fbpx
ಭವಿಷ್ಯ

ಮೇ 21- ಇಂದಿನ ಪಂಚಾಂಗ ಮತ್ತು ದಿನಭವಿಷ್ಯ

ಸ್ಥಳ- ಬೆಂಗಳೂರು.
ಮಂಗಳವಾರ, ಮೇ 21 2019
ಸೂರ್ಯೋದಯ : 5:53 am
ಸೂರ್ಯಾಸ್ತ: 6:38 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ವೈಶಾಖ
ಪಕ್ಷ : ಕೃಷ್ಣಪಕ್ಷ
ತಿಥಿ : ತೃತೀಯಾ 25:40
ನಕ್ಷತ್ರ :ಮೂಲ 27:31
ಯೋಗ :ಸಿಧ್ಧ 10:25
ಕರಣಂ:ವಾಣಿಜ 13:25 ವಿಷ್ಟಿ 25:40

ಅಭಿಜಿತ್ ಮುಹುರ್ತ:11:50 am – 12:41 pm
ಅಮೃತಕಾಲ :8:51 pm – 10:31 pm

ರಾಹುಕಾಲ-3:25 pm – 5:00 pm
ಯಮಗಂಡ ಕಾಲ-9:06 am – 10:41 am
ಗುಳಿಕ ಕಾಲ-12:16 pm – 1:51 pm

 

 
 

ಚಂಚಲ ಸ್ವಭಾವದವರಾದ ನೀವು ಮತ್ತೊಬ್ಬರ ಬಣ್ಣದ ಮಾತಿಗೆ ಮರುಳಾಗಿ ಹಣದ ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ. ಹಿತೈಷಿಗಳ ಮಾತನ್ನು ಯಾವುದೇ ಕಾರಣಕ್ಕೂ ಅಲಕ್ಷಿಸಬೇಡಿ. ಕಚೇರಿ ಕೆಲಸದ ಒತ್ತಡ ನಿಮ್ಮನ್ನು ಬಾಧಿಸುವುದು.

 

ನಿಮ್ಮ ಗುಣ ಸ್ವಭಾವಗಳಲ್ಲಿ ಬದಲಾವಣೆ ಕಂಡುಬರುವುದು. ಇದರಿಂದ ಆಗುವ ಕೆಲಸಗಳು ಕೂಡಾ ಹಿನ್ನಡೆಯನ್ನು ಪಡೆಯುತ್ತವೆ. ಶತ್ರುಗಳ ವಿರುದ್ಧ ಜಯ ಸಾಧಿಸುವಿರಿ. ಆರ್ಥಿಕ ಸದೃಢತೆ ಕಂಡು ಬರುವುದು. ಹಳೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ.

 

ಈಗಾಗಲೆ ಮಾಡಿದ ಸಾಲಗಳನ್ನು ತೀರಿಸುವತ್ತ ಗಮನ ಹರಿಸುವುದು ಒಳ್ಳೆಯದು. ಮಕ್ಕಳ ವಿದ್ಯಾಭ್ಯಾಸ ಪ್ರಗತಿಯಲ್ಲಿರುತ್ತದೆ. ನಿಮ್ಮ ಆಸಕ್ತಿ ಹೊಸ ಯೋಜನೆಗಳ ಮೂಲಕ ಯಶಸ್ಸನ್ನು ಹೊಂದುವಿರಿ. ಅನುಭವಿಗಳ ಸಲಹೆ ಪಡೆಯಿರಿ. ಯಾವುದೇ ಕಾರಣಕ್ಕೂ ಬಂಧುಗಳ ನಡುವೆ ದ್ವೇಷ ಅಸೂಯೆಗಳನ್ನು ಬೆಳೆಯಗೊಡದಿರಿ. ಬಂದ ಸಂಕಷ್ಟಗಳು ಕ್ರಮೇಣ ದೂರವಾಗಲಿದೆ.

 

ನಿಮ್ಮ ನಡವಳಿಕೆ, ಮಾತುಕತೆ ಇವುಗಳಲ್ಲಿ ಗಾಂಭೀರ್ಯ ತಂದುಕೊಳ್ಳುವುದು ಉತ್ತಮ ಇಲ್ಲವಾದಲ್ಲಿ ಎಲ್ಲರ ಮುಂದೆ ಅಪಹಾಸ್ಯಕ್ಕೆ ಗುರಿ ಆಗುವಿರಿ. ನಿರಾಶಾಭಾವವನ್ನು ಬಿಟ್ಟು ಆಶಾಭಾವದಿಂದ ಮುನ್ನಡೆಯಿರಿ

 

 

ದೈನಂದಿನ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆ ಕಂಡುಬರಲಿದೆ. ವ್ಯವಹಾರದಲ್ಲಾಗುವ ಬದಲಾವಣೆ ನಿಮ್ಮ ಹೊಣೆಯನ್ನು ಹೆಚ್ಚಿಸುವುದು. ಬದಲಾವಣೆಯನ್ನು ಮುಕ್ತವಾಗಿ ಸ್ವೀಕರಿಸಿರಿ. ಮಡದಿಯ ಆರೋಗ್ಯದಲ್ಲಿ ಅಲ್ಪಸ್ವಲ್ಪ ವ್ಯತ್ಯಯ ಕಂಡುಬರಲಿದೆ

 

 

ಆರಂಭದಲ್ಲಿ ವೇಗ ಪಡೆದಿದ್ದ ಕೆಲಸಗಳು ಅನಿರೀಕ್ಷಿತವಾಗಿ ವಿಳಂಬವಾಗುವುದು. ಸಂಗಾತಿಯ ಅಭಿಪ್ರಾಯಗಳನ್ನು ಅರಿತು ಕೆಲಸ ಮಾಡುವುದು ಒಳ್ಳೆಯದು. ಸಮಾಜ ಸೇವೆ ನಿಮ್ಮನ್ನು ಕೈ ಬೀಸಿ ಕರೆಯಲಿದೆ.ಆತ್ಮವಿಶ್ವಾಸದ ಕೊರತೆಯನ್ನು ಸ್ನೇಹಿತರು ತುಂಬುವರು.

 

 

ಕೆಲವೊಮ್ಮೆ ನಿಮ್ಮ ಅತಿವಿನಯದಿಂದಲೇ ನಿಮ್ಮನ್ನು ಅಪಾಯಕ್ಕೆ ಸಿಲುಕಿಸುವುದು ಅತಿ ಶೀಘ್ರದಲ್ಲಿ ಶುಭ ಸಮಾಚಾರವೊಂದನ್ನು ಕೇಳುವಿರಿ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುವುದು.

 

 

ಆರೋಗ್ಯದ ಬಗ್ಗೆ ಉದಾಸೀನ ಮಾಡುವುದು ಒಳ್ಳೆಯದಲ್ಲ. ಅನುಭವಿಗಳ ಸಲಹೆ ಪಡೆಯದೇ ಹೊಸ ಯೋಜನೆಗೆ ಕೈಹಾಕಬೇಡಿರಿ. ಬಂಧುಗಳ ಸಹಾಯದಿಂದ ನಿಮ್ಮ ವೈಯಕ್ತಿಕ ಸಮಸ್ಯೆಗಳು ಬಗೆಹರಿಯುವವು.

ಅಂದುಕೊಂಡಿದ್ದನ್ನು ಸಾಧಿಸುವ ಛಲ ನಿಮಗಿದೆ. ಸ್ನೇಹಿತರ ಸಲಹೆಯಂತೆ ನಡೆಯುವುದು ಉತ್ತಮ. ಹಿರಿಯರ ಮಾತನ್ನು ಗೌರವಿಸಿರಿ. ಉತ್ತಮ ಆರೋಗ್ಯ ಕಂಡುಬರಲಿದೆ.ಪ್ರಯಾಣದ ಮುಂಚೆ ಲಕ್ಷ್ಮೀನರಸಿಂಹ ದೇವರನ್ನು ಸ್ಮರಿಸಿರಿ.

 

 

ಮತ್ತಾರದೋ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಹೋಗಿ ನಿಮ್ಮ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳದಿರಿ. ತಾಳ್ಮೆಯ ನಡೆಯು ಸಂಸಾರದಲ್ಲಿ ಸಾಮರಸ್ಯವನ್ನು ಉಂಟು ಮಾಡುವುದು.

 

ಈ ಹಿಂದೆ ಪಟ್ಟ ಶ್ರಮಕ್ಕೆ ಇನ್ನು ಮುಂದೆ ಪ್ರತಿಫಲಗಳು ಗೋಚರಿಸುತ್ತಾ ಹೋಗುವುದು. ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಮಾಡುವುದು ಒಳ್ಳೆಯದು,ಕುಲದೇವತಾ ಆರಾಧನೆಯಿಂದ ಒಳಿತಾಗುವುದು.

 

ಸಂಘರ್ಷದಿಂದ ದೂರ ಇರುವುದು ಒಳ್ಳೆಯದು. ಹೊಸ ವ್ಯಕ್ತಿಗಳ ಸಂಪರ್ಕದಿಂದಾಗಿ ಧನಲಾಭವಾಗಲಿದೆ. ಮಹಿಳೆಯರು ತಮ್ಮ ಮನಸ್ಸು ಭಾವೋದ್ವೇಗಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಉತ್ತಮ. ನಿಮ್ಮ ಹೊಂದಾಣಿಕೆ ಸ್ವಭಾವದಿಂದಾಗಿ ಎಲ್ಲರ ಬೆಂಬಲ ಪಡೆಯುವಿರಿ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top