fbpx
ಸಮಾಚಾರ

ಈ ಊರಲ್ಲಿ ಗಾಸಿಪ್ ಮಾಡಿದ್ರೆ ಶಿಕ್ಷೆ ಗ್ಯಾರೆಂಟಿ.

ಕಂಡವರ ಬಗ್ಗೆ ಮಾತನಾಡದೆ ತಮ್ಮ ಬದುಕಾಯ್ತು ತಾವಾಯ್ತು ಎಂಬಂತೆ ಬದುಕುವರು ಈ ದೇಶದಲ್ಲಿ ಮಾತ್ರವಲ್ಲ ಜಗತ್ತಿನಲ್ಲೇ ಅತಿ ವಿರಳ ಗಾಸಿಪ್ ವಿಷಯದಲ್ಲಿ ಎಂದಿಗೂ ಮುಂಚುಣಿಯಲ್ಲಿರುವವರು ಮಹಿಳೆಯರು ಎಂಬುದು ಗಮನಾರ್ಹ. ಜನ ತಮ್ಮ ಅನುಕೂಲಕ್ಕಾಗಿದ್ದರೂ ಬಾಯಿ ಚಪಲಕ್ಕಾದರೂ ಒಂದಕ್ಕೊಂದು ಕತೆಗಳನ್ನ ಸೃಷ್ಟಿಸಿ ಗಾಸಿಪ್ ಮಾಡುತ್ತಲೇ ಇರುತ್ತಾರೆ.

ಈ ಗಾಸಿಪ್ ಗಳು ಬರಿ ಮನರಂಜನೆಗೆ ಸೀಮಿತವಾಗಿದ್ದರೆ ಯಾರಿಗೂ ತೊಂದರೆ ಇರುವುದಿಲ್ಲ. ಆದರೆ ಯಾರೋ ಎಲ್ಲೋ ಕುಳಿತು ಹರಡುವ ಬೇಸ್ ಲೆಸ್ ವಿಷಯಗಳು ಹಾಗೂ ಸುಳ್ಳು ಸುದ್ದಿಗಳು ಜನರಿಂದ ಜನರಿಗೆ, ಮೊಬೈಲ್ ನಿಂದ ಮೊಬೈಲ್ ಗಳಿಗೆ ಹರಡಿ ನಾಗರಿಕ ಪ್ರಪಂಚದಲ್ಲಿ ಕೋಮುಗಲಭೆಗಳಿಗೆ ಕಾರಣವಾಗುತ್ತಿವೆ.

ಆದರೆ ಫಿಲಿಪೈನ್ಸ್ನ ಈ ನಗರದಲ್ಲಿ ಯಾರಾದ್ರೂ ಗಾಸಿಪ್ ಮಾಡಿದರೆ ಅಥವಾ ವದಂತಿಗಳನ್ನ ಹರಡಿದರೆ ಅಂಥವರಿಗೆ ದಂಡ ವಿಧಿಸಲಾಗುತ್ತದೆ. ಹೌದು. ಫಿಲಿಪೈನ್ಸ್ ರಾಜಧಾನಿ ಮನೀಲಾದಿಂದ 3 ಗಂಟೆಗಳು ಪ್ರಯಾಣ ಬೆಳಸಿದರೆ ಬಿನಾಲೋನಾನ್ ಎಂಬ ಪಟ್ಟಣ ಸಿಗುತ್ತೆ. ಈ ನಗರದಲ್ಲಿ ಸುಳ್ಳು ಸುದ್ದಿಗೆಕಡಿವಾಣ ಹಾಕಲು ಕಾನೂನು ಜಾರಿಯಲ್ಲಿದೆ. ಗಾಸಿಪ್ ಅನ್ನು ಫಿಲಿಪೈನ್ಸ್ ಜನ “ಚಿಸ್ಮಿಸ್” . ಚಿಸ್ಮಿಸ್ ಎನ್ನುತ್ತಾರೆ. ಈ ಊರಲ್ಲಿ ಕಂಡೋರ ಬಗ್ಗೆ ಹಗುರವಾಗಿ ಬಾಯಿ ಬಿಚ್ಚಿವುದು ಕಾನೂನು ರೀತಿಯಲ್ಲಿ ಅಪರಾಧ ಆದ್ರೂ ಆಗ್ಲಿ ಗುಸುಗುಸು ಪಿಸುಪಿಸುನಾದ್ರು ಆಗ್ಲೀ ಕಂಡೋರ ಬಗ್ಗೆ ಮಾತನಾಡೋದು ಇಲ್ಲಿ ಅಕ್ರಮ.

ಇಲ್ಲಿನ ಮೇಯರ್ ರಾಮೋನ್ ಗೀಕೋ, ಗಾಸಿಪ್ ಮಾಡೋದರ ವಿರುದ್ಧವಾಗಿ ಕಾನೂನು ಜಾರಿ ಮಾಡಿದ್ದು. ಆಸ್ತಿ, ಹಣದ ವಿವಾದ ಹಾಗೂ ಸಂಬಂಧಗಳ ಬಗ್ಗೆ ಹೆಚ್ಚಾಗಿ ಗಾಸಿಪ್ ನಡೆಯುತ್ತಲಿದ್ದು, ಇದರಿಂದಾಗಿ ಜನಗಳು ನೆಮ್ಮದಿಯ ಬದುಕಿನಿಂದ ದೂರವಾಗುತ್ತಿದ್ದಾರೆ. ಈ ಕಾರಣದಿಂದಾಗಿ ಕಾನೂನು ಜಾರಿಗೆ ತಂದಿರುವುದಾಗಿ ಮೇಯರ್ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

Friends whispering secret to shocked brunette

ದಂಡ ಎಷ್ಟು ಗೊತ್ತಾ?

ಮೊದಲ ಬಾರಿಗೆ ಗಾಸಿಪ್ ಮಾಡಿ ಸಿಕ್ಕಿಬಿದ್ದವರಿಗೆ 200 ಪೀಸೋಸ್( ಅಂದಾಜು 725 ರೂಪಾಯಿ) ದಂಡ ಹಾಕಲಾಗುತ್ತದೆ. ಇದರ ಜೊತೆಗೆ ಅವರು 3 ಗಂಟೆಗಳ ಕಾಲ ಕಸ ತೆಗೆದು ಸ್ವಚ್ಛತಾ ಕಾರ್ಯದಲ್ಲಿ ತೊಡಗಬೇಕು. ಇನ್ನು ಅದೇ ತಪ್ಪನ್ನು ಮತ್ತೊಮ್ಮೆ ಮಾಡಿದ್ರೆ 1,300 ರೂಪಾಯಿವರೆಗೆ ದಂಡ, ಜೊತೆಗೆ 8 ಗಂಟೆಗಳ ಕಾಲ ಕಸ ತೆಗೆಯಬೇಕು. ಈಗಾಗಲೇ ಇಲ್ಲಿನ ಕೆಲವು ನಿವಾಸಿಗಳು ಗಾಸಿಪ್ ಮಾಡಿ ಸಿಕ್ಕಿಬಿದ್ದಿದ್ದು, ಶಿಕ್ಷೆ ಅನುಭವಿಸಿದ್ದಾರೆ ಅಂತ ರಾಮೋನ್ ತಿಳಿಸಿದ್ದಾರೆ. ಅಲ್ಲದೆ ಈ ನಿಯಮದಿಂದ ಜನರ ನಡುವೆ ಗಲಾಟೆ ಪ್ರಕರಣಗಳು ಕೂಡ ಕಡಿಮೆಯಾಗಿವೆ ಎಂದಿದ್ದಾರೆ. ಬಿನಾಲೋನಾನ್ ನಂತರ ಜಿಲ್ಲೆಯ ಇತರೆ 7 ಗ್ರಾಮಗಳಿಗೂ ಈ ನಿಯಮವನ್ನ ವಿಸ್ತರಿಸಲಾಗಿದೆ. ಈ ಕಾನೂನಿನ ನಿಜವಾದ ಅಗತ್ಯತೆ ಇರುವುದು ಮಾತ್ರ ನಮ್ಮ ದೇಶಕ್ಕೆ ಎಂಬುದು ಈ ಕ್ಷಣದ ಸತ್ಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top