fbpx
ಸಮಾಚಾರ

ಫೈನಲ್ ಪಂದ್ಯದಲ್ಲಿ ಪೊಲಾರ್ಡ್​​​ ಮಾಡಿದ ಆ ಒಂದು ತಪ್ಪಿಗೆ ಬಿತ್ತು ಭಾರೀ ದಂಡ.

ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಮುಂಬೈ ಇಂಡಿಯನ್ಸ್​ ನಡುವೆ ಭಾನುವಾರ ನಡೆದ ಐಪಿಎಲ್​ ನಲ್ ಪಂದ್ಯದಲ್ಲಿ ಅಂಪೈರ್​ ತೀರ್ಪಿಗೆ ಅಗೌರವ ತೋರಿದ ಮುಂಬೈ ಬ್ಯಾಟ್ಸ್​ಮೆನ್​ ಕೀರನ್ ಪೊಲಾರ್ಡ್​ಗೆ ಪಂದ್ಯಶುಲ್ಕದ ಶೇಕಡಾ 25ರಷ್ಟು ದಂಡ ವಿಧಿಸಲಾಗಿದೆ.

ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದ ಮುಂಬೈ ಇನ್ನಿಂಗ್ಸ್ ನ ಅಂತಿಮ ಓವರಿನಲ್ಲಿ ಘಟನೆ ನಡೆದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ರಾವೋ ಬೌಲ್ ಮಾಡಿದ್ದರು. ಈ ಹಂತದಲ್ಲಿ ಮೊದಲ 2 ಎಸೆತಗಳು ಡಾಟ್ ಆಗಿದ್ದು, ಆದರೆ 3ನೇ ಎಸೆತ ವೈಡ್ ಎಂದು ಭಾವಿಸಿ ಹೊಡೆಯದೇ ಬಿಟ್ಟಿದ್ದರು. ಆದರೆ ಅಂಪೈರ್ ವೈಡ್ ಘೋಷಿಸಿರಲಿಲ್ಲ. ಇದಕ್ಕೆ ಅಸಮಾಧಾನಗೊಂಡ ಪೋಲಾರ್ಡ್ ಬ್ಯಾಟನ್ನು ಮೇಲಕ್ಕೆ ಎಸೆದು ಸಿಟ್ಟು ಹೊರ ಹಾಕಿದ್ದರು.

ಬಳಿಕ ಬ್ರಾವೋ ಮುಂದಿನ ಎಸೆತ ಎಸೆಯುವ ವೇಳೆ ಪೊಲಾರ್ಡ್ ವೈಡ್ ಲೈನ್ ಬಳಿ ಬಂದು ಬ್ಯಾಟ್ ಹಿಡಿದು ನಿಂತಿದ್ದರು. ಕೈರನ್ ಪೊಲಾರ್ಡ್ ಈ ವರ್ತನೆಯಿಂದಾಗಿ ಆನ್ ಫೀಲ್ಡ್ ಅಂಪಾಯರ್ ಗಳಾದ ನಿತಿನ್ ಮೆನನ್ ಮತ್ತು ಇಯಾನ್ ಗೂಲ್ಡ್ ಪೊಲಾರ್ಡ್ ಬಳಿ ಹೋಗಿ ಕ್ರೀಸ್ ನಿಂದಲೇ ಬ್ಯಾಟ್ ಮಾಡಬೇಕೆಂದು ವಾರ್ನ್ ಮಾಡಿದ ಪ್ರಸಂಗ ನಡೆಯಿತು.

ಹೀಗಾಗಿ ಪೊಲಾರ್ಡ್​​ ಅಂಪೈರ್​ ವಿರುದ್ಧ ಅನುಚಿತ ವರ್ತನೆ ತೋರಿದ ಕಾರಣಕ್ಕಾಗಿ ಪಂದ್ಯದ ಶುಲ್ಕದಲ್ಲಿ ಶೇ.25ರಷ್ಟು ದಂಡ ವಿಧಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top