fbpx
ಸಮಾಚಾರ

ಒಂದು ಮುತ್ತಿನ ಕತೆ. ಈ ಮುತ್ತಿನ ಬೆಲೆ ಕೇಳಿದ್ರೆ ನೀವು ಕೂಡ ಶಾಕ್ ಆಗ್ತೀರಾ.

ಕೆನಡಾದ ವ್ಯಕ್ತಿಯೊಬ್ಬರು 27 ಕೆಜಿ ತೂಕದ ದೈತ್ಯ ಮುತ್ತೊಂದನ್ನ ಹೊಂದಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. 34 ವರ್ಷದ ಅಬ್ರಹಮ್ ರೆಯೀಸ್ ಎಂಬುವವರಿಗೆ ಕೆಲವು ವರ್ಷಗಳ ಹಿಂದೆ ಅವರ ಸಂಬಂಧಿಯೊಬ್ಬರು ಈ ಮುತ್ತನ್ನ ಉಡುಗೊರೆಯಾಗಿ ನೀಡಿದ್ದರಂತೆ. ಆಶ್ಚರ್ಯಕರ ಸಂಗತಿ ಎಂದರೆ ಅಬ್ರಹಮ್ ಕುಟುಂಬಕ್ಕೆ ಈ ಮುತ್ತಿನ ಮೌಲ್ಯ ಹೋಗಲಿ ತಮ್ಮ ಬಳಿ ಕೋಟಿ ಕೋಟಿ ಬೆಲೆ ಬಾಳುವ ಮುತ್ತು ಇದೆ ಎಂಬುದೇ ತಿಳಿದಿರಲಿಲ್ಲವಂತೆ.

ಒಂದು ಪುಟಾಣಿ ಮಗುವಿನಷ್ಟು ದೊಡ್ಡದಾಗಿರುವ ಈ ಮುತ್ತು 1000 ವರ್ಷಗಳಷ್ಟು ಹಳೆಯದ್ದು ಎಂದು ಅಂದಾಜಿಸಲಾಗಿದೆ. ಅಬ್ರಹಮ್ ಅವರ ತಾತ 1959ರಲ್ಲಿ ಫಿಲಿಪೈನ್ಸ್ನ ಮೀನುಗಾರರಿಂದ ತನ್ನ ಪತ್ನಿಗೆ ಉಡುಗೊರೆಯಾಗಿ ತಂದಿದ್ದರು ಅದಿನಿಂದ ಇತ್ತೀಚಿನ ವರೆಗೂ ಈ ಮುತ್ತನ್ನು ದೊಡ್ಡ ಮಡಿಕೆಯೊಂದರಲ್ಲಿಯೇ ಅಡಗಿಸಿಡಲಾಗಿತ್ತು.

ಈ ಮುತ್ತು ಸುಮಾರು 27.65 ಕೆಜಿ ತೂಕಿವಿದ್ದು ೪೦೦ ರಿಂದ ೬೦೦ ಕೋಟಿಗಳಷ್ಟು ಬೆಲೆ ಉಳ್ಳದ್ದಾಗಿದೆ ಎಂದು ಅಂದಾಜಿಸಲಾಗಿದೆ. ಈ ಹಿಂದೆ ಫಿಲಿಪೈನ್ಸ್ನಲ್ಲಿಯೇ ದೊರಕಿದ್ದ ಸುಮಾರು 6 ಕೆ.ಜಿ ತೂಕದ ಲಾವೋತ್ಸೂ ಮುತ್ತು ಈವರೆಗೆ ಜಗತ್ತಿನ ಅತೀ ದೊಡ್ಡ ಮುತ್ತು ಎನ್ನಿಸಿಕೊಂಡಿತ್ತು. ಆದರೆ ಇದೀಗ ಅಬ್ರಹಮ್ ಅವರ ಬಳಿ ಇರುವ ಮುತ್ತು ಲಾವೋತ್ಸೋಗಿಂತ ನಾಲ್ಕು ಪಟ್ಟು ದೊಡ್ಡದಾಗಿದ್ದು. ವಿಶ್ವದ ಅತೀ ದೊಡ್ಡ ಮುತ್ತು ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಈ ಮುತ್ತನ್ನ ಸದ್ಯ 22 ಕ್ಯಾರಟ್ ಚಿನ್ನದ ಎಳೆಯಿಂದ ಮಾಡಲಾಗಿರುವ ಆಕ್ಟೋಪಸ್ ಆಕೃತಿಯಲ್ಲಿ ನಲ್ಲಿ ಇರಿಸಲಾಗಿದ್ದು. ಇದನ್ನು ಮಾರಾಟ ಮಾಡಲು ಇಚ್ಛಿಸದ ಅಬ್ರಹಂ ಮ್ಯೂಸಿಯಂ ಹಾಗೂ ಗ್ಯಾಲರಿಗಳಲ್ಲಿ ಪ್ರದರ್ಶನಕ್ಕೆ ಇಡಲು ನಿರ್ಧರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top