fbpx
ಸಮಾಚಾರ

ಹಿಂದೂಗಳ ಭಾವನೆಗೆ ಧಕ್ಕೆ – ಅಮೆಜಾನ್ ವಿರುದ್ಧ ಎಫ್ಐಆರ್ ದಾಖಲು.

ಆನ್ ಲೈನ್ ಮಾರಾಟ ತಾಣ ಅಮೆರಿಕ ಮೂಲದ ಅಮೆಜಾನ್ ವಿರುದ್ಧ ನೋಯ್ಡಾ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಈ ಹಿಂದೆ ಮಹಾತ್ಮ ಗಾಂಧಿ ಚಿತ್ರವಿರುವ ಚಪ್ಪಲಿ ಮಾರಾಟಕಿಟ್ಟು ಭಾರತೀಯರಿಂದ ಉಗಿಸಿಕೊಂಡಿದ್ದ ಅಮೆಜಾನ್ ಇದೀಗ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡಿದೆ.

ಟಾಯ್ಲೆಟ್​ ಶೀಟ್ ಕವರ್ ಮೇಲೆ ಹಾಗೂ ಇನ್ನಿತರ ವಸ್ತುಗಳ ಮೇಲೆ ಹಿಂದೂ ದೇವರುಗಳ ಚಿತ್ರವನ್ನು ಬಳಸಿದ ಹಿನ್ನೆಲೆ ಅಮೆಜಾನ್ ಡಾಟ್​ ಕಾಮ್ ವಿರುದ್ಧ ವಿಕಾಸ್ ಮಿಶ್ರಾ ಅನ್ನೋರು ಕೇಸ್ ದಾಖಲಿಸಿದ್ದಾರೆ. ಯುಎಸ್​ನ ರಿಟೆಲರ್ ವೆಬ್​ಸೈಟ್​​ನಲ್ಲಿ ಈ ಚಿತ್ರಗಳು ಕಂಡು ಬಂದಿದ್ದು , ಬಾಯಕಟ್​ ಅಮೆಜಾನ್ ಅಂತ ಇಂಟರ್ನೆಟ್​ನಲ್ಲಿ ಜನರು ಆಕ್ರೋಶ ಹೊರಹಾಕಿದ್ದರು.

 

 

ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಅಮೆಜಾನ್ ವಕ್ತಾರ, ಮಾರಾಟಗಾರರು ಕಂಪನಿಯ ಮಾರ್ಗದರ್ಶಿ ಸೂಚಕಗಳನ್ನು ಪಾಲಿಸೂಬೇಕು, ಕಾರ್ಯರೂಪಕ್ಕೆ ತರದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ, ಜೊತೆಗೆ ಅವರ ಖಾತೆಯನ್ನು ವಜಾಗೊಳಿಸುವುದಾಗಿ ತಿಳಿಸಿದ್ದಾರೆ. ನಮ್ಮ ಸ್ಟೋರ್ ನಿಂದ ಈ ವಸ್ತುವನ್ನು ತೆಗೆದುಹಾಕಲಾಗಿದೆ ಎಂದು ವಿವರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top