fbpx
ಸಮಾಚಾರ

ಈ ದೇವರ ಬಳಿ ಇದೆ ಸಾವಿರಾರು ಕೆ.ಜಿ ಚಿನ್ನ. ಪ್ರಪಂಚದ ಮೋಸ್ಟ್ ಶ್ರೀಮಂತ ದೇವರ ಬಗ್ಗೆ ಕೇಳಿದ್ರೆ ನೀವು ಕೂಡ ಶಾಕ್ ಆಗ್ತೀರಾ.

ಪ್ರಪಂಚದಲ್ಲೇ ಅತಿ ಶ್ರೀಮಂತ ದೇವರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಿರುಪತಿ ತಿಮ್ಮಪ್ಪನ ಬಳಿ ಇರುವುದು ಬರೋಬ್ಬರಿ ೯ ಸಾವಿರ ಕೆ.ಜಿ ಚಿನ್ನ ಎಂದರೆ ನೀವು ನಂಬಲೇಬೇಕು.ವೆಂಕಟರಮಣ ಸ್ವಾಮಿಯ ಒಟ್ಟೂ ಆಭರಣಗಳು 9,259 ಕೆ.ಜಿ ಯಷ್ಟಿದ್ದು, ಈ ಆಭರಣಗಳಲ್ಲಿ ಕೆಲವು ಕೆ.ಜಿಗಳಷ್ಟು ಚಿನ್ನವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲಾಗಿದೆ.

ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಖಜಾನೆಯಲ್ಲಿ 553 ಕೆ.ಜಿಯ ಆಭರಣಗಳಿದ್ದು ಉಳಿದ ಸ್ವಾಮಿಯ ಆಭರಣಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಸುರಕ್ಷತೆಗಾಗಿ ಠೇವಣಿ ಇರಿಸಲಾಗಿದೆ.ಈ ಪೈಕಿ ಎಸ್ ಬಿ ಐ ಬ್ಯಾಂಕ್ ನಲ್ಲಿ 5,387 ಕೆ.ಜಿ, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನಲ್ಲಿ 1,938 ಕೆ.ಜಿ ಚಿನ್ನವನ್ನು ‘ಟಿಟಿಡಿ’ ಠೇವಣಿಗಳನ್ನು ಹೊಂದಿದೆ.

ಇತ್ತೀಚೆಗಷ್ಟೇ ಮೂರು ವರ್ಷದ ಠೇವಣಿ ಅವಧಿ ಮುಕ್ತಾಯಗೊಂಡ ಹಿನ್ನೆಲೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಏ.20ರಂದು ದೇವಸ್ತಾನದ ಆಡಳಿತ ಮಂಡಳಿಗೆ ಸೇರಬೇಕಾದ್ದ 1,381 ಕೆ.ಜಿ ಚಿನ್ನ ಹಿಂದಿರುಗಿಸಿದೆ ಎಂದು ‘ಟಿಟಿಡಿ’ ಕಾರ್ಯನಿರ್ವಾಹಕ ಅಧಿಕಾರಿ ‘ಅನಿಲ್‌ ಕುಮಾರ್‌ ಸಿಂಘಾಲ್’‌ ತಿಳಿಸಿದ್ದಾರೆ. ಚಿನ್ನ ಹೂಡಿಕೆ ಯೋಜನೆಯನ್ವಯ ಬ್ಯಾಂಕ್‌ಗಳಿಗೆ ಶೇ. 1 ರಷ್ಟು ಕಮಿಷನ್‌ ನೀಡಲಾಗುತ್ತದೆ. ಜತೆಗೆ ಶೇ. 1.5 ನಿರ್ವಹಣಾ ವೆಚ್ಚವೂ ತಗಲುತ್ತದೆ. ಠೇವಣಿ ಅವಧಿ ಮುಗಿದ ಹಣವನ್ನು ಹಿಂದಿರುಗಿಸುವ ಜವಾಬ್ದಾರಿ ಬ್ಯಾಂಕ್ನದ್ದು ಎಂದು ಸಿಂಘಾಲ್‌ ತಿಳಿಸಿದ್ದಾರೆ.

ಕಳೆದ ತಿಂಗಳ 17ರಂದು ತಮಿಳುನಾಡಿನ ತಿರುವಳ್ಳೂರ್‌ ಜಿಲ್ಲೆಯಲ್ಲಿ ಚುನಾವಣಾ ಆಯೋಗ 1,381 ಕೆ.ಜಿ ಚಿನ್ನವನ್ನು ಸಾಗಾಣೆಯ ವೇಳೆ ವಶಕ್ಕೆ ಪಡೆದಿತ್ತು. ಈ ಕುರಿತು ವಿಚಾರಣೆ ನಡೆಸಿದಾಗ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್ನಿಂದ ಟಿಟಿಡಿಗೆ ಹಿಂದಿರುಗಿಸಲಾಗಿದ್ದ ಚಿನ್ನವದು ಎಂದು ತಿಳಿದುಬಂದಿದೆ.

ಚುನಾವಣೆ ಆಯೋಗದ ವಿಚಾರಣೆಯಿಂದಾಗಿ ತಿರುಮಲ ವಾಸನ ಆಭರಣಗಳ ಅಂಕಿ ಅಂಶಗಳು ಹೊರಬಿದ್ದಿದ್ದು, ಈ ಸುದ್ದಿ ವೆಂಕಟರಮಣನ ಭಕ್ತಾಧಿಗಳನ್ನು ಬೆರಗುಗೊಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top