fbpx
ಸಮಾಚಾರ

ಬ್ಲಾಕ್ ಕಾಫಿ ಕುಡಿಯುವುದರಿಂದ ಕ್ಯಾನ್ಸರ್ ನಿಂದ ಮುಕ್ತಿ ಪಡೆಯಬಹುದಂತೆ.

ದಕ್ಷಿಣ ಭಾರತ ಬಹುತೇಕ ಕಾಫಿ ಪ್ರಿಯರಿಂದ ಕೂಡಿದೆ. ನಮ್ಮ ಜನರಿಗೆ ಕಾಫಿ ಮೇಲಿರುವ ಪ್ರೀತಿಯನ್ನೇ ಬಂಡವಾಳವಾಗಿರಿಸಿಕೊಂಡ ಹಲವು ಉದ್ಯಮಿಗಳು ತರಹೇವಾರಿ ಕಾಫಿ ಸೆಂಟರ್ ಗಳನ್ನು ತೆರೆದು ಎಂದೂ ಕೇಳಿರದ ಹೆಸರಿನ ಕಾಫಿ ವೆರೈಟಿಗಳನ್ನು ತಯಾರಿಸಿ ಗ್ರಾಹಕರ ಮೇಲೆ ಸತತ ಪ್ರಯೋಗಗಳನ್ನು ನಡೆಸುತ್ತಲೇ ಇರುತ್ತಾರೆ. ಫಿಲ್ಟರ್ ಕಾಫಿ, ಇನ್ಸ್ಟಂಟ್ ಕಾಫಿ, ಕೋಲ್ಡ್‌ ಕಾಫಿ ಹೀಗೆ ವಿಧ ವಿಧದ ಕಾಫಿ ಸವಿಯಲು ಮುಗಿ ಬಿಳುವ ಜನಗಳು ಒಂದೆಡೆಯಾದರೆ ಅಯ್ಯೋ ಕಾಫಿ ಆರೋಗ್ಯಕ್ಕೆ ಒಳ್ಳೆದಲ್ಲ ಕಣ್ರೀ ಎನ್ನುತ್ತಾ ಪ್ರತಿರೋಧ ಒಡ್ಡುವವರ ಸಂಖ್ಯೆಯೂ ಕಡಿಮೆ ಇಲ್ಲ. ಹೀಗೆ ಕಾಫಿಯ ಪರ ವಿರೋಧವಾಗಿ ಭಾ‍ಷಣ ಬಿಗಿಯುವವರು ತಿಳಿದುಕೊಳ್ಳಲೇಬೇಕಾದ ಅಂಶವೊಂದಿದೆ. ಅದೇನೆಂದರೆ ‘ಬ್ಲಾಕ್‌ ಕಾಫಿ’ ನಿಜವಾಗಿಯೂ ಆರೋಗ್ಯಕ್ಕೆ ಉತ್ತಮ ‘ಹಾಟ್‌ ಡ್ರಿಂಕ್’‌ ಅಂತೆ.

ನೆನಪಿನ ಶಕ್ತಿ ವೃದ್ಧಿಸುತ್ತದೆ
ಬೆಳಗ್ಗೆ ಎದ್ದ ತಕ್ಷಣ ಬ್ಲಾಕ್‌ ಕಾಫಿ ಕುಡಿಯುವುದರಿಂದ ಮಿದುಳು ಚುರುಕಾಗುತ್ತದೆ. ನಿಮ್ಮ ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ. ಮಿದುಳಿನ ನರಗಳನ್ನು ಕ್ರಿಯಾಶೀಲವಾಗಿರಿಸುವುದು ಮಾತ್ರವಲ್ಲದೆ, ಮರೆವಿನ ಕಾಯಿಲೆಗಳನ್ನು ನಿಮ್ಮ ಹತ್ತಿರಕ್ಕೂ ಸುಳಿಯಲು ಬಿಡುವುದಿಲ್ಲ

ವ್ಯಾಯಾಮದಂಥ ಚಟುವಟಿಗಳಿಗೆ ಸಹಕಾರಿ
ದೈಹಿಕ ಆರೋಗ್ಯವನ್ನು ಅತ್ಯುತ್ತಮವಾಗಿರುವಲ್ಲಿ ಬ್ಲಾಕ್‌ ಕಾಫಿ ಸಹಕಾರಿ. ದೇಹದ ಎಲ್ಲ ನರಗಳನ್ನು ಆಕ್ಟಿವ್‌ ಆಗಿಸುವುದರಿಂದ ನಿಮ್ಮ ವರ್ಕೌಟ್‌ ಸೆಸಷನ್‌ನಲ್ಲಿ ನಿಮ್ಮನ್ನು ಕ್ವಿಕ್‌ ಆಗಿರಿಸುತ್ತದೆ. ನಿಮ್ಮ ದೇಹದ ಅಡ್ರಿನಲಿನ್‌ ಅಂಶವನ್ನು ಹೆಚ್ಚಿಸುವುದರಿಂದ ದೈಹಿಕ ಚಟುವಟಿಕೆಗೆ ಸಹಕಾರಿಯಾಗುತ್ತದೆ.

ಕಾಫಿ ಸೆವನೆಯಿಂದ ಲಿವರ್ ಕ್ಯಾನ್ಸರ್ ಕ್ಷೀಣಿಸುತ್ತದೆ.
ಮನುಷ್ಯನ ಅತ್ಯಂತ ಸೂಕ್ಷ್ಮ ಹಾಗೂ ಅತ್ಯಂತ ಅಗತ್ಯವಾದ ಅಂಗದಲ್ಲಿ ಪಿತ್ತಕೋಶ ಪ್ರಮುಖವಾದುದು. ಬ್ಲಾಕ್‌ ಕಾಫಿ ಸೇವನೆಯಿಂದ ಲಿವರ್ ಕ್ಯಾನ್ಸರ್, ಹೆಪಟೈಟಿಸ್‌, ಫ್ಯಾಟಿ ಲಿವರ್‌ ಇತ್ಯಾದಿ ಖಾಯಿಲೆಗಳು ದೂರವಾಗುತ್ತವೆ. ದಿನದಲ್ಲಿ ನಾಲ್ಕು ಕಪ್‌ ಬ್ಲಾಕ್‌ ಕಾಫಿ ಸೇವನೆಯಿಂದ ಶೇ.80 ರಷ್ಟು ಲಿವರ್‌ ಕಾಯಿಲೆಯನ್ನು ತಡೆಯಬಹುದು ಎನ್ನಲಾಗಿದೆ. ರಕ್ತದಲ್ಲಿನ ಲಿವರ್ ಗೆ ಹಾನಿಯಾಗುವ ಅಂಶಗಳನ್ನು ಕಾಫಿ ನಾಶಪಡಿಸುತ್ತದೆ.

ಜೀರ್ಣ ಕ್ರೀಯೆಗೆ ಅನುಕೂಲಕಾರಿ
ಬ್ಲಾಕ್‌ ಕಾಫಿ ಕುಡಿಯುವುದರಿಂದ ಹೆಚ್ಚು ಮೂತ್ರ ಮಾಡಬೇಕಾಗುತ್ತದೆ. ಅದರಲ್ಲೂ ಬ್ಲಾಕ್‌ ಕಾಫಿಗೆ ಸಕ್ಕರೆ ಹಾಕದೇ ಸೇವಿಸಿದರೆ, ಹೊಟ್ಟೆಯಲ್ಲಿ ಜೀರ್ಣಕ್ರಿಯೆಗೆ ಅಡ್ಡಿಪಡಿಸುವ ಬ್ಯಾಕ್ಟೀರಿಯಾ ಹಾಗೂ ರೋಗಾಣುಗಳನ್ನು ನಾಶಪಡಿಸುತ್ತದೆ.

ಬೊಜ್ಜು ನಿಯಂತ್ರಣಕ್ಕೂ ಬ್ಲಾಕ್ ಕಾಫಿ ಉತ್ತಮ
ಜಿಮ್‌ನಲ್ಲಿ ವರ್ಕೌಟ್‌ ಮಾಡುವ, ಅಥವಾ ತೂಕ ಇಳಿಸುವ ಡಯಟ್‌ ಪ್ಲಾನ್‌ ಚಟುವಟಿಕೆಯ ಅರ್ಧಗಂಟೆ ಮುನ್ನ ಒಂದು ಕಪ್‌ ಬ್ಲಾಕ್‌ ಕಾಫಿ ಅತ್ಯುತ್ತಮ. ನಿಮ್ಮ ಜೀರ್ಣಕ್ರಿಯೆಯನ್ನು ಶೇ.50ರಷ್ಟು ಹೆಚ್ಚಿಸುವುದರಿಂದ ಬೇಡವಾದ ಕೊಬ್ಬನ್ನೂ ಕರಗಿಸುತ್ತದೆ. ಉತ್ತಮ ಆರೋಗ್ಯಕ್ಕೆ ಬ್ಲಾಕ್ ಕಾಫಿ ಉಪಯುಕ್ತ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top