fbpx
ಸಮಾಚಾರ

ಮಲೇಷಿಯಾದಲ್ಲಿ ಚಿನ್ನದ ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದ ಬಡ ಆಟೋ ಡ್ರೈವರ್ ಮಗಳು.

ಗೆಲುವೆಂಬುದು ‘ಮಾರು ದೂರ ನಡೆದಾಕ್ಷಣ ಎದುರಾಗಿ ಬಿಡುವ ಮಾಯಾದಂಡ’ ಅಂತಾ ನಂಬಿ ಕೂತ ಅನೇಕರಿದ್ದಾರೆ. ಆದರದು ಕೈಕಾಲಿನ ಕಸುವನ್ನೆಲ್ಲ ಬಸಿದು ಪ್ರಯತ್ನಿಸಿದರೂ ಸಿಕ್ಕಂತೆ ಮಾಡಿ ಆಟವಾಡಿಸೋ ಮಾಯಾವಿ ಎಂಬ ವಿಚಾರ ಕಷ್ಟ ಪಟ್ಟವರಿಗೆ, ಅದರ ಫಲವಾಗಿಯೇ ಗೆದ್ದವರಿಗಲ್ಲದೆ ಬೇರ‍್ಯಾರಿಗೂ ಅರ್ಥವಾಗಲು ಸಾಧ್ಯವಿಲ್ಲ. ಈಗ ಯಾಕೆ ಮಾತು ಅಂತೀರಾ? ಆಟೋ ಡ್ರೈವರ್ ಮಗಳೊಬ್ಬಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹೆಮ್ಮೆ ತಂದಿದ್ದಾಳೆ.

ಮಲೇಷಿಯಾದಲ್ಲಿ ನಡೆದ ಇಂಟರ್ ನ್ಯಾಶನಲ್ ಕರಾಟೆ ಓಪನ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ನಾಡಿಗೆ ದೇಶಕ್ಕೆ ಕೀರ್ತಿ ತಂದಿದ್ದಾಳೆ ಆಟೋ ಡ್ರೈವರ್ ಮಗಳು ರುಮನಾ ಕೌಸರ್​. ಮೇ.3 ರಿಂದ 5 ರ ವರೆಗೆ ಮಲೇಷಿಯಾದಲ್ಲಿ ನಡೆದ ಇಂಟರ್ ನ್ಯಾಶನಲ್ ಕರಾಟೆ ಓಪನ್ ಚಾಂಪಿಯನ್ ಶಿಪ್ ನಲ್ಲಿ ನಡೆದಿತ್ತು. ಈ ಚಾಂಪಿಯನ್​ಶಿಪ್​ನಲ್ಲಿ ಭಾರತದ ಪರವಾಗಿ ಭಾಗವಹಿಸಿದ್ದ ರುಮನಾ ಕೌಸರ್​ ಫೈನಲ್​ ಪಂದ್ಯದಲ್ಲಿ ಗೆಲ್ಲುವ ಮೂಲಕ ಚಿನ್ನದ ಪದಕ ಗಳಿಸಿದ್ದಾಳೆ. ಅಲ್ಲದೆ ವಿದೇಶದಲ್ಲೂ ಭಾರತ ಕೀರ್ತಿ ಪತಾಕೆ ಹಾರಿಸಿದ್ದಾಳೆ.

ರುಮನಾ ಕೌಸರ್​ ಕೋಲಾರ ಸಾರಿಗೆ ನಗರದ ರಷೀದ್ ಅಹ್ಮದ್, ಶಬನಾ ದಂಪತಿಯ ಪುತ್ರಿ. ದ್ವಿತೀಯ ವರ್ಷದ ಪ್ಯಾರಾ ಮೆಡಿಕಲ್ ಪದವಿ ಶಿಕ್ಷಣ ಪಡೆಯುತ್ತಿರುವ ಈಕೆ ಚಿಕ್ಕ ವಯಸ್ಸಿನಿಂದಲೇ ಕರಾಟೆಯಲ್ಲಿ ತುಂಬಾನೇ ಆಸಕ್ತಿ. ಆದರೆ, ಮನೆಯ ಬಡತನ ಆಕೆಯ ಕನಸಿಗೆ ಅಡ್ಡಿಯಾಗಿತ್ತು. ಆದರೆ ರಷೀದ್​ ಅಹಮದ್ ಬಡತನದ ನಡುವೆಯೂ ಮಗಳ ಬೆನ್ನಿಗೆ ನಿಂತಿದ್ದರು.

ತಮ್ಮ ಬಳಿಯಿದ್ದ ಬಾಡಿಗೆ ಆಟೋವನ್ನು ಹಗಳಿರುವ ಓಡಿಸಿ ದುಡಿದು ತರುತ್ತಿದ್ದ ಚಿಲ್ಲರೆ ಹಣದಲ್ಲೇ ಮನೆ ನಿರ್ವಹಣೆಯ ಜೊತೆಗೆ ಮಗಳ ಓದು ಹಾಗೂ ಕರಾಟೆಗೂ ಹಣ ಒದಗಿಸಿದ್ದರು. ಕೊನೆಗೂ ಸತತ ಪ್ರಯತ್ನದಿಂದಾಗಿ ತಂದೆಯ ಸಹಕಾರದಿಂದಾಗಿ ರುಮಾನಾ ಕೌಸರ್ ಸಾಧನೆಯ ಶಿಖರವೇರಿದ್ದಾಳೆ. ವಿದೇಶದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ದೇಶಕ್ಕೂ ನಾಡಿಗೂ ಕೀರ್ತಿ ತಂದಿದ್ದಾಳೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top