಡಿಎಸ್.

ಕಳೆದ ಕೆಲವು ದಿನಗಳಿಂದ ರೆಸಾರ್ಟ್‌ ವಾಸ್ತವ್ಯ ಮಾಡುತ್ತಿರುವ ಕುಮಾರಸ್ವಾಮಿ ಭಾನುವಾರ ಬೆಂಗಳೂರಿಗೆ ಆಗಮಿಸುವ ಸಂದರ್ಭದಲ್ಲಿ ಬಿಜೆಪಿ “ವೆಲ್‌ ಕಮ್‌ ಟು ಬೆಂಗಳೂರು ಕುಮಾರಸ್ವಾಮಿ ಅವರೇ” ರೀತಿ ಸ್ವಾಗತ ಕೋರುವ ಮೂಲಕ ಲೇವಡಿ ಮಾಡಿದೆ. ಮುಖ್ಯಂತ್ರಿ ಕುಮಾರಸ್ವಾಮಿಯವರ ಮಡಿಕೇರಿ ಇಬ್ಬನಿ ರೆಸಾರ್ಟ್ ವಾಸ ಇಂದಿಗೆ ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಟ್ವೀಟ್ ಮೂಲಕ ಅವರನ್ನು ಬೆಂಗಳೂರಿಗೆ ಸ್ವಾಗತಿಸಿದೆ.

 

‘ಸಿಎಂ ಕುಮಾರಸ್ವಾಮಿಯವರಿಗೆ ಬೆಂಗಳೂರಿಗೆ ಹಾರ್ದಿಕ ಸ್ವಾಗತ, ರೆಸಾರ್ಟ್ ವಾಸ್ತವ್ಯದಿಂದ ನೀವು ಸಾಕಷ್ಟು ವಿಶ್ರಾಂತಿ ಪಡೆದಿದ್ದೀರಿ ಎಂದು ಣಾವು ಭಾವಿಸುತ್ತೇವೆ

ಮುಖ್ಯಮಂತ್ರಿಗಳ ರೆಸಾರ್ಟ್ ವಾಸ್ತವ್ಯ ಅಂತ್ಯವಾಗಿದ್ದು, ಮುಂದೇನು?
ಇನ್ನೇನಾದರೂ ಬೇರೆ ರೆಸಾರ್ಟ್ ಗೆ ತೆರಳುವವರಿದ್ದೀರಾ?
ವಿದೇಶ ಪ್ರವಾಸದ ಯೋಜನೆ ಏನಾದರೂ ಇದೆಯೆ?
ಕಣ್ಣೀರು ಹಾಕುವ ಕಾರ್ಯಕ್ರಮ?
ಬಿಜೆಪಿಯನ್ನು ದೂರುವ ಕಾರ್ಯಕ್ರಮಗಳಿದೆಯೆ? “ ಎಂದೂ ಕೂಡ ಬಿಜೆಪಿ ಪ್ರಶ್ನೆಸಿದೆ.

ಬಿಜೆಪಿ ಮಾಡಿದ್ದ ಟ್ವೀಟ್‌ಗೆ ಜೆಡಿಎಸ್‌ ತಿರುಗೇಟು ನೀಡಿದೆ. “ಬಿಜೆಪಿ ಆಡಳಿತದಲ್ಲಿ 5 ವರ್ಷಗಳಲ್ಲಿ ಮೂರು ಸಿಎಂಗಳು ಬದಲಾದರು. ಮುಖ್ಯಮಂತ್ರಿಗಳು ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋದರು. ಈಗ ಕುದುರೆ ವ್ಯಾಪಾರದ ಮೂಲಕ ಸರ್ಕಾರ ಬೀಳಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಬೇರೆಯವರ ಕಡೆಗೆ ಬೆರಳು ತೋರಿಸುವುದನ್ನು ನಿಲ್ಲಿಸಿ” ಎಂದು ಜೆಡಿಎಸ್ ಟ್ವೀಟ್ ಮಾಡಿದ್ದು ಈ ಮೂಲಕ ಬಿಜೆಪಿಗೆ ಟಾಂಗ್ ಕೊಟ್ಟಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top