fbpx
ಸಮಾಚಾರ

“ತಾಕತ್ ಇದ್ದರೇ ಹಿಂದಿ ಬೋರ್ಡ್​ ತೆಗೆಸು ನೋಡೋಣ” ಎಂದು ಸವಾಲೆಸೆದ ಹಿಂದಿವಾಲಾನ ಚಳಿ ಬಿಡಿಸಿದ ಕನ್ನಡಿಗರು.

ಕರ್ನಾಟಕದಲ್ಲಿ ದಿನೇ ದಿನೇ ಉತ್ತರ ಭಾರತೀಯ ಹಿಂದಿವಾಲಾಗಳ ಉಪಟಳಗಳು ಹೆಚ್ಚಾಗುತ್ತಲೇ ಇವೆ. ಹೊಟ್ಟೆಪಾಡಿಗಾಗಿ ಎಲ್ಲೆಲ್ಲಿಂದಲೋ ಇಲ್ಲಿಗೆ ಬರುವ ಹೊರ ರಾಜ್ಯದವರು ಇಲ್ಲಿನ ಭಾಷೆಯನ್ನು ಕಲಿಯದೇ ಕನ್ನಡಿಗರ ಮೇಲೆಯೇ ದರ್ಪ ತೋರುವ ಇವರು ಇದೀಗ ಕನ್ನಡ ಭಾಷೆಯ ವಿರುದ್ಧವೇ ತಿರುಗಿ ಬೀಳುವಷ್ಟರ ಮಟ್ಟಿಗೆ ಕೊಬ್ಬಿಕೊಂಡಿದ್ದಾರೆ.

ಇದೀಗ ಕನ್ನಡದ ನಾಮಫಲಕ ಅಳವಡಿಕೆ ಮಾಡದೇ ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ನಾಮಫಲಕ ಅಳವಡಿಕೆ ಮಾಡಿದನ್ನು ಪ್ರಶ್ನೆ ಮಾಡಿದ ಕನ್ನಡ ಗ್ರಾಹಕ ಮೇಲೆ ಅನ್ಯಭಾಷಿಕರು ದರ್ಪ ತೋರಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಕನ್ನಡದಲ್ಲಿ ನಾಮಫಲಕ ಹಾಕಲ್ಲ.. ತಾಕತ್ತಿದ್ದರೆ ಹಿಂದಿ ಬೋರ್ಡ್​ ತೆಗೆಸು ನೋಡೋಣ ಎಂದಿದ್ದ ಹೋಟೆಲ್​ ಮಾಲೀಕನನ್ನ ಕನ್ನಡ ಪರ ಸಂಘಟನೆ ಸದಸ್ಯರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೃಗಾಲಯದ ಸಮೀಪವಿರುವ ಶರವಣ ಭವನ್​ ಹೋಟೆಲ್​ನ ನಾಮಫಲಕ ಸಂಪೂರ್ಣ ಇಂಗ್ಲಿಷ್ ಹಾಗೂ​ ಹಿಂದಿ ಮಯವಾಗಿತ್ತು. ಇದನ್ನ ಬೆಂಗಳೂರಿನಿಂದ ಪ್ರವಾಸಕ್ಕೆ ತೆರಳಿದ್ದ ಯುವಕನೊಬ್ಬ ಪ್ರಶ್ನಿಸಿದ್ದನಂತೆ. ಅದಕ್ಕೆ ಹೋಟೆಲ್​ ಮಾಲೀಕ ಯುವಕನನ್ನ ನಿಂದಿಸಿದ್ದನಂತೆ. ಅಲ್ಲದೇ ಕನ್ನಡ ನಾಮಫಲಕ ಹಾಕಲ್ಲ ತಾಕತ್ತಿದ್ದರೆ ಹಿಂದಿ ಬೋರ್ಡ್ ತೆಗೆಸು ನೋಡುವಾ ಅಂತಾ ಸವಾಲು ಹಾಕಿದ್ದ.

 

 

ಈ ವಿಡಿಯೋ ಗಮನಿಸಿದ ಸ್ಥಳೀಯ ಕನ್ನಡಪರ ಸಂಘಟನೆಯ ಮುಖಂಡರು ಹೋಟೆಲ್ ಬಳಿ ಭೇಟಿ ಕೊಟ್ಟು ಆತನ ಮಾತುಗಳನ್ನು ವಿರೋಧಿಸಿದ್ದಾರೆ. ಸಂಘಟನೆಗಳ ಪ್ರತಿಭಟನೆಗೆ ಬೆಚ್ಚಿದ ಮ್ಯಾನೇಜರ್, ಸ್ವತಃ ತಾನಾಗಿಯೇ ಹಿಂದಿ ನಾಮಫಲಕ ತೆರವುಗೊಳಿಸಿ ಕ್ಷಮೆಕೋರಿದ್ದಾರೆ. ಅಲ್ಲದೇ ಹೋಟೆಲ್​​ನಲ್ಲಿ ಅತೀ ಶೀಘ್ರದಲ್ಲೇ ಕನ್ನಡ ನಾಮಫಲಕ ಹಾಕುವುದಾಗಿದೆ ಭರವಸೆ ಕೊಟ್ಟಿದ್ದಾನೆ.

ಕೈ ಮುಗಿದು ಕ್ಷಮೆಯಾಚಿಸುತ್ತಾ ಮ್ಯಾನೇಜರ್​​, ಕನ್ನಡ ನಾಮಫಲಕ ಹಾಕುವುದಾಗಿ ಭರವಸೆ ನೀಡಿದ್ದಾನೆ. ಇದೀಗ ಮ್ಯಾನೇಜರ್ ಕ್ಷಮೆಯಾಚಿಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top