fbpx
ಸಮಾಚಾರ

“‘ಹಿಂದು’ ಪದ ನಮ್ಮದಲ್ಲ ವಿದೇಶದಿಂದ ಬಂದಿದ್ದು” ಮತ್ತೊಮ್ಮೆ ವಿವಾದವೆಬ್ಬಿಸಿದ ಕಮಲ್ ಹಾಸನ್.

ಇತ್ತೀಚಿಗಷ್ಟೇ ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದು’ ಎನ್ನುವ ಮೂಲಕ ಭಾರಿ ಸುದ್ದಿಯಾಗಿದ್ದ ನಟ ಕಮ್ ರಾಜಕಾರಣಿ ಕಮಲ್ ಹಾಸನ್ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ.,

‘ಹಿಂದು’ ಎಂಬ ಪದ ವಿದೇಶದಿಂದ ಬಂದಿದ್ದು. ಯಾರೋ ವಿದೇಶದವರು ಅಜ್ಞಾನದಿಂದ ಹೇಳಿದ ಪದವನ್ನು ಒಂದು ಧರ್ಮಕ್ಕೆ ನೀಡುವುದು ಸರಿಯೇ? ಮೊಘಲರೋ ಅಥವಾ ಭಾರತಕ್ಕೆ ಬಂದ ಇನ್ನ್ಯಾರೋ ಈ ಪದವನ್ನು ನೀಡಿದರು. ಅಲ್ಲಿಯವರೆಗೂ ಇಂಥದೊಂದು ಪದವೇ ನಮ್ಮಲ್ಲಿ ಇರಲಿಲ್ಲ. ನಮಗೆ ಸಾಕಷ್ಟು ಗುರುತುಗಳು ಇರುವಾಗ ನಾವ್ಯಾಕೆ ವಿದೇಶದಿಂದ ಎರವಲು ಪಡೆದ ಪದವನ್ನು ಒಂದು ಧರ್ಮಕ್ಕೆ ಬಳಸಬೇಕು” ಎಂದು ಮಕ್ಕಳ್​ ನೀದಿ ಮೈಯಂ ಪಕ್ಷದ ಸಂಸ್ಥಾಪಕ ಕಮಲ್​ಹಾಸನ್​ ಪ್ರಶ್ನಿಸಿದ್ದಾರೆ.

ಹಿಂದು ಎನ್ನುವ ಶಬ್ದದ ಮೂಲ ಭಾರತದ್ದು ಅಲ್ಲ. ಅದು ವಿದೇಶಿಯರು ಕೊಟ್ಟಿದ್ದು. ಕ್ರಿಸ್ತ ಪೂರ್ವದಲ್ಲಿದ್ದ ದಕ್ಷಿಣ ಭಾರತದ ಶಿವ, ವೈಷ್ಣವ ಆರಾಧಕ ಕವಿ ಸಂತರಾದ ನಯನ್ಮಾರರು, ಆಳ್ವಾರರು ಹಿಂದುಗಳ ಬಗ್ಗೆ ಒಂದೇ ಒಂದು ವಾಕ್ಯ ಹೇಳಿದ ದಾಖಲೆಯಿಲ್ಲ ಎಂದು ತಮಿಳು ಪೋಸ್ಟ್​ ಹಾಕಿ ಟ್ವೀಟ್​ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top