fbpx
ಸಮಾಚಾರ

ತೆರೆ ಮೇಲೆ ಬರುತ್ತಿದೆ ಮಾನವ ಕಂಪ್ಯೂಟರ್, ಹೆಮ್ಮೆಯ ಕನ್ನಡತಿ ಶಕುಂತಲಾ ದೇವಿ ಜೀವನ ಚರಿತ್ರೆ

ಇತ್ತೀಚಿಗಂತೂ ಸಿನಿಮಾ ರಂಗದಲ್ಲಿ ಕೇವಲ ಬಯೋಪಿಕ್ ಗಳದೇ ಕಾರುಬಾರು. ಹೌದು, ಒಂದಾದಮೇಲೆ ಒಂದರಂತೆ ಶ್ರೇಷ್ಠ ಸಾಧನೆಗೈದ ವ್ಯಕ್ತಿಗಳ ಜೀವನ ಚಿತ್ರವನ್ನು ತೆರೆಯೇ ಮೇಲೆ ತರುವ ಪ್ರಯತ್ನ ಎಲ್ಲಾ ಚಿತ್ರರಂಗದಲ್ಲೂ ಭರದಿಂದ ಸಾಗುತ್ತಿದೆ..ಮನಮೋಹನ್ ಸಿಂಗ್, ಕಪಿಲ್ ದೇವ್, ಸಚಿನ್, ಧೋನಿಯಿಂದ ಹಿಡಿದು ಮೊನ್ನೆಯ ಸಂಜಯ್ ದತ್ ಯವರೆಗೂ ಬಯೋಪಿಕ್ ಚಿತ್ರಗಳು ಬಂದಿವೆ ಇದೀಗ ಭಾರತೀಯ ಗಣಿತಶಾಸ್ತ್ರದ ಪರಿಣಿತೆ, ಮಾನವ ಕಂಪ್ಯೂಟರ್ ಎಂದೇ ಹೆಸರಾಗಿರುವ ಶಕುಂತಲಾ ದೇವಿಯವರ ಬಯೋಪಿಕ್ ಕೂಡ ತೆರೆ ಮೇಲೆ ಬರಲು ಸಜ್ಜಾಗುತ್ತಿದೆ.

ಶಕುಂತಲಾ ದೇವಿ ಪಾತ್ರದ ಬಗ್ಗೆ ಉತ್ಸುಕರಾಗಿರುವ ವಿದ್ಯಾ ಈಗಾಗಲೇ ತಮ್ಮ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ‘ಖ್ಯಾತ ಗಣಿತಜ್ಞೆ, ಮಾನವ ಕಂಪ್ಯೂಟರ್ ಶಕುಂತಲಾ ದೇವಿ ಅವರ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಥ್ರಿಲ್ ತಂದಿದ್ದೆ. ಸಣ್ಣ ಊರಿನ ಹುಡುಗಿಯೊಬ್ಬಳು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಯಾಗುವ ಕಥೆಯ ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ಖುಷಿ ತಂದಿದೆ. 2020ರ ವೇಳೆಗೆ ಶಕುಂತಲಾ ದೇವಿಯಾಗಿ ವಿದ್ಯಾಬಾಲನ್ ಥಿಯೇಟರ್‌ನಲ್ಲಿರುತ್ತಾಳೆ’ಎಂದು ಟ್ವೀಟ್ ಮಾಡಿದ್ದಾರೆ.

 

 

ಅನು ಮಿನನ್ ನಿರ್ದೇಶನ, ವಿಕ್ರಮ್ ಮಲ್ಹೋತ್ರಾ ನಿರ್ಮಾಣದ ಈ ಸಿನಿಮಾ 2020ರ ಬೇಸಿಗೆಗೆ ಪ್ರೇಕ್ಷಕರ ಮುಂದೆ ಬರಲಿದೆ. ಈ ಚಿತ್ರಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳು ಶೀಘ್ರದಲ್ಲೇ ಹೊರಬೀಳಲಿವೆ.

ಅಂದಹಾಗೆ ಶಕುಂತಲಾ ದೇವಿ ಮಾನವ ಕಂಪ್ಯೂಟರ್ ಎಂದೇ ಖ್ಯಾತರಾದವರು. ಗಣಿತದಲ್ಲಿ ಅದೆಷ್ಟೇ ಕ್ಲಿಷ್ಟವಾದ ಸಮಸ್ಯೆ ಇರಲಿ ಫಟಾಫಟ್ ಎಂದು ಬಗೆಹರಿಸುತ್ತಿದ್ದರು. ಇವರ ನೆನಪಿನ ಶಕ್ತಿ ಅದ್ಭುತ. ಗಣಿತ ಶಾಸ್ತ್ರಜ್ಞೆ ಜೊತೆಗೆ ಇವರೊಬ್ಬ ಜ್ಯೋತಿಷ್ಯೆ, ಕಾದಂಬರಿಗಾರ್ತಿ, ಲೇಖಕಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top