fbpx
ಸಮಾಚಾರ

ಸಿಎಂ ಎದುರಿಗೆಯೇ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಎಂದು ಮುಜುಗರಗೊಂಡ ಅರ್ಚಕ.

ಮಂಡ್ಯ ಲೋಕಸಭಾ ಚುನಾವಣಾ ಕಾವು ಆರಂಭವಾದ ದಿನದಿಂದ ನಿಖಿಲ್​ ಎಲ್ಲದೀಯಪ್ಪಾ ಎಂಬ ಪದ ಸಾಕಷ್ಟು ಸದ್ದು ಮಾಡುತ್ತಿದೆ. ದೇಶ-ವಿದೇಶಗಳಲ್ಲೂ ಇದರ ಹವಾ ಸೃಷ್ಟಿಯಾಗಿ ಸಾಕಷ್ಟು ಟ್ರೋಲ್​ ಕೂಡ ಆಗಿತ್ತು. ಆದರೆ, ಇದೇ ಪದ ದೇವೇಗೌಡರ ಕುಟುಂಬಕ್ಕೆ ಇರಿಸುಮುರಿಸನ್ನು ಉಂಟುಮಾಡಿತ್ತು. ಎಷ್ಟರ ಮಟ್ಟಿಗೆ ಎಂದರೆ ಸ್ವತಃ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರೇ ಈ ಬಗ್ಗೆ ಮಾತನಾಡಿ ಟ್ರೋಲ್ ಮಾಡಿದವರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಆದರೆ ನೆನ್ನೆ ಅರ್ಚಕರೊಬ್ಬರು ಸಿಎಂ ಕುಮಾರಸ್ವಾಮಿ ಮುಂದೆಯೇ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಎಂದು ಬಿಟ್ಟಿದ್ದಾರೆ. ಕುಮಾರಸ್ವಾಮಿ ಅವರು ಇಂದು ಕಲಬುರಗಿಯ ಗಾಣಿಗಪುರದ ದತ್ತಾತ್ರೆಯ ದೇವಸ್ಥಾನಕ್ಕೆ ತೆರಳಿದ್ದರು, ಅವರೊಂದಿಗೆ ಜೆಡಿಎಸ್ ಕಾರ್ಯಕರ್ತರು, ಬೆಂಬಲಿಗರು ದೇವಸ್ಥಾನಕ್ಕೆ ಹೋಗಿದ್ದರು, ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ಅರ್ಚಕರು ಅಚಚಾನಕ್ಕಾಗಿ ‘ನಿಖಿಲ್ ಎಲ್ಲಿದ್ದೀಯ’ ಎಂದು ಕರೆದಿದ್ದಾರೆ, ಇದರಿಂದ ಕೆಲ ಕಾಲ ಅಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಅರ್ಚಕ ದತ್ತಾತ್ರೆಯ ಅವರ ಮಗನ ಹೆಸರೂ ನಿಖಿಲ್ ಎಂದೇ ಆಗಿದೆ. ಆತ ಪೂಜೆಗೆ ಬೇಕಾದ ಸಾಮಗ್ರಿಯೊಂದನ್ನು ತರಲು ಹೋದವ, ಜನಜಂಗುಳಿಯ ಹಿಂದೆ ಸಿಲುಕಿಕೊಂಡಿದ್ದಾನೆ, ಅದಕ್ಕೆ ಅರ್ಚಕ ದತ್ತಾತ್ರೆಯ ಅವರು ನಿಖಿಲ್ ಎಲ್ಲಿದ್ದೀಯಾ? ಎಂದು ಜೋರಾಗಿ ಪ್ರಶ್ನಿಸಿದ್ದಾರೆ. ಇದನ್ನು ತಪ್ಪು ತಿಳಿದುಕೊಂಡ ಕುಮಾರಸ್ವಾಮಿ ಬೆಂಬಲಿಗರು, ಅರ್ಚಕರ ಮೇಲೆ ರೇಗಿದ್ದಾರೆ, ಕೂಡಲೇ ಎಚ್ಚೆತ್ತುಕೊಂಡ ಅರ್ಚಕರು ಕುಮಾರಸ್ವಾಮಿ ಅವರಿಗೆ ಇರುವ ವಿಷಯವನ್ನು ವಿವರಿಸಿದ್ದಾರೆ. ಅಲ್ಲದೆ ತಮ್ಮ ಮಗನನ್ನು ಕರೆದು ಪರಿಚಯ ಮಾಡಿಸಿ, ಚಿತ್ರವೊಂದನ್ನೂ ತೆಗೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top