fbpx
ಸಮಾಚಾರ

ತಮ್ಮ ಹೇಳಿಕೆಗಳ ಮೂಲಕವೇ ಪದೇ ಪದೇ ಟೀಕೆಗಳಿಗೆ ಗುರಿಯಾಗುತ್ತಿರುವ ಪ್ರಧಾನಿ ಮೋದಿ.

ಬಾಲಾಕೋಟ್ ವೈಮಾನಿಕ ದಾಳಿಗೆ ಮೋಡ ಕವಿದ ವಾತಾವರಣ ಅಡ್ಡಿಯಾದಾಗ ನನ್ನ ‘ರಾ ವಿಸ್ಡಮ್’ ಕೆಲಸ ಮಾಡಿತ್ತು.

ತಮ್ಮ ಹೇಳಿಕೆಗಳ ಮೂಲಕವೇ ಪದೇ ಪದೇ ಟೀಕೆಗಳಿಗೆ ಗುರಿಯಾಗುತ್ತಿರುವ ಪ್ರಧಾನಿ ಮೋದಿ.

ಐದು ವರ್ಷಗಳ ಅಧಿಕಾರವದಿಯಲ್ಲಿ ಒಂದು ಬಾರಿಯೂ ಸುದ್ದಿಗೋಷ್ಠಿ ನಡೆಸದ ಪ್ರಧಾನಿ ಮೋದಿ ಚುನಾವಣೆ ಘೋಷಣೆಯಾದ ದಿನಗಳಿಂದ ಸುದ್ದಿ ಮಾಧ್ಯಮಗಳಿಗೆ ಸಂದರ್ಶನ ನೀಡುವ ಒಲವು ತೋರಿಸುತ್ತಿದ್ದಾರೆ. ಈ ಹಿಂದೆ ನಟ ಅಕ್ಷಯ್ ಕುಮಾರ್ ಅವರೊಂದಿಗಿನ ಮೋದಿಯವರ ರಾಜಕೀಯೇತರ ಬದುಕಿನ ಬಗೆಗೆ ನಡೆದ ಸಂದರ್ಶನವೂ “ಚುನಾವಣಾ ಸಂದರ್ಭದಲ್ಲಿ ರಾಜಕೀಯೇತರ ಸಂದರ್ಶನ ನೀಡುವದರ ಹಿಂದಿನ ನಿಜ ಮರ್ಮವೇನು ಎಂಬ ಟೀಕೆಗಳಿಗೆ ಗುರಿಯಾಗಿತ್ತು.

ಇದೀಗ ಮೇ ೧೧ ರಂದು ‘ನ್ಯೂಸ್ ನೇಶನ್’ ಖಾಸಗಿ ವಾಹಿನಿಗೆ ಸಂದರ್ಶನ ನೀಡಿರುವ ಮೋದಿ ಮತ್ತೊಮ್ಮೆ ತಮ್ಮ ಹೇಳಿಕೆಗಳ ಮೂಲಕ ನೆಟ್ಟಿಗರ ಹಾಗೂ ವಿರೋಧ ಪಕ್ಷಗಳ ನೇರ ಟೀಕೆಗೆ ಗುರಿಯಾಗುತ್ತಿದ್ದಾರೆ.

ಪುಲ್ವಾಮಾ ದಾಳಿಯ ಪ್ರತಿಕಾರವಾಗಿ ಪಾಕಿಸ್ತಾನದ ಬಾಲಾಕೋಟ್ ಎಂಬ ಪ್ರದೇಶದ ಮೇಲೆ ಈ ಹಿಂದೆ ಭಾರತೀಯ ವಾಯುಪಡೆ ದಾಳಿ ನಡೆಸಿತ್ತು. ದಾಳಿಯಲ್ಲಿ ಎಷ್ಟು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ನೀಡುವಂತೆ ವಿರೋಧ ಪಕ್ಷಗಳು ಕಲಾಪದಲ್ಲಿ ಪ್ರಶ್ನೆ ಎತ್ತಿದಾಗಲೆಲ್ಲ ವಾಯುಸೇನೆಯಾಗಲಿ, ರಕ್ಷಣಾ ಮಂತ್ರಿಗಳಾಗಲಿ ದಾಳಿಯಲ್ಲಿ ಎಷ್ಟು ಜನ ಉಗ್ರರು ಅಸುನೀಗಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿಯನ್ನು ನೀಡುವ ಗೋಜಿಗೆ ಹೋಗಲೇ ಇಲ್ಲ. ಬದಲಿಗೆ ಬಿಜೆಪಿಗರಿಂದ, ಪ್ರಶ್ನೆ ಕೇಳಿದವರ ರಾಷ್ಟ್ರಪ್ರೇಮವನ್ನು ಮರು ಪ್ರಶ್ನಿಸಲಾಯಿತು. ಪ್ರಗತಿ ಪರರು ಹಾಗೂ ವಿರೋಧ ಪಕ್ಷದವರು ನಮ್ಮ ಸೈನ್ಯವನ್ನೇ ಅನುಮಾನಿಸುತ್ತಿದ್ದಾರೆ ಎನ್ನುವ ಮೂಲಕ ಪ್ರಶ್ನೆ ಕೇಳುವುದೇ ಮಹಾ ಅಪರಾಧ ಎನ್ನುವಂತೆ ಬಿಂಬಿಸಲಾಯಿತು. ಈ ಮಧ್ಯೇ ಭಾರತದ ಬಹುತೇಕ ಟಿ,ವಿ ಮಾಧ್ಯಮಗಳು “ಬಾಲಾಕೋಟ್ ನಲ್ಲಿ ಭಾರತೀಯ ಸೇನೆ ಸೆದೆ ಬಡಿದದ್ದು ಮೂನ್ನೂರು ಚಿಲ್ಲರೆ ಭಯೋತ್ಪಾದಕರನ್ನು” ಎಂದು ಆಧಾರ ರಹಿತವಾಗಿ ವರದಿಯನ್ನು ಬಿತ್ತರಿಸಿ ಶುದ್ಧ ಸುಳ್ಳುಗಳನ್ನೇ ಸಗಟಾಗಿಸಿ ಜನ ಸಾಮಾನ್ಯರನ್ನು ನಂಬಿಸುವುದರಲ್ಲಿ ಸಂಪೂರ್ಣ ಯಶಸ್ವಿಗೊಂಡವು ಜೊತೆಗೆ ಒಳ್ಳೆಯ ಟಿ.ಆರ್.ಪಿ ಯನ್ನು ಗಿಟ್ಟಿಸಿಕೊಂಡವು.

ಈ ಘಟನೆಗಳು ನಡೆದು ತಿಂಗಳುಗಳೇ ಕಳೆದಿವೆ ಅಂದು ಪ್ರಶ್ನೆಗಳ ಸುರಿಮಳೆಗೈದರೂ ತುಟಿ ಪಿಟಿಕ್ ಎನ್ನದ ಪ್ರಧಾನಿ ಮೋದಿ ಇಂದು ತಾವಾಗಿಯೇ ಬಾಲಾಕೋಟ್ ದಾಳಿಯ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ.

ಭಾರತೀಯ ವಾಯುಪಡೆಯಿಂದ ಬಾಲಾಕೋಟ್ನ ಉಗ್ರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆದ ರಾತ್ರಿ ಹೆಚ್ಚು ಮಳೆಯಾಗಿತ್ತು. “ನಮ್ಮ ರೇಡಾರ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ದಾಳಿಗೆ ವಾತಾವರಣವೂ ಸ್ಪಂದಿಸುವಂತಿರಲಿಲ್ಲ. ಹಾಗಾಗಿ ‘ಸರ್ಜಿಕಲ್ ಸ್ಟ್ರೈಕ್’ ದಾಳಿಯ ದಿನಾಂಕವ್ನನು ಮುಂದೂಡುವುದು ಉತ್ತಮ ಎಂಬ ಸಲಹೆಯನ್ನು ಅಧಿಕಾರಿಗಳು ನೀಡಿದ್ದರು. ಒಂದು ವೇಳೆ ದಿನಾಂಕ ಮುಂದೂಡಿದರೆ ದಾಳಿಯ ರಹಸ್ಯ ಸೋರಿಕೆ ಆಗುವ ಸಾಧ್ಯತೆಯೇ ಹೆಚ್ಚಾಗಿತ್ತು, ಜೊತೆಗೆ ಮೋಡ ಕವಿದಿದ್ದರಿಂದ ರಡಾರ್ ಬಳಕೆ ಕೂಡ ಸಾಧ್ಯವಿರಲಿಲ್ಲ. ಇಂಥ ವಾತಾವರಣದಲ್ಲಿ ನಮ್ಮ ರೆಡಾರ್ ಗಳು ಕಾರ್ಯ ಸ್ಥಗಿತವಾಗಿವೆ ಎಂದರೆ ಶತ್ರುಗಳ ರಡಾರ್ ಸಹ ಕೆಲಸ ಮಾಡಲು ಸಾಧ್ಯವಿಲ್ಲ ಎಂಬುದು ತಕ್ಷಣ ಮನವರಿಕೆಯಾಯಿತು (ಅಲ್ಲಿ ನನ್ನ row wisdom ಕೆಲಸ ಮಾಡಿತ್ತು). ನನ್ನನ್ನು ನಿಂದಿಸುವ ದೇಶದ ಪಂಡಿತರಿಗೆ ಈ ಯೋಚನೆಗಳು ಏಕೆ ಹೊಳೆಯುವುದಿಲ್ಲ ಎಂಬುದೇ ನನಗೆ ತಿಳಿಯುವುದಿಲ್ಲ. ಕೆಲವು ಸಾರಿ ಮೋಡಗಳು ಸಹಾಯ ಮಾಡುತ್ತವೆ ಎಂದು ಮನದಲ್ಲೇ ಅಂದುಕೊಂಡು. ಮೋಡಗಳಿಂದಾಗಿ ನಾವು ಶತ್ರು ರಡಾರ್ ನಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಆದ್ದರಿಂದ ದಾಳಿ ಮುಂದೂಡುವ ಅಗತ್ಯವಿಲ್ಲ ಎಂದು ಗೊಂದಲದಲ್ಲಿದ್ದ ಅಧಿಕಾರಿಗಳಿಗೆ ತಿಳಿಸಿದೆ. ಜೊತೆಗೆ ದಾಳಿ ನಡೆಸುವಂತೆ ಆದೇಶಿಸಿದ್ದೆ” ಎಂದು ಮೋದಿ ಹೇಳಿಕೊಂಡಿದ್ದಾರೆ.

ಮೋದಿ ಅವರ ಮೋಡ ಕವಿದ ವಾತಾವರಣದ ಹೇಳಿಕೆಯನ್ನ ಗುಜಾರತ್ ರಾಜ್ಯ ಬಿಜೆಪಿ ಘಟಕ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿಕೊಂಡಿದ್ದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ, ಇದೇ ವೇಳೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಮೋದಿ ಹೇಳಿಕೆಯನ್ನು ವ್ಯಂಗ್ಯವಾಡಿವೆ. ಜಮ್ಮು-ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ, ಮೋದಿ ಹೇಳಿಕೆಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದು, ಪಾಕಿಸ್ತಾನದ ರಡಾರ್ ಗಳು ಮೋಡಗಳನ್ನು ದಾಟುವುದಿಲ್ಲ, ಮುಂದಿನ ಏರ್ ಸ್ಟ್ರೈಕ್ ಮಾಡುವಾಗ ಈ ಅಂಶ ಪ್ರಾಮುಖ್ಯತೆ ಪಡೆಯಲಿದೆ ಎಂದು ಹೇಳಿದರೆ.

ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಮೋದಿ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ, ಮೋದಿ ಈ ಹೇಳಿಕೆ ನೀಡುವ ಮೂಲಕ ಭಾರತೀಯ ವಾಯುಪಡೆಯನ್ನು ಅಜ್ಞಾನ ಮತ್ತು ವೃತ್ತಿಪರವಲ್ಲವೆಂದು ಜರಿದಿದ್ದಾರೆ ಎನ್ನುವ ಮೂಲಕ ತಮ್ಮ ಅಸಮಧಾನ ಹೊರ ಹಾಕಿದ್ದರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಟ್ವಿಟ್ಟಿಗರು ಮೋದಿಯವರ ಹೇಳಿಕೆಯನ್ನು ವ್ಯಂಗ್ಯಮಯವಾಗಿಸಿ ತಿರುಗೇಟು ನೀಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top