fbpx
ಸಮಾಚಾರ

ಸುಮಲತಾ ಅಂಬರೀಶ್ ವಿರುದ್ಧ ದೂರು ದಾಖಲು.

ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಚುನಾವಣಾ ಆಯೋಗಕ್ಕೆ ವಕೀಲರ ತಂಡವೊಂದು ದೂರು ನೀಡಿದೆ.ಸಿಆರ್ ಪಿಎಸ್ ಯೋಧ ಮತದಾನ‌ ಮಾಡಿದನ್ನ ಫೇಸ್ ಬುಕ್ ಗೆ ಹಾಕಿ ಮತಯಾಚನೆ ಮಾಡಿರುವ ಹಿನ್ನೆಲೆಯಲ್ಲಿ ಕಿರಣ್ ಸೇರಿದಂತೆ ಐವರು ವಕೀಲರ ತಂಡ ರಾಜ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ಸಿಆರ್ ಪಿ ಎಫ್ ಯೋಧ ಸುಮಲತಾ ಅವರಿಗೆ ಮತದಾನ‌ ಮಾಡಿರುವ ಪೊಟೋಗಳನ್ನ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದರು. ಇದನ್ನ ಶೇರ್ ಮಾಡುವ ಮೂಲಕ ಸುಮಲತಾ ಅಂಬರೀಶ್ ಅವರು ಮತಯಾಚನೆ ಮಾಡಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ..

“ಚುನಾವಣೆ ಸಮಯದಲ್ಲಿ ಯಾವುದೇ ಯೋಧನನ್ನ ಬಳಸಿಕೊಂಡು ಮತದಾನ ಮಾಡುವಂತೆ ಮನವಿ ಮಾಡುವಂತಿಲ್ಲ ಒಂದು ವೇಳೆ ಮಾಡಿದರೆ ಕಾನೂನು ಬಾಹಿರವಾಗುತ್ತದೆ.. ಹಾಗಿದ್ದರೂ ಸುಮಲತಾ ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಯೋಧ ಪೋಸ್ಟ್ ಮಾಡಿರುವ ಪೋಟೊಗಳು ಮತದಾರರನ್ನ ಪ್ರೇರೆಪಿಸಿವೆ. ಹೀಗಾಗಿ ಸುಮಲತಾ ಅಂಬರೀಶ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top