fbpx
ಸಮಾಚಾರ

ರೋಗಿಯ ಹೊಟ್ಟೆಯಲ್ಲಿ ಬರೋಬ್ಬರಿ 116 ಕಬ್ಬಿಣದ ಮೊಳೆ ಪತ್ತೆ- ದಂಗಾದ ವೈದ್ಯರು.

ವ್ಯಕ್ತಿಯೊಬ್ಬರ ಹೊಟ್ಟೆಯಿಂದ 116 ಕಬ್ಬಿಣದ ಮೊಳೆಗಳು, ಪೆಲ್ಲೆಟ್‌ಗಳು ಹಾಗೂ ಉದ್ದದ ತಂತಿಯನ್ನು ಹೊರತೆಗೆಯಲಾಗಿದೆ. ಹೊಟ್ಟೆನೋವೆಂದು ಚಿಕಿತ್ಸೆಗೆ ಬಂದಿದ್ದ 42 ವರ್ಷದ ವ್ಯಕ್ತಿಯ ಹೊಟ್ಟೆಯಲ್ಲಿ ಭರ್ಜರಿ ಪ್ರಮಾಣದ ಕಬ್ಬಿಣದ ಮೊಳೆ ಪತ್ತೆಯಾದ ಘಟನೆ ರಾಜಸ್ಥಾನದ ಬುಂಡಿಯಲ್ಲಿ ನಡೆದಿದೆ.

ಭೋಲಾ ಶಂಕರ್(42) ಅವರ ಹೊಟ್ಟೆಯಲ್ಲಿದ್ದ 116 ಕಬ್ಬಿಣದ ಮೊಳೆಗಳು ಹಾಗೂ ಕೆಲವು ವೈರ್ ಗಳನ್ನು ವೈದ್ಯ ಡಾ. ಅನೀಲ್ ಸೈನಿ ಅವರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರೋಗಿಯೂ ಭಾನುವಾರದಂದು ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ವೈದ್ಯರು ಅವರ ಎಕ್ಸ್-ರೇ ಮಾಡಿದಾಗ ಹೊಟ್ಟೆಯಲ್ಲಿ ಮೊಳೆಗಳು ಹಾಗೂ ವೈರ್ ಗಳು ಇರುವುದು ತಿಳಿದಿದೆ. ಆದರೆ ಇದನ್ನು ಕಂಡ ವೈದ್ಯರು ಅಚ್ಚರಿಗೊಂಡು ಮತ್ತೆ ರೋಗಿಯ ಸಿಟಿ ಸ್ಕ್ಯಾನ್ ಮಾಡಿದಾಗ ಹೊಟ್ಟೆಯಲ್ಲಿ ಮೊಳೆಗಳು ಇರುವುದು ಖಚಿತಪಟ್ಟಿದೆ. ಅದಾದ ಬಳಿಕ ಸೋಮವಾರದಂದು ರೋಗಿಯ ಶಸ್ತ್ರಚಿಕಿತ್ಸೆ ಮಾಡಿ ಕಬ್ಬಿಣದ ಮೊಳೆಗಳು ಹಾಗೂ ವೈರ್ ಗಳನ್ನು ವೈದ್ಯರು ಹೊರತೆಗೆದಿದ್ದಾರೆ.

ಈ ಸಂಬಂಧ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ ಸೈನಿ, ”ಎಕ್ಸ್ ರೇ ವರದಿ ನೋಡಿದ ಬಳಿಕ ಅಲ್ಲಿದ್ದ ವಸ್ತುಗಳನ್ನು ನೋಡಿ ನಾನು ಶಾಕ್‌ ಆದೆ. ನಂತರ, ಸೋಮವಾರ (ಮೇ 13) ರಂದು ಶಂಕರ್‌ಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ವಸ್ತುಗಳನ್ನು ಹೊರತೆಗೆಯಲಾಗಿದೆ” ಎಂದು ತಿಳಿಸಿದರು.

”ಅಷ್ಟು ದೊಡ್ಡ ವಸ್ತುಗಳನ್ನು ಅತ ಹೇಗೆ ನುಂಗಿದ ಎಂದು ಕೇಳಿದರೆ ಆತನಿಗೆ ಹೇಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಅವರ ಕುಟುಂಬದವರಿಗೂ ಈ ಬಗ್ಗೆ ಮಾಹಿತಿ ಇಲ್ಲ. ಕಬ್ಬಿಣದ ಮೊಳೆಗಳು ಒಂದು ವೇಳೆ ಕರುಳಿಗೆ ಪ್ರವೇಶ ಮಾಡಿದ್ದರೆ ಅಪಾಯವಾಗುತ್ತಿತ್ತು” ಎಂದು ಸಹ ವೈದ್ಯರು ಮಾಹಿತಿ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top