fbpx
ಸಮಾಚಾರ

2019 ಕ್ರಿಕೆಟ್​ ವಿಶ್ವಕಪ್​ನ ಅಧಿಕೃತ ಧ್ಯೇಯ ಗೀತೆ ಬಿಡುಗಡೆ- ಕೇಳಿ ‘ಸ್ಟ್ಯಾಂಡ್‌ ಬೈ’. ‘

ಮುಂಬರುವ 2019 ಏಕದಿನ ವಿಶ್ವಕಪ್‌ಗಾಗಿನ ಥೀಮ್ ಸಾಂಗ್ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಿಡುಗಡೆಗೊಳಿಸಿದೆ. ಐಸಿಸಿ ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ ಐಸಿಸಿ ವಿಶ್ವಕಪ್ ಹಾಡನ್ನು ಅಭಿಮಾನಿಗಳಿಗಾಗಿ ಹಂಚಿದೆ. ‘ಸ್ಟ್ಯಾಂಡ್‌ ಬೈ’ ಹೆಸರಿನ ಈ ಗೀತೆಯನ್ನು ಹೊಸ ಕಲಾವಿದ ಲಾರಿನ್‌ ಹಾಗೂ ಬ್ರಿಟನ್‌ನ ಅತ್ಯಂತ ಯಶಸ್ವಿ ಹಾಗೂ ಪರಿಣಾಮಕಾರಿ ಸಂಗೀತ ಬ್ಯಾಂಡ್‌ ರುಡಿಮೆಂಟಲ್‌ ಒಟ್ಟಾಗಿ ರಚಿಸಿವೆ..

ಮೇ 30ರಿಂದ ಇಂಗ್ಲೆಂಡ್‌ನಲ್ಲಿ ವಿಶ್ವಕಪ್‌ ಅರಂಭಗೊಳ್ಳಲಿದ್ದು, ವಿಶ್ವಕಪ್‌ ಪಂದ್ಯಗಳು ನಡೆಯುವ ಎಲ್ಲಾ 11 ಕ್ರೀಡಾಂಗಣಗಳಲ್ಲಿ ಈ ಗೀತೆಯನ್ನು ಪ್ರಸಾರ ಮಾಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ. ಐಸಿಸಿ ತನ್ನ ವೆಬ್‌ಸೈಟ್‌ನಲ್ಲಿ ಈ ಗೀತೆಯನ್ನು ಹಾಕಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

 

 

ಕ್ರಿಕೆಟ್​ ವಿಶ್ವಕಪ್​ ಟೂರ್ನಿಯಲ್ಲಿ ಒಟ್ಟು 48 ಪಂದ್ಯಗಳನ್ನು ಆಡಲಾಗುತ್ತದೆ. ಇಂಗ್ಲೆಂಡ್ ಮತ್ತು ವೇಲ್ಸ್​ನ 11 ಕ್ರೀಡಾಂಗಣದಲ್ಲಿ ಕ್ರಿಕೆಟ್ ಸಮರ ಏರ್ಪಡಲಿದ್ದು, 46 ದಿನಗಳ ಕಾಲ ಬಲಿಷ್ಠ ತಂಡಗಳ ನಡುವೆ ಕದನ ನಡೆಯಲಿದೆ. ಮೇ 30 ರಿಂದ ಆರಂಭವಾಗುವ ಈ ಕ್ರೀಡಾ ಹಬ್ಬ ಜುಲೈ 14 ರವರೆಗೆ ನಡೆಯಲಿದ್ದು, ಎಲ್ಲ ತಂಡಗಳು ಅದಾಗಲೆ ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿವೆ. ಅಂದಹಾಗೆ ಜೂನ್​ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ವಿಶ್ವಕಪ್ ಬೇಟೆಯನ್ನು ಆರಂಭಿಸಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top