fbpx
ಸಮಾಚಾರ

“ಗಾಂಧಿ ಕೊಂದ ಗೋಡ್ಸೆ ದೇಶಭಕ್ತ, ಮುಂದೆಯೂ ದೇಶಭಕ್ತರಾಗಿಯೇ ಉಳಿಯಲಿದ್ದಾರೆ” – ಬಿಜೆಪಿ ನಾಯಕಿ ಪ್ರಗ್ಯಾ.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರನ್ನು ಗುಂಡಿಕ್ಕಿ ಕೊಂದ ನಾಥೂರಾಮ್ ಗೋಡ್ಸೆಯನ್ನು ‘ದೇಶಭಕ್ತ’ ಎಂದು ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಮತ್ತು ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಓರ್ವ ಹಿಂದೂ ಎಂಬ ನಟ, ರಾಜಕಾರಣಿ ಕಮಲ್ ಹಾಸನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಾದ್ವಿ “ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಓರ್ವ ದೇಶಭಕ್ತರಾಗಿದ್ದು, ಅವರು ದೇಶಭಕ್ತರಾಗಿಯೇ ಉಳಿಯಲಿದ್ದಾರೆ.

ನಾಥೂರಾಮ್ ಕೃತ್ಯವನ್ನು ಯಾರು ಬೇಕಾದರೂ ತಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಳ್ಳಬಹುದು. ಆದರೆ ಅವರೊಬ್ಬ ದೇಶಭಕ್ತರಾಗಿದ್ದು, ಭವಿಷ್ಯದಲ್ಲೂ ಅವರು ದೇಶಭಕ್ತರಾಗಿಯೇ ಉಳಿಯಲಿದ್ದಾರೆ” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top