fbpx
ಸಮಾಚಾರ

ಶಶಿ ಕುಮಾರ್ ಜೀವನದಲ್ಲಿ ಬಿರುಗಾಳಿ ಎಬ್ಬಿಸಿದ್ದ ಆ ದುರ್ಘಟನೆ.

ಕನ್ನಡ ಚಿತ್ರರಂಗದಲ್ಲಿ ‘ಸುಪ್ರಿಮ್ ಸ್ಟಾರ್’ ಎಂದು ಬಿರುದು ಪಡೆದಿರುವ ಶಶಿಕುಮಾರ್ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ ಅತಿಥಿ ಆಗಮಿಸಿದ್ದರು. ಕಳೆದ ವಾರ ಅವರ ಸಾಧನೆಯ ಹಾದಿ ಕಾರ್ಯಕ್ರಮದ ಮೂಲಕ ಎಲ್ಲ ಕನ್ನಡಿಗರಿಗೆ ತಲುಪಿದೆ.

ಎಲ್ಲರಿಗೂ ಗೊತ್ತಿರುವಂತೆ, ಶಶಿ ಕುಮಾರ್ ಜೀವನದಲ್ಲಿ ಅತಿ ದೊಡ್ಡ ಸಂಕಷ್ಟಕ್ಕೆ ಕಾರಣವಾಗಿದ್ದು ಆ ಒಂದು ಅಪಘಾತ. ಅದು ಹೇಗಾಯ್ತು, ಅದರಿಂದ ಶಶಿಕುಮಾರ್ ಅನುಭವಿಸಿದ ನೋವುಗಳೇನು? ಆ ಅಪಘಾತದ ಬಳಿಕ ಶಶಿ ಕುಮಾರ್ ಜೀವನದ ಮೇಲೆ ಅದು ಎಷ್ಟು ಕೆಟ್ಟ ಕೆಟ್ಟ ಪರಿಣಾಮ ಬೀರಿತು ಎಂಬುದನ್ನು ಸ್ವತಃ ಶಶಿಕುಮಾರ್ ಅವರೇ ಬಹಿರಂಗಪಡಿಸಿದ್ದಾರೆ.

ಕೇವಲ ಏಳೆಂಟು ವರ್ಷದಲ್ಲಿ 75 ಸಿನಿಮಾಗಳನ್ನು ಮಾಡಿದ್ದ ಶಶಿಕುಮಾರ್ ಸಾಕಷ್ಟು ಸಿನಿಮಾಗಳು ಸೂಪರ್ ಹಿಟ್ ನೀಡಿದ್ದರು.. ಕನ್ನಡದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇರುವ ನಟರಲ್ಲಿ ಪ್ರಮುಖರಾಗಿದ್ದ ಇವರು ದೊಡ್ಡ ಸ್ಟಾರ್ ಆಗಿ ಬೆಳೆಯುತ್ತಿದ್ದರು. ಹೀಗೆ ಎಲ್ಲ ಚೆನ್ನಾಗಿದೆ ಎನ್ನುವ ಹೊತ್ತಲ್ಲೇ, 1998 ಜುಲೈ 31 ರಂದು ಅವರಿಗೆ ಆಕ್ಸಿಡೆಂಟ್ ಆಗಿತ್ತು. ಅಪಘಾತದಿಂದ ಶಶಿಕುಮಾರ್ ಮುಖಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು. ಅಪಘಾತದ ತೀವ್ರತೆಗೆ ಶಶಿಕುಮಾರ್ ಮುಖ ನೋಡಲು ಆಗದೆ ಇರುವ ಹಾಗೆ ಆಯ್ತು. ಅಲ್ಲಿಂದ ಶಶಿ ಬದುಕಿನಲ್ಲಿ ಬಿರುಗಾಳಿ ಬಂತು.

ಅಪಘಾತದ ನಂತರ ಶಶಿಕುಮಾರ್ ಅವರಿಗೆ ಸಿನಿಮಾ ಅವಕಾಶಗಳು ಕಡಿಮೆ ಆದವು. ಅಪಘಾತದ ನಂತರ ಶಶಿಕುಮಾರ್ ಗೆ ಡ್ಯಾನ್ಸ್ ಮಾಡಲು, ನಟನೆ ಮಾಡಲು ಆಗಲ್ಲ ಎನ್ನುವ ಸುದ್ದಿಗಳನ್ನೂ ಕೆಲವರು ಹಬ್ಬಿಸಿದ್ದರು.. ಇಂಥಾ ಸುಳ್ಳು ಸುದ್ದಿಗಳಿಂದ ಶಶಿಗೆ ಸಿನಿಮಾಗಳು ಕೈ ತಪ್ಪಿದ್ದವು.. ಇತ್ತ ಕೈಯಲ್ಲಿಕೆಲಸ ಇಲ್ಲದೆ, ಹಣ ಇಲ್ಲದೆ ಸ್ನೇಹಿತರಿಗೆ ಕೇವಲ 10 ಸಾವಿರಕ್ಕಾಗಿ ಕೈ ಚಾಚಿದ್ದಾರಂತೆ. ಆದರೆ, ಯಾರು ಕೂಡ ನಮ್ಮ ಸಹಾಯಕ್ಕೆ ಬರಲಿಲ್ಲ ಎಂದು ನೋವು ಹಂಚಿಕೊಂಡರು ಶಶಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top