fbpx
ಸಮಾಚಾರ

ನಟಿ ರಾಧಿಕಾ ಕುಮಾರಸ್ವಾಮಿ ತಂದೆ ವಿಧಿವಶ.

ನಟಿ ರಾಧಿಕಾ ಕುಮಾರಸ್ವಾಮಿ ಅವರ ತಂದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ರಾಧಿಕಾ ಅವರ ತಂದೆ ದೇವರಾಜ್ ಅವರು ಕಿಡ್ನಿ ಹಾಗೂ ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಬೆಂಗಳೂರಿನ ಎನ್‍ಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ರಾಧಿಕಾ ತಂದೆ ದೇವರಾಜ್ ನಿಧನರಾಗಿದ್ದಾರೆ.

 

 

ರಾಧಿಕಾ ತಂದೆ ದೇವರಾಜ್ ಅವರ ಮೃತದೇಹವನ್ನು ಮಂಗಳೂರಿಗೆ ತೆಗೆದುಕೊಂಡು ಹೋಗಿಲಾಗಿದೆ. ಅಲ್ಲಿಯೇ ಅವರ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿದೆ. ರಾಧಿಕಾ ತಂದೆಯವರು ಮಂಗಳೂರಿನಲ್ಲಿಯೇ ನೆಲೆಸಿ ಅಲ್ಲಿಯೇ ಬಿಸನೆಸ್ ಮಾಡಿಕೊಂಡಿದ್ದರು. ಆದರೆ, ಇತ್ತೀಚೆಗೆ ಅವರಿಗೆ ಅನಾರೋಗ್ಯ ಕಾಡಿತ್ತು ಎನ್ನಲಾಗಿದೆ.

ಮಂಗಳೂರಿನ ಸೋಲೆತ್ತೂರು ಗ್ರಾಮದಲ್ಲಿರುವ ರಾಧಿಕಾರ ಮನೆಯಲ್ಲಿ ಕಳೆದ 4 ದಿನಗಳಿಂದ ನೇಮ, ಕೋಲ ಪೂಜೆ ನಡೆಯುತ್ತಿತ್ತು. ಈ ಸಂಭ್ರಮದಲ್ಲಿ ರಾಧಿಕಾರ ಇಡೀ ಕುಟುಂಬ ಭಾಗಿಯಾಗಿದ್ದು, ನಿನ್ನೆ(ಮೇ.18) ರಾಧಿಕಾರ ತಂದೆಯ ಆರೋಗ್ಯ ಹದಗೆಟ್ಟಿತ್ತು. ದೇವರಾಜ್ ಅವರಿಗೆ ಕಫ ಹೆಚ್ಚಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳೂರಿನ ಆಸ್ಪತ್ರೆಯಲ್ಲಿ ಕೊಡಿಸಲಾಗುತ್ತಿದ್ದ ಟ್ರೀಟ್‌ಮೆಂಟ್‌ಗೆ ಅವರ ದೇಹ ಸ್ಪಂದಿಸಿದ ಕಾರಣ, ತಕ್ಷಣವೇ ಅವರನ್ನು ಬೆಂಗಳೂರಿಗೆ ಕರೆತರಲಾಗಿತ್ತು. ಆದರೆ. ಇಲ್ಲಿಯೂ ಸಹ ಅವರ ದೇಹ ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top