fbpx
ಸಮಾಚಾರ

ವಿಶ್ವಕಪ್ 2019 ಗೆದ್ದವರಿಗೆ​ ಸಿಗಲಿದೆ ಭಾರಿ ಹಣ: ಈವರೆಗಿನ ಟೂರ್ನಿಗಳಲ್ಲಿ ಇದೇ ಅತ್ಯಧಿಕ ಬಹುಮಾನ.

ಕ್ರಿಕೆಟ್ ಪ್ರೇಮಿಗಳು ಅತ್ಯಂತ ಕಾತುರತೆಯಿಂದ ಎದುರು ನೋಡುತ್ತಿರುವ ಐಸಿಸಿ 2019 ಏಕದಿನ ವಿಶ್ವಕಪ್‌ ಮಹಾಸಮರಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೇ 30 ರಿಂದ ಆರಂಭವಾಗುವ ಈ ಕ್ರೀಡಾ ಹಬ್ಬ ಜುಲೈ 14 ರವರೆಗೆ ನಡೆಯಲಿದ್ದು, ಎಲ್ಲ ತಂಡಗಳು ಅದಾಗಲೆ ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿವೆ.

ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಬಹುಮಾನ ಮೊತ್ತ ಪ್ರಕಟ ಮಾಡಿದ್ದು,ಟ್ರೋಫಿ ಎತ್ತುವ ತಂಡಕ್ಕೆ 28 ಕೋಟಿ ( 4 ಮಿಲಿಯನ್ ಅಮೆರಿಕನ್ ಡಾಲರ್) ನಗದು ಬಹುಮಾನ ಪಡೆಯಲಿದೆ. ಈ ಹಿಂದಿನ ವಿಶ್ವಕಪ್​ ಹೋಲಿಸಿದರೆ ಈ ಬಾರಿ ವಿಜೇತರಿಗೆ ನೀಡುವ ಬಹುಮಾನ ಮೊತ್ತವನ್ನು ಏರಿಸಲಾಗಿದೆ.

 

 

ಒಟ್ಟು 10 ಮಿಲಿಯನ್​ ಡಾಲರ್​(70 ಕೋಟಿ ರೂ.) ಮೊತ್ತವನ್ನು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಬಹುಮಾನವಾಗಿ ನೀಡಲಾಗುತ್ತಿದೆ. ವಿಜೇತರಿಗೆ 4 ಮಿಲಿಯನ್​ ಡಾಲರ್​(28 ಕೋಟಿ ರೂ.), ರನ್ನರ್​ ಅಪ್​ಗೆ 2 ಮಿಲಿಯನ್​ ಡಾಲರ್​​(​14 ಕೋಟಿ ರೂ.), ಸೆಮಿಫೈನಲ್​ನಲ್ಲಿ ಸೋತ ತಂಡಕ್ಕೆ 800,000 ಡಾಲರ್​(5.6ಕೋಟಿ ರೂ.) ಬಹುಮಾನ ಮೊತ್ತವನ್ನು ನೀಡಲಾಗುತ್ತದೆ.

ಇಂಗ್ಲೆಂಡ್ ಮತ್ತು ವೇಲ್ಸ್​ನ 11 ಕ್ರೀಡಾಂಗಣದಲ್ಲಿ ಕ್ರಿಕೆಟ್ ಸಮರ ಏರ್ಪಡಲಿದ್ದು, 46 ದಿನಗಳ ಕಾಲ ಬಲಿಷ್ಠ ತಂಡಗಳ ನಡುವೆ ಕದನ ನಡೆಯಲಿದೆ. ಅಂದಹಾಗೆ ಜೂನ್​ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ವಿಶ್ವಕಪ್ ಬೇಟೆಯನ್ನು ಆರಂಭಿಸಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top