fbpx
ಸಮಾಚಾರ

ಡಾ.ವಿಷ್ಣು, ದರ್ಶನ್ ಜೊತೆ ನಟಿಸಿದ್ದ ಮಾನ್ಯ ದೇಶವನ್ನೇ ಬಿಟ್ಟು ಹೋಗಿದ್ಯಾಕೆ ಗೊತ್ತಾ? ಈಗ ಎಲ್ಲಿದ್ದಾರೆ? ಏನ್ ಮಾಡ್ತಿದ್ದಾರೆ?

ಕೆಲವರಿಗೆ ಅದೃಷ್ಟ ಅನ್ನೋದೇ ಹಾಗೆ! ಕೆಲವೊಮ್ಮೆ ಸಾಕು ಸಾಕು ಅನ್ನೋವಷ್ಟು ಒದ್ದುಕೊಂಡು ಬರುತ್ತದೆ. ಯಾವುದನ್ನು ಒಪ್ಪೋದು ಯಾವುದನ್ನು ಬಿಡೋದು ಎಂದು ಗೊಂದಲ ಕಾಡುವ ಮಟ್ಟಕ್ಕೆ ಅವಕಾಶಗಳು ಬರುತ್ತವೆ. ಇನ್ನೂ ಕೆಲವೊಮ್ಮೆ ಬೇಕು ಅಂತ ಗೋಗರೆದರೂ ಯಾವುದೇ ಅವಕಾಶಗಳು ಬರೋದಿಲ್ಲ. ರಾತ್ರೋ ರಾತ್ರಿ ಸ್ಟಾರ್ ಆಗಿ ಮೆರೆದವರು ಕೂಡ ಮಕಾಡೆ ಮಲಗಿ ಉರುಳುಸೇವೆ ಮಾಡುವಂತಹ ಪರಿಸ್ಥಿತಿ ಎದುರಾಗುತ್ತದೆ.

ಈಗ ನಾವು ಹೇಳೋಕೆ ಹೊರಟಿರುವ ನಟಿಯ ಕತೆಯು ಕೂಡ ಹಾಗೆಯೇ? ಅದೃಷ್ಟ ಮತ್ತು ದುರಾಧೃಷ್ಟ ಇವೆರಡನ್ನೂ ಸಮಾನವಾಗಿ ಕಂಡವಳು.. ತನ್ನ ಆಕರ್ಷಣೀಯ ಕಣ್ಣುಗಳಿಂದಲೇ ಸಿನಿರಸಿಕರ ಮನಗೆದ್ದಿದ್ದ, ಬಟ್ಟಲು ಕಣ್ಣಿನ ಮುದ್ದಿನ ಚೆಲುವೆ ಎಂದೇ ಹೆಸರು ವಾಸಿಯಾಗಿದ್ದ ನಟಿ ಮಾನ್ಯ. ಈಕೆ ವಿಷ್ಣುವರ್ಧನ್, ಅಂಬಿ ಮತ್ತು ದರ್ಶನ್ ರಂತ ದೊಡ್ಡ ನಟರು ಸೇರಿದಂತೆ ಇನ್ನು ಕೆಲವರ ಜೊತೆ ಸೇರಿ ಸುಮಾರು 10 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾಳೆ.

 

 

ಸಾಹಸಸಿಂಹ ವಿಷ್ಣುವರ್ಧನ್ ನಟನೆಯಲ್ಲಿ ಮೂಡಿಬಂದಿದ್ದ ‘ವರ್ಷಾ’ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ನೀಡಿದ್ದ ಈ ಚೆಲುವೆಗೆ ಭರ್ಜರಿ ಓಪನಿಂಗ್ ಸಿಕ್ಕಿತ್ತು.. ಇದರ ಖ್ಯಾತಿ ಈಕೆಯನ್ನು ದರ್ಶನ್, ಶ್ರೀಮುರುಳಿ, ಆದಿತ್ಯಾ, ಸುನೀಲ್ ರಾವ್ ಸೇರಿ ಇನ್ನೂ ಕೆಲವು ಖ್ಯಾತ ನಂತರ ಜೊತೆ ತೆರೆ ಹಂಚಿಕೊಳ್ಳುವ ಸೌಭಾಗ್ಯ ಸಿಕ್ಕಿತ್ತು. ಆದರೆ ಏನಾಯಿತೋ ಏನೋ ನಂತರ ದಿನಗಳಲ್ಲಿ ನಾಪತ್ತೆಯಾಗಿ ಹೋಗಿದ್ದರು. ಯಾವ ಚಿತ್ರಗಳಲ್ಲೂ ಮಾನ್ಯ ನಟಿಸುತ್ತಿರಲಿಲ್ಲ. ಇದಕ್ಕ ಕರಣ ಹುಡುಕಿ ಹೊರಟವರಿಗೆ ಸಿಕ್ಕಿದ ಉತ್ತರ ಆಕೆ ಆಗಾಗಲೇ ಮದುವೆ ಮಾಡಿಕೊಂಡಿದ್ದು, ಚಿತ್ರರಂಗ ತೊರೆದಿದ್ದಳು.

ಮೂಲತಃ ಇಂಗ್ಲೇಂಡ್ ವಾಸಿಯಾದ ಮಾನ್ಯಳ ತಂದೆ ಇಂಗ್ಲೇಂಡ್ ನಲ್ಲಿಯೇ ಡಾಕ್ಟರ್ ವೃತ್ತಿ ಮಾಡುತ್ತಿದ್ದರು. ಇಂಗ್ಲೇಂಡ್ ನಲ್ಲಯೇ ಬೆಳೆದ ಮಾನ್ಯರಿಗೆ ಕನ್ನಡ ಚಿತ್ರರಂಗ ಕೈ ಬೀಸಿ ಕರೆದಿತ್ತು, ಕೆಲವೊಂದು ವರ್ಷ ಸಿನಿಮಾಗಳಲ್ಲಿ ನಟಿಸಿದ ಮೇಲೆ ಚಿತ್ರರಂಗದಿಂದ ದೂರ ಸರಿದರು. ನಂತರ 2008 ರಲ್ಲಿ ಸತ್ಯ ಭಟ್ ರನ್ನು ಮದುವೆಯಾಗಿ, ಆತನಿಗೆ 2012 ರಲ್ಲಿ ವಿಚ್ಚೇದನ ನೀಡಿದರು. ನಂತರ ಉತ್ತರ ಭಾರತಕ್ಕೆ ಸೇರಿದ ವಿಕಾಸ್ ವಾಜಪೇಯಿ ಅವರನ್ನು ಮದುವೆಯಾದರು. ಈಗ ಈ ಜೋಡಿಗೆ ಒಂದು ಮಗುವಿದ್ದು . ಅಮೇರಿಕಾದಲ್ಲಿ ನೆಲೆಸಿದ್ದಾರೆ. ಹಾಗೂ ಎಂಬಿಎ ಮಾಡಿರುವ ಮಾನ್ಯಾ ಇದೀಗ ಕಂಪನಿಯೊಂದರಲ್ಲಿ ‘ಎಚ್ ಆರ್’ ಆಗಿ ಕೆಲಸ ಮಾಡುತ್ತಾ, ಗಂಡ-ಮಗು ಜೊತೆಗೆ ಸಂತೋಷವಾಗಿ ಕಾಲ ಕಳೆಯುತ್ತಿದ್ದಾರೆ.

ನಟಿ ಮಾನ್ಯ ತಂದೆ ಮೂಲತಃ ಇಂಗ್ಲೆಂಡ್ ನಲ್ಲಿ ಡಾಕ್ಟರ್ ಆಗಿದ್ದರು, ಹಾಗಾಗಿ ಈಕೆ ಬೆಳೆದದ್ದು ಇಂಗ್ಲೆಂಡ್ನಲ್ಲಿಯೇ. ಕನ್ನಡ ಚಿತ್ರಗಳಲ್ಲಿ ನಟಿಸುವ ಯೋಗ ಇತ್ತೋ ಏನೋ ಈಕೆ ಕೆಲವು ವರ್ಷಗಳ ಕಾಲ ಚಂದನವನದಲ್ಲಿ ಬ್ಯುಸಿ ನಟಿ ಎನಿಸಿಕೊಂಡುಬಿಟ್ಟಿದ್ದಳು. ನಂತರ 2008 ರಲ್ಲಿ ಸತ್ಯ ಭಟ್ ಎಂಬುವವರನ್ನು ಮದುವೆಮಾಡಿಕೊಂಡ ಮಾನ್ಯ ಆರಂಭದ ವರ್ಷಗಳಲ್ಲಿ ಆತನ ಜೊತೆ ಚನ್ನಾಗಿಯೇ ಇದ್ದರು. ಆದರೆ ನಂತರದ ದಿನಗಳಲ್ಲಿ ಅವರ ಸಾಂಸಾರಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದ ಪರಿಣಾಮ ಈಕೆ 2012 ರಲ್ಲಿ ಆತನಿಗೆ ವಿಚ್ಛೇದನ ಕೊಟ್ಟಳು,

ನಂತರ ಉತ್ತರ ಭಾರತಕ್ಕೆ ಸೇರಿದ ವಿಕಾಸ್ ವಾಜಪೆಯ್ ಎಂಬುವರರನ್ನು ಎರಡನೇ ಮದುವೆ ಮಾಡಿಕೊಂಡರು.. ಸದ್ಯ ಈ ಜೋಡಿ ಅನ್ಯೋನ್ಯವಾಗಿದ್ದು ಇವರಿಗೆ ಒಂದು ಪುಟ್ಟ ಮಗು ಕೂಡ ಇದೆ. ಈಗ ಅಮೇರಿಕಾದಲ್ಲಿ ನೆಲೆಸಿದ್ದಾರೆ.. ಕೆಲವು ವರ್ಷಗಳು ಭಾರತದಲ್ಲಿ ಇದ್ದ ಮಾನ್ಯ ನಂತರ ಅಮೆರಿಕಕ್ಕೆ ತೆರಳಿ ಅಲ್ಲಿನ ಸಾಫ್ಟ್ ವೆರ್ ಕಂಪನಿಯೊಂದರಲ್ಲಿ HR ವಿಭಾಗದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈಗ ಅವರು ಅಮೆರಿಕದಲ್ಲೇ ನೆಲೆಗೊಂಡಿದ್ದು, ಸದ್ಯ ಭಾರತಕ್ಕೆ ಬರುವ ಮನಸ್ಸು ಮಾಡಿಲ್ಲ.

ಕನ್ನಡ ಸೇರಿ ಕೆಲವು ಭಾಷೆಗಳಲ್ಲಿ ನಟಿಸಿದ್ದ ಮಾನ್ಯ ಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದವರು.. ಸಿನಿಮಾರಂಗದಲ್ಲಿ ಮಿಂಚಿ ಅವಕಾಶಗಳಿಲ್ಲದೆ ಮರೆಯಾದ ಎಷ್ಟೋ ನಟಿ ಮಣಿಯರು ತಮ್ಮ ಜೀವನವನ್ನೇ ಹದಗೆಡಿಕೊಂಡಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆಯಿದೆ. ಅಂತವರ ಮದ್ಯೆ ಅವಕಾಶಗಳು ಸಿಗದೇ ಇದ್ದರೂ ಪರವಾಗಿಲ್ಲ ತಾನು ಕಲಿತ ವಿದ್ಯೆ ಕೈಯಿಡಿಯುತ್ತದೆ ಎಂಬ ನಂಬಿಕೆಯ ಮೇಲೆ ಸದೃಢವಾಗಿ ಜೀವನ ಸಾಗಿಸುತ್ತಿದ್ದಾರೆ. ತಾನು ಸ್ಟಾರ್ ಹೀರೋಯಿನ್ ಅನ್ನೋ ಅಹಂ ಅನ್ನು ಬಿಟ್ಟು ಕಷ್ಟ ಆದರೂ ಸರಿ ಎಂದು ಆಫೀಸ್ ಕೆಲಸ ಮಾಡಿ ಬದುಕುತ್ತಿರುವ ಮಾನ್ಯ ಅವರ ಈ ಗುಣವನ್ನು ಪ್ರತಿಯೊಬ್ಬರು ಶ್ಲಾಘಿಸಲೇಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top