fbpx
ಸಮಾಚಾರ

ಎಕ್ಸಿಟ್ ಪೋಲ್ ಕುರಿತು ಸಿಎಂ ಕುಮಾರಸ್ವಾಮಿ ಹೇಳಿದ್ದೇನು?

ಎಕ್ಸಿಟ್‌ ಪೋಲ್‌ ಸಮೀಕ್ಷೆ ಬಗ್ಗೆ ಸರಣಿ ಟ್ವೀಟ್‌ ಮೂಲಕ ಅಭಿಪ್ರಾಯ ವ್ಯಕ್ತ ಪಡಿಸಿರುವ ಸಿಎಂ ಎಚ್‌ಡಿ ಕುಮಾರಸ್ವಾಮಿ, ಇದು ಕೇವಲ ಎಕ್ಸಿಟ್‌ ಪೋಲ್‌, ಎಕ್ಸಾಕ್ಟ್‌ ಪೋಲ್‌ ಅಲ್ಲ. ಮೇ 23ರಂದು ಬಿಜೆಪಿಗೆ ಹಿನ್ನಡೆ ಆಗಲಿದೆ ಎಂದಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳು ಕೇವಲ ಒಂದು ಪಕ್ಷ ಹಾಗೂ ವ್ಯಕ್ತಿ ಪರ ಸುಳ್ಳು ವರದಿ ತೋರಿಸುತ್ತಿದೆ. ಇದು ಎಕ್ಸಿಟ್ ಪೋಲ್ ಅಷ್ಟೇ ಹೊರತು ಎಕ್ಸಾಟ್ ಪೋಲ್ ಅಲ್ಲ ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ಮಾಧ್ಯಮಗಳ ಸಮೀಕ್ಷೆಯ ಬಗ್ಗೆ ಕಿಡಿಕಾರಿದ್ದಾರೆ.

 

 

 

 

 
ಮತದಾನೋತ್ತರ ಸಮೀಕ್ಷೆ ವರದಿ ಪ್ರಕಟವಾದ ನಂತರ ಟ್ವೀಟ್​ ಮೂಲಕ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ‘ಎಲ್ಲಾ ವಿರೋಧ ಪಕ್ಷಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ವಿದ್ಯುನ್ಮಾನ ಮತಯಂತ್ರಗಳ ವಿಶ್ವಾಸಾರ್ಹತೆ ಕುರಿತು ತಮ್ಮ ಆತಂಕ ವ್ಯಕ್ತಪಡಿಸಿದ್ದವು. ವಿರೋಧ ಪಕ್ಷಗಳು ಮತಯಂತ್ರದ ಬದಲು ಚುನಾವಣೆಯಲ್ಲಿ ಮತಪತ್ರಗಳನ್ನು ಬಳಕೆ ಮಾಡುವಂತೆ ಸುಪ್ರೀಂ ಕೋರ್ಟ್​ಗೂ ಅರ್ಜಿ ಸಲ್ಲಿಸಿದ್ದವು. ವಿಶ್ವದ ಹಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಇನ್ನೂ ಮತಪತ್ರ ಬಳಕೆ ಮಾಡುತ್ತಿವೆ ಎಂದು ತಿಳಿಸಿದ್ದಾರೆ.

ಒಬ್ಬ ನಾಯಕನ ಅಥವಾ ಒಂದು ಪಕ್ಷದ ಓಲೈಕೆಗಾಗಿ ಎಲ್ಲಾ ಎಕ್ಸಿಟ್‌ ಪೋಲ್‌ಗಳು ನಕಲಿ ಸಮೀಕ್ಷೆಗಳನ್ನು ಸೃಷ್ಟಿ ಮಾಡಿವೆ. ಅವುಗಳೇ ಹೇಳುವಂತೆ ಇದು ಕೇವಲ ಎಕ್ಸಿಟ್‌ ಪೋಲ್‌, ಎಕ್ಸಾಕ್ಟ್‌ ಪೋಲ್‌ ಅಲ್ಲ ಎಂದು ಕುಮಾರಸ್ವಾಮಿ ಬಿಜೆಪಿ ಗೆಲುವಿನ ಸಮೀಕ್ಷೆಯನ್ನು ಅಲ್ಲಗಳೆದಿದ್ದಾರೆ.

ಭಾನುವಾರ ಲೋಕಸಭಾ ಚುನಾವಣೆಗೆ ತೆರೆ ಬೀಳುತ್ತಿದ್ದಂತೆ ಹೊರಬಿದ್ದ ಎಕ್ಸಿಟ್ ಪೋಲ್ ಸಮೀಕ್ಷೆಗಳು ಎರಡನೇ ಅವಧಿಗೆ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದವು. ಈ ಹಿನ್ನೆಲೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್​ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top