fbpx
ಸಮಾಚಾರ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆಚ್ಚಿನ ಕ್ರಿಕೆಟರ್ ಯಾರಂತೆ ಗೊತ್ತಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗ `ಡಿ ಕಂಪೆನಿ’ ಹಮ್ಮಿಕೊಂಡಿರುವ `ಡಿ ಬ್ರದರ್ಸ್ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ಸಿಕ್ಕಿದೆ. ದರ್ಶನ್ ಅವರ ಅಭಿಮಾನಿ ಬಳಗ ಹತ್ತು ತಂಡಗಳಾಗಿ ಈ ಪದ್ಯಾಟದಲ್ಲಿ ಭಾಗಿಯಾಗಿವೆ.

ಅಭಿಮಾನಿ ಬಳಗದಿಂದ ಆಯೋಜನೆ ಮಾಡಲಾಗಿರುವ 2019ರ ಡಿ ಬ್ರದರ್ಸ್ ಪ್ರೀಮಿಯರ್ ಲೀಗ್​ಗೆ ಚಾಲನೆ ನೀಡಿ ಮಾತನಾಡಿದ ಅವರು ನಾನು ಬರೀ ಮನರಂಜನೆ ಮಾಡುತ್ತೇನಷ್ಟೇ, ಅಭಿಮಾನಿಗಳೇ ಖರ್ಚು ಹಾಕಿಕೊಂಡು ಆಯೋಜನೆ ಮಾಡಿಕೊಂಡಿದ್ದಾರೆ. ಎಲ್ಲಾ ಜಿಲ್ಲೆಗಳಿಂದ ಅಭಿಮಾನಿಗಳು ಬರುತ್ತಾರೆ. ನಾಲ್ಕು ವರ್ಷಗಳಿಂದ ಆಡುತ್ತಿದ್ದಾರೆ ನನಗೆ ಖುಷಿ ಆಗುತ್ತದೆ ಎಂದು ತಿಳಿಸಿದರು. ಇದೆ ವೇಳೆ ತಮ್ಮಿಷ್ಟದ ಕ್ರಿಕೆಟರ್ ನನ್ನಿಷ್ಟದ ಕ್ರಿಕೆಟರ್​ ಅಂದರೆ ಸಚಿನ್​ ತೆಂಡೂಲ್ಕರ್ ಎಂದು ಕೂಡ ಹೇಳಿದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳೆಲ್ಲ ಈ ಕ್ರಿಕೆಟ್ ಪಂದ್ಯಾಟದ ಬಗ್ಗೆ ಕುತೂಹಲಗೊಂಡಿದ್ದಾರೆ. ಕರ್ನಾಟಕದ ನಾನಾ ಭಾಗಗಳಿಂದ ತಂಡೋಪತಂಡವಾಗಿ ಈ ಕ್ರೀಡಾಂಗಣಕ್ಕೆ ಆಗಮಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ. ಅಂದಹಾಗೆ ದರ್ಶನ್ ಅಭಿಮಾನಿಗಳು ಹತ್ತು ತಂಡಗಳೊಂದಿಗೆ ಈ ಕ್ರಿಕೆಟ್ ಸೆಣೆಸಾಟದ ಕಣದಲ್ಲಿದ್ದಾರೆ. ಪ್ರತೀ ಟೀಮಿಗೂ ದರ್ಶನ್ ಅಭಿನಯದ ಹಿಟ್ ಸಿನಿಮಾಗಳ ಹೆಸರನ್ನಿಟ್ಟಿರೋದು ವಿಶೇಷ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top