fbpx
ಸಮಾಚಾರ

ಮೈಸೂರು ಅರಮನೆಗೆ ಬಾಂಬ್‌ ಬೆದರಿಕೆ ಕರೆ- ಹೈ ಅಲರ್ಟ್

ಮೈಸೂರಿನ ಅರಮನೆ ಆವರಣದಲ್ಲಿ ಕುಡುಕನೊಬ್ಬ ಬಾಂಬ್‌ ಇಟ್ಟಿರುವುದಾಗಿ ಹೇಳಿ ಪ್ರವಾಸಿಗರು ಹಾಗೂ ಪೊಲೀಸ್ ಸಿಬ್ಬಂದಿ ಕ್ಷಣಕಾಲ ಆತಂಕಕ್ಕೀಡಾಗುವಂತೆ ಮಾಡಿದ ಘಟನೆ ನಡೆಯಿತು. ಬಾಂಬ್ ಇದೆ ಎಂಬ ಮಾಹಿತಿ ಮೇರೆಗೆ ಅರಮನೆಯಲ್ಲಿ ಹೈಅಲರ್ಟ್, ಭದ್ರತೆ ಹೆಚ್ಚಿಸಲಾಗಿತ್ತು.

ಬೆಳವಾಡಿ ನಿವಾಸಿ ಗಂಗಾಧರ್‌(42) ಎಂಬಾತನೇ ಹುಸಿ ಬಾಂಬ್‌ ಕರೆ ಮಾಡಿ ಸಿಕ್ಕಿಬಿದ್ದವ. ಸಹೋದರರೊಂದಿಗೆ ಆಸ್ತಿ ವಿಚಾರದಲ್ಲಿ ಜಗಳವಾಡಿ ಮನನೊಂದಿದ್ದ ಗಂಗಾಧರ ಮದ್ಯ ಸೇವಿಸಿ ಬೆಳಗ್ಗೆ 9.25 ಹಾಗೂ 9.29ಕ್ಕೆ ಎರಡು ಬಾರಿ ಕರೆ ಮಾಡಿ, ಅರಮನೆ ಬಾಂಬ್‌ ಇರಿಸಿದ್ದಾಗಿ ಬೆದರಿಸಿದ್ದಾನೆ.

ತಕ್ಷಣ ಬಾಂಬ್‌ ಪತ್ತೆ ದಳ, ಶ್ವಾನ ದಳದ ಸಿಬ್ಬಂದಿ ಅರಮನೆಗೆ ಧಾವಿಸಿ ಪರಿಶೀಲನೆ ನಡೆಸಿದ್ದು ಇದೊಂದು ಹುಸಿಕರೆ ಎಂಬುದನ್ನು ಖಾತ್ರಿ ಪಡಿಸಿಕೊಂಡಿದ್ದಾರೆ. ಈ ನಡುವೆ ಮೊಬೈಲ್‌ ಸಂಖ್ಯೆ ಮತ್ತು ಟವರ್‌ ಆಧಾರ ಮೇಲೆ ಬಾರ್‌ವೊಂದರಲ್ಲಿ ಕುಡಿಯುತ್ತಿದ್ದ ಗಂಗಾಧರನನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ದೇವರಾಜ ಠಾಣೆಯಲ್ಲಿ ಗಂಗರಾಜು ವಿರುದ್ಧ ಪ್ರಕರಣ ದಾಖಲಾಗಿದೆ.

ಅರಮನೆ ದ್ವಾರ ಸೇರಿದಂತೆ ಅರಮನೆಯ ಇನ್ನಿತರ ಭಾಗಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ ಹಾಗೂ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ.ಅರಮನೆಗೆ ಪ್ರವೇಶಿಸುತ್ತಿರುವ ಪ್ರವಾಸಿಗರನ್ನು ಕೂಲಂಕುಶವಾಗಿ ಪರಿಶೀಲಿಸಿ ಒಲಗಡೆ ಬಿಡಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top