fbpx
ಸಮಾಚಾರ

ಕಾಲೆಳೆದ ಹುಚ್ಚು ಅಭಿಮಾನಿಗೆ ಬುದ್ಧಿವಂತಿಕೆಯ ಉತ್ತರ ಕೊಟ್ಟ ಟೀಂ ಇಂಡಿಯಾ ಆಟಗಾರ್ತಿ.

ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಜೆಮಿಮಾ ರಾಡ್ರಿಗಾಸ್ ಅವರು ತಮ್ಮ ಹುಚ್ಚು ಅಭಿಮಾನಿಯೊಬ್ಬನ ಟ್ವೀಟ್‍ಗೆ ಸ್ಮಾರ್ಟ್ ಉತ್ತರ ನೀಡಿ ನೆಟ್ಟಿಗರಿಂದ ಮೆಚ್ಚುಗೆ ಪಡೆದಿದ್ದಾರೆ.

ಕಳೆದ ವಾರ ಮಹಿಳಾ ಟಿ20 ಲೀಗ್ ಫೈನಲ್ ಪಂದ್ಯದ ಬಳಿಕ ವರುಣ್ ಹೆಸರಿನ ಅಭಿಮಾನಿಯೊಬ್ಬನು ಟ್ವೀಟ್ ಮಾಡಿ ಕಾಲೆಳೆದಿದ್ದನು, “ಜೆಮಿನಾ ನಾನು ನಿಮ್ಮನ್ನು ಇಷ್ಟಪಡುತ್ತೇನೆ. ನೀವು ತುಂಬಾ ಸುಂದರವಾಗಿ ಇದ್ದಿರಾ, ನೀವು ಯಾರನ್ನಾದರೂ ನೋಡುತ್ತಿದ್ದಿರಾ?” ಎಂದು ಬರೆದು ಜೆಮಿಮಾ ರಾಡ್ರಿಗಾಸ್ ಅವನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದನು.

ಈ ಟ್ವೀಟ್ ಗೆ ನಯವಾಗಿಯೇ ಉತ್ತರ ನೀಡಿರುವ ರಾಡ್ರಿಗಾಸ್ ಅಭಿಮಾನಿಗೆ ತಿರುಗೇಟು ಕೊಟ್ಟಿದ್ದಾರೆ. “ಹೌದು ನಾನು ನೋಡುತ್ತಿದ್ದೇನೆ, ಈ ಪಂದ್ಯದ ನಂತರ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉತ್ತಮವಾದ ಭವಿಷ್ಯವನ್ನು ಹೊಂದುವುದನ್ನು ಎದುರು ನೋಡುತ್ತಿದ್ದೇನೆ” ಎಂದು ಉತ್ತರಿಸಿ ಅಭಿಮಾನಿಯ ಬಾಯಿಯನ್ನು ಮುಚ್ಚಿಸಿದ್ದಾರೆ.

 

 

ಅಂದಹಾಗೆ ಜೆಮಿಮಾ ರಾಡ್ರಿಗಾಸ್ ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್‍ನಿಂದ ಗುರುತಿಸಿಕೊಂಡವರು. ಈ ಬಾರಿಯ 2019ರ ಮಹಿಳಾ ಟಿ20 ಲೀಗ್‍ನಲ್ಲಿ ತನ್ನ ತಂಡ ಸೂಪರ್‍ನೋವಾಸ್ ಪರ ಉತ್ತಮವಾಗಿ ಅಡಿದ್ದರು ಮತ್ತು ಆ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top