fbpx
ಸಮಾಚಾರ

“ಯಾವ ದೇವಾಲಯ ಸುತ್ತಿದರೂ ಇವಿಎಂ ಫಲಿತಾಂಶ ಬದಲಾವಣೆಯಾಗಲ್ಲ”- HDKಗೆ ಅಭಿಷೇಕ್ ಅಂಬರೀಶ್ ಟಾಂಗ್.

ಎಷ್ಟು ದೇವಾಲಯಗಳನ್ನು ಸುತ್ತಿದರೂ ಫಲಿತಾಂಶ ಬದಲಾವಣೆಯಾಗುವುದಿಲ್ಲ. ಫಲಿತಾಂಶ ಏನಿದ್ದರೂ ಮತಯಂತ್ರದಲ್ಲಿ ಅಡಗಿದೆ ಅದು ಮೇ 23ಕ್ಕೆ ಹೊರಬೀಳಲಿದೆ ಎಂದು ಪರೋಕ್ಷವಾಗಿ ಸಿಎಂ ಎಚ್ಡಿಕೆ ಕುಟುಂಬಕ್ಕೆ ಅಭಿಷೇಕ್ ಅಂಬರೀಶ್ ಟಾಂಗ್ ನೀಡಿದ್ದಾರೆ.

ತಾಲೂಕಿನ ಹನಿಯಂಬಾಡಿ ಗ್ರಾಮದಲ್ಲಿ ಅಭಿಮಾನಿಯೊಬ್ಬರ ಗೃಹಪ್ರವೇಶ ಕಾರ‍್ಯಕ್ರಮಕ್ಕೆ ಸೋಮವಾರ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ”ನಮಗೆ ಮತದಾನ ನಡೆದ ದಿನವೇ ಫಲಿತಾಂಶ ಏನು ಎಂಬುದು ಗೊತ್ತಾಗಿದೆ. ಹೀಗಾಗಿ ಯಾವುದೇ ಸರ್ವೆಗಳನ್ನು ಮಾಡಿಸಿಲ್ಲ. ಮೇ ತಿಂಗಳು ನಮ್ಮ ಕುಟುಂಬಕ್ಕೆ ವಿಶೇಷವಾದುದು. 23ರಂದು ಅಮ್ಮನ ಚುನಾವಣೆಯ ಫಲಿತಾಂಶ, 29ಕ್ಕೆ ಅಪ್ಪನ ಹುಟ್ಟು ಹಬ್ಬ, ಮೇ ಅಂತ್ಯಕ್ಕೆ ನನ್ನ ‘ಅಮರ್‌’ ಸಿನೆಮಾ ಬಿಡುಗಡೆಯಾಗಲಿದೆ” ಎಂದರು.

“ಚುನಾವಣೆ ಗೆಲುವಿಗಾಗಿ ಯಾವ ಸರ್ವೇ ಮಾಡಿಸಿದ್ರೂ, ಎಷ್ಟೇ ದೇವಾಲಯಗಳನ್ನ ಸುತ್ತಿದ್ರೂ ಫಲಿತಾಂಶದಲ್ಲಿ ಬದಲಾವಣೆ ಆಗಲ್ಲ. ಫಲಿತಾಂಶ ಏನಿದ್ರು ಮತಯಂತ್ರದಲ್ಲಿ ಅಡಗಿದೆ, ಅದು ಮೇ.23ಕ್ಕೆ ಹೊರ ಬೀಳಲಿದೆ” ಎಂದು ಹೇಳಿ ಪದೇ ಪದೇ ದೇವಾಲಯಗಳಿಗೆ ಬೇಟಿಕೊಡುತ್ತಿರುವ HDK ಕುಟುಂಬಕ್ಕೆ ತಿರುಗೇಟು ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top