fbpx
ಸಮಾಚಾರ

ಅಂಬಾನಿ ದುಡ್ಡಿನಿಂದಲೇ ಮುಂಬೈ IPL ಗೆದ್ದಿದೆ- ಬಾಲಿವುಡ್ ನಟನ ವಿವಾದಾತ್ಮಕ ಟ್ವೀಟ್.

ಇಂಡಿಯನ್ ಪ್ರೀಮಿಯರ್ ಲೀಗ್ 12 ಅನ್ನು ಮುಂಬೈ ಇಂಡಿಯನ್ಸ್​ ರೋಚಕವಾಗಿ ಗೆಲುವು ಸಾಧಿಸಿ ಎರಡು ದಿನ ಕಳೆದಿದೆ.. ಟೂರ್ನಿಯೇನೋ ಮುಗಿದಿದೆ. ಆದರೆ, ಈ ಪಂದ್ಯದ ಕೊನೆಯ ಪಂದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಐಪಿಎಲ್​ ಸ್ಕ್ರಿಪ್ಟ್​ ಆಧಾರಿತವಾಗಿಯೇ ನಡೆಯುತ್ತಿದೆ, ಐಪಿಎಲ್​ನಲ್ಲಿ ಫಿಕ್ಸಿಂಗ್​ ನಡೆದಿದೆ ಎಂದು ಅನುಮಾನಿಸಿ ಅನೇಕರು ಬರೆದುಕೊಳ್ಳುತ್ತಿದ್ದಾರೇ..

ಐಪಿಎಲ್ ಫೈನಲ್ ಪಂದ್ಯದ ಕುರಿತು ಬಾಲಿವುಡ್ ಹಿರಿಯ ನಟ ಕಮಲ್ ರಶೀದ್ ಖಾನ್ ಟ್ವೀಟ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಅಂಬಾನಿ ಹಣದಿಂದಲೇ ಮುಂಬೈ ಇಂಡಿಯನ್ಸ್ ಐಪಿಎಲ್ ಪ್ರಶಸ್ತಿ ಗೆದ್ದಿದೆ ಎಂದು KRK ಟ್ವೀಟ್ ಮಾಡಿದ್ದಾರೆ.

 

 

ಧೋನಿ, ರೈನಾ, ರಾಯುಡು ಒತ್ತಾಯ ಪೂರ್ವಕ ಔಟ್ ಹಾಗೂ ಅಂತಿಮ ಓವರ್‌ನಲ್ಲಿ ಶೇನ್ ವ್ಯಾಟ್ಸನ್ ಅನಗತ್ಯ ರನೌಟ್ ಘಟನೆಗಳು ಸ್ಪಷ್ಟವಾಗಿ ಹೇಳುತ್ತಿವೇ, ಭಾರತದಲ್ಲಿ ಅಂಬಾನಿ ಏನು ಬೇಕಾದರು ಮಾಡಬಹುದು, ಈ ಜಗತ್ತಿನಲ್ಲಿ ಹಣದಲ್ಲಿ ಏನೂ ಬೇಕಾದರೂ ಮಾಡಬುಹುದು” ಎಂದು KRK ಟ್ವೀಟ್ ಮಾಡಿದ್ದಾರೆ. ಕಮಲ್ ರಶೀದ್ ಖಾನ್ ಅವರ ಈ ಟ್ವೀಟ್ ಗೆ ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top