fbpx
ಸಮಾಚಾರ

ಮಗಳ ಅನಾರೋಗ್ಯ- ರಾತ್ರಿಪೂರ್ತಿ ಆಸ್ಪತ್ರೆಯಲ್ಲೇ ಕಳೆದರೂ ಮರುದಿನ ಶತಕ ಸಿಡಿಸಿದ ಮೆರೆದ ರಾಯ್​.

ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜೇಸನ್​ ರಾಯ್​ ಭರ್ಜರಿ ಶತಕ ಸಿಡಿಸಿ (114ರನ್​​) ಪಾಕಿಸ್ತಾನದ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ತಂಡವು ಮೂರು ವಿಕೆಟ್ ಗಳಿಂಡ ಗೆಲುವು ಸಾಧಿಸಲು ನೆರವಾಗಿದ್ದರು. ಗಮನಾರ್ಹ ಸಂಗತಿ ಎಂದರೆ ಈ ಪಂದ್ಯದ ಪ್ರಾರಂಭಕ್ಕೆ ಮುನ್ನ ಅವರು ಬರೋಬ್ಬರಿ ಏಳು ಗಂಟೆ ಕಾಲ ಆಸ್ಪತ್ರೆಯಲ್ಲಿ ಕಳೆದಿದ್ದಾರೆ.

ಪಂದ್ಯಕ್ಕೆ ಮುನ್ನಾ ದಿನ ರಾತ್ರಿ ಅವರು ನಿದ್ದೆಯನ್ನೇ ಮಾಡಿರಲಿಲ್ಲ. ಅವರ ಎರಡು ತಿಂಗಳ ಪುತ್ರಿ ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆ ಸೇರಿದ್ದು, ರಾತ್ರಿ 1.30ರಿಂದ ಬೆಳಗ್ಗೆ 8.30ರ ತನಕ ಅವರು ಅಲ್ಲೇ ಇದ್ದರು ಎನ್ನಲಾಗಿದೆ. ಆಸ್ಪತ್ರೆಯಿಂದ ಬಂದ ರಾಯ್ ಕೇವಲ ಕೆಲ ಕ್ಷಣಗಳ ಕಾಲದ ಅಭ್ಯಾಸ ನಡೆಸಿ ನೇರವಾಗಿ ಕ್ರಿಕೆಟ್ ಮೈದಾನಕ್ಕೆ ಇಳಿದಿದಿದ್ದಾರೆ. ಅಲ್ಲದೆ ಪಂದ್ಯದಲ್ಲಿ ಒಟ್ಟು 114ರನ್ಬಾರಿಸಿ ಗಮನ ಸೆಳೆದಿದ್ದಾರೆ.

“ಬೆಳಗಿನ ಜಾವ ತುಸು ಕಷ್ಟವೆನಿಸಿದ್ದು ಹೌದು. ಆದರೆ ಈ ಸಮಯ ನನಗೆ ಮತ್ತು ನನ್ನ ಕುಟುಂಬಕ್ಕೆ ಅತ್ಯಂತ ಮಹತ್ವದ ಕ್ಷಣವಾಗಿತ್ತು” ಎಂದು ರಾಯ್ ಬಿಬಿಸಿ ರೇಡಿಯೋಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಪಂದ್ಯದಲ್ಲಿ ಕೇವಲ 84 ಎಸೆತದಲ್ಲಿ 114 ರನ್​ ಶತಕ ದಾಖಲಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ರಾಯ್​, ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top