fbpx
ಸಮಾಚಾರ

ಫೆವರಿಟ್ ನಟಿಯ ಮನೆಗೇ ನುಗ್ಗಿ ಮದುವೆಯಾಗುವಂತೆ ಬೆದರಿಕೆ ಹಾಕಿದ ಅಭಿಮಾನಿ.

ಸಿನಿಮಾ ನಟಿಯರನ್ನು ಅಭಿಮಾನಿಗಳು ಇಷ್ಟಪಡೋದು, ಅವರನ್ನು ಅನುಸರಿಸುವುದು ಸಾಮಾನ್ಯ. ಆದರೆ ಅಂಥಾ ನಟಿ ನಮಗಿಷ್ಟ ಅಂದ ಮಾತ್ರಕ್ಕೆ ಮನೆಗೇ ಹುಡುಕಿಕೊಂಡು ಹೋಗಿ, ಮದುವೆ ಮಾಡಿಕೊ ಅಂತ ಪಟ್ಟು ಹಿಡಿದರೆ ಹೇಗಾಗಬೇಡ ಮನೆಯವರ ಪರಿಸ್ಥಿತಿ.. ಕಿರುತೆರೆ ಸ್ಟಾರ್ ನಟಿಯೊಬ್ಬರಿಗೆ ಈಗ ಇಂತಹದ್ದೇ ಪರಿಸ್ಥಿತಿ ಎದುರಾಗಿದೆ.

ತಮಿಳಿನ ಜನಪ್ರಿಯ ಧಾರಾವಾಹಿ ‘ರಾಜಾರಾಣಿ’ಯಲ್ಲಿ ನಟಿಸುತ್ತಿರುವ ನಟಿ ರಿತಿಕಾಗೆ ಕಹಿ ಅನುಭವ ಎದುರಾಗಿದೆ. ಧಾರಾವಾಹಿಯಲ್ಲಿ ರಿತಿಕಾರನ್ನು ನೋಡಿ ಆಕರ್ಷಿತನಾಗಿದ್ದ ಓರ್ವ ಎಂಜಿನಿಯರಿಂಗ್ ವಿದ್ಯಾರ್ಥಿ ಅವರ ಮನೆಗೆ ನುಗ್ಗಿ ಮದುವೆಯಾಗುವಂತೆ ಒತ್ತಾಯಿಸಿರುವ ಘಟನೆ ಚೆನ್ನೈನ ವಡಪಳನಿಯಲ್ಲಿ ನಡೆದಿದೆ.

ರಿತಿಕಾರನ್ನು ತನಗೆ ಕೊಟ್ಟು ಮದುವೆ ಮಾಡಿ ಎಂದು ಅವರ ತಂದೆಗೆ ಬೆದರಿಕೆ ಒಡ್ಡಿದ್ದಾನೆ. ರಿತಿಕಾ ತಂದೆಯೊಂದಿಗೆ ವಾಗ್ವಾದ ನಡೆದು ಜಗಳ ತಾರಕ್ಕೇರಿದ ಕಾರಣ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಗೋಬಿಚೆಟ್ಟಿ ಪಾಳ್ಯದ ಭರತ್ ಎಂದು ಗುರುತಿಸಲಾಗಿದೆ. ಇಂಜಿನಿಯರಿಂಗ್ ಪದವಿ ಪಡೆದಿರುವ ಭರತ್ ಉದ್ಯೋಗ ಹುಡುಕಿಕೊಂಡು ಚೆನ್ನೈಗೆ ಆಗಮಿಸಿದ್ದಾನೆ. ಈತ ರಿತಿಕಾ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top