fbpx
ಸಮಾಚಾರ

ಮಂಡಿಯಲ್ಲಿ ರಕ್ತ ಚಿಮ್ಮುತ್ತಿದ್ದರೂ ಹೋರಾಟ ಬಿಡದ ವಾಟ್ಸನ್- ಕ್ರಿಕೆಟ್ ಪ್ರೇಮಿಗಳ ಮನಗೆದ್ದ CSK ಆಟಗಾರ.

ಭಾನುವಾರ ನಡೆದ ಐಪಿಎಲ್​ ಫೈನಲ್​ನಲ್ಲಿ ರೋಹಿತ್​ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್​​ ಗೆದ್ದು ಬೀಗಿತ್ತು. ಗೆಲುವಿನ ಸಮೀಪದಲ್ಲಿದ್ದ ಎಂಎಸ್​​ ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​​ ಕೊನೆಯ ಓವರ್​ನಲ್ಲಿ ಎಡವಿತ್ತು. ಶೇನ್​ ವಾಟ್ಸನ್​ ಅವರು ಏಕಾಂಗಿ ಹೋರಾಟ ಮಾಡಿ CSKಯನ್ನು ಗೆಲುವಿನ ಸಮೀಪ ಕರೆತಂದಿದ್ದರು. ಆದರೆ, ಕೊನೆಯ್​ ಓವರ್​ನಲ್ಲಿ ರನ್​ಔಟ್​ ಆಗಿ ನಿರಾಸೆ ಮೂಡಿಸಿದರು.

ಅಚ್ಚರಿ ಎಂದರೆ, ಅವರ ಮಂಡಿಯಲ್ಲಿ ರಕ್ತ ಸುರಿಯುತ್ತಿದ್ದರೂ ಯಾರಿಗೂ ಹೇಳದೇ ಬ್ಯಾಟ್ ಬೀಸಿದ್ದರಂತೆ ವಾಟ್ಸನ್​. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಅವರ ಕ್ರೀಡಾಸ್ಪೋರ್ತಿಗೆ ಕ್ರಿಕೆಟ್ ಪ್ರೇಮಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮೊಣಕಾಲ ಬಳಿ ರಕ್ತ ಬಂದಿದ್ದರಿಂದ ಹಳದಿ ಇದ್ದ ಪ್ಯಾಂಟ್​ ಕೆಂಪಾಗಿದೆ. ಇದನ್ನು ನೋಡಿದ ಅನೇಕರು ವಾಟ್ಸನ್​ ಕ್ರೀಡಾ ಸ್ಫೂರ್ತಿಗೆ ತಲೆ ಬಾಗಿದ್ದಾರೆ.

 

 

ಈ ಬಗ್ಗೆ ತಮ್ಮ ಇನ್ಸ್ಟಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಹರ್ಭಜನ್ ಸಿಂಗ್ ರಕ್ತ ಚಿಮ್ಮುತ್ತಿರುವ ಶೇನ್​ ವ್ಯಾಟ್ಸನ್​ರ ಪೋಟೋ ಹಾಕಿ “ವ್ಯಾಟ್ಸನ್ ಮೊಣಕಾಲಲ್ಲಿ ಕೆಂಪಗೆ ಕಾಣ್ತಿರೋದು ಏನು ಗೊತ್ತಾ? ಅದು ರಕ್ತ. ಪಂದ್ಯದ ವೇಳೆ, ಯಾರಾದ್ರು ವಾಟ್ಸನ್‌ ಮೊಣಕಾಲಿನಿಂದ ಸುರಿಯುತ್ತಿದ್ದ ರಕ್ತವನ್ನು ನೋಡಿದ್ದೀರಾ? ಪಂದ್ಯದ ನಂತರ ಆ ಗಾಯಕ್ಕೆ 6 ಹೊಲಿಗೆಗಳು ಬಿದ್ದಿವೆ. ಆಟದ ವೇಳೆ ರನ್ ಔಟ್ ಆಗೋದನ್ನು ತಪ್ಪಿಸಿಕೊಳ್ಳಲು ಡೈವ್ ಮಾಡಿದ್ದಾರೆ ಈ ವೇಳೆ ಗಾಯವಾಗಿದೆ. ಆದ್ರೆ, ಯಾರಿಗೂ ಹೇಳದೇ ಆಟವನ್ನು ಮುಂದುವರಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top