fbpx
ಸಮಾಚಾರ

ವಿದ್ವತ್ ಮೇಲಿನ ಹಲ್ಲೆ ಪ್ರಕರಣ-ಮೆಕ್ಕಾಗೆ ತೆರಳಲು ನಲಪಾಡ್ ಗೆ ಅನುಮತಿ ನೀಡಿದ ಹೈಕೋರ್ಟ್

ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಷರತ್ತು ಬದ್ಧ ಜಾಮೀನು ಪಡೆದುಕೊಂಡಿದ್ದ ಶಾಸಕ ಎನ್‌.ಎ. ಹ್ಯಾರಿಸ್ ಅವರ ಮಗ ಮೊಹಮ್ಮದ್ ನಲಪಾಡ್‌ಗೆ ಮೆಕ್ಕಾಗೆ ತೆರಳಲು ಹೈಕೋರ್ಟ್ ಅನುಮತಿ ನೀಡಿದೆ.

ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ನಲಪಾಡ್ ಜೈಲುಪಾಲಾಗಿ ಷರತ್ತುಬದ್ಧ ಜಾಮೀನು ಸಿಕ್ಕಿದೆ. ಈ ನಡುವೆ ಕೋರ್ಟ್ ಷರತ್ತು ವಿಧಿಸಿ ನಲಪಾಡ್ ಗೆ ಜಾಮೀನು ನೀಡಿತ್ತು. ಈ ವೇಳೆ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳದಂತೆ ಕೋರ್ಟ್ ಸೂಚಿಸಿತ್ತು. ಆದರೆ ಮೊಹಮ್ಮದ್ ನಲಪಾಡ್ ಮೆಕ್ಕಾ ಮದೀನಾ ಯಾತ್ರೆಗೆ ತೆರಳಲು ಅನುಮತಿ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಕಳೆದ ವರ್ಷ ನಡೆದಿದ್ದ ವಿಧ್ವತ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ನಲಪಾಡ್ ಜೈಲು ಸೇರಿದ್ರು. ಬಳಿಕ ಅವರಿಗೆ ಷರತ್ತು ಬದ್ದ ಜಾಮೀನು ದೊರೆತಿತ್ತು. ರಂಜಾನ್ ಹಿನ್ನೆಲೆಯಲ್ಲಿ ಮೆಕ್ಕಾ ಯಾತ್ರೆಗೆ ತೆರಳಲು ನಲಪಾಡ್ ಕೆಲ ದಿನಗಳ ಹಿಂದೆ ಹೈಕೋಟ್​ ಅನುಮತಿ ಕೋರಿದ್ರು. ಹಲ್ಲೆ ಪ್ರಕರಣದಲ್ಲಿ ಷರತ್ತು ಬದ್ಧ ಜಾಮೀನು ನೀಡಿದ್ದ ಹೈಕೋರ್ಟ್, ಮೇ 15ರಿಂದ ಜೂ. 6ರ ವರೆಗೆ ನಲಪಾಡ್​ಗೆ ಮೆಕ್ಕಾಗೆ ತೆರಳಲು ಅನುಮತಿ ನೀಡಿದೆ.

ನೀವು ಮಾಡಿರುವ ಪಾಪ ಎಲ್ಲಿಗೆ ಹೋದರೂ ಕಳೆಯೋದಿಲ್ಲ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಮೆಕ್ಕಾಯಾತ್ರೆಗೆ ತೆರಳಲು ಜಾಮೀನಿನ ಷರತ್ತು ಸಡಿಲಿಸುವಂತೆ ಕೋರಿ ನಲಪಾಡ್ ಅರ್ಜಿ ಸಲ್ಲಿಸಿದ್ದ ಸಂದರ್ಭದಲ್ಲಿ ಚಾಟಿ ಬೀಸಿದ್ದರು. ಬಳಿಕ ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿತ್ತು. ಮೆಕ್ಕಾಗೆ ತೆರಳಲು 20 ದಿನಗಳ ಅನುಮತಿ ನೀಡುವಂತೆ ನಲಪಾಡ್ ಕೋರಿದ್ದರು. ಆದರೆ, ಅವರಿಗೆ 13 ದಿನಗಳ ಅವಕಾಶ ನೀಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top